ಕರ್ನಾಟಕ

karnataka

ETV Bharat / bharat

ರಸ್ತೆಬದಿ ಪುರುಷ, ಮಹಿಳೆಯ ಮೃತದೇಹ ಪತ್ತೆ; ಹತ್ಯೆ ಶಂಕೆ - ghaziabad

Double murder in Ghaziabad: ಘಾಜಿಯಾಬಾದ್‌ನ ರಸ್ತೆ ಬದಿಯಲ್ಲಿ ಪುರುಷ ಮತ್ತು ಮಹಿಳೆಯ ಶವ ಪತ್ತೆಯಾಗಿದೆ.

ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸರು
ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸರು

By ETV Bharat Karnataka Team

Published : Jan 30, 2024, 2:16 PM IST

ನವದೆಹಲಿ: ಗಾಜಿಯಾಬಾದ್‌ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇಬ್ಬರ ಪೈಕಿ ಓರ್ವನ ತಲೆಗೆ ಗುಂಡು ಹಾರಿಸಿರುವುದು ಕಂಡು ಬಂದಿದೆ. ಮತ್ತೊಂದು ಶವ ಮಹಿಳೆಯದ್ದು ಎಂದು ಗುರುತಿಸಲಾಗಿದೆ. ಇಬ್ಬರು ಮೃತದೇಹಗಳು ಅಕ್ಕಪಕ್ಕದಲ್ಲಿಯೇ ಕಂಡುಬಂದಿವೆ.

ದುಷ್ಕರ್ಮಿಗಳು ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುದ್ದಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆರೋಪಿಗಳಿಗೆ ಶೋಧ ನಡೆಯುತ್ತಿದೆ.

ಮೃತದೇಹಗಳ ಸಮೀಪ ಕಾರು ಪತ್ತೆಯಾಗಿದ್ದು, ಮಾಲೀಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯಕ್ಕೆ ಮೃತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಎರಡೂ ಶವಗಳ ಫೋಟೋಗಳನ್ನು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ಗೊತ್ತಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ವಿಮೆ, ಬ್ಯಾಂಕ್ ಖಾತೆಗೆ ನಾಮಿನಿ ನೀಡದ ಅಧಿಕಾರಿ ಪತ್ನಿ ಕೊಂದ ಪತಿ: 6 ಗಂಟೆ ಶವದ ಜೊತೆ ಕುಳಿತಿದ್ದ ಹಂತಕ!

ABOUT THE AUTHOR

...view details