ಭುವನೇಶ್ವರ, ಒಡಿಶಾ: ಭುವನೇಶ್ವರ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ದಾನಾ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎರಡು 150 ಎನ್ಡಿಆರ್ಎಫ್ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯು ಪಡೆ ಮೂಲಕ ಭುವನೇಶ್ವರಕ್ಕೆ ತಲುಪಿಸಲಾಗಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಡಿಆರ್ಎಫ್ ಸಿಬ್ಬಂದಿ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಒನ್ ಐಎಲ್ 76 ಮತ್ತು ಎಎನ್ 32 ಭಟಿಂಡಾದಿಂದ ಇಂದು ಮುಂಜಾನೆ ಭುವನೇಶ್ವರಕ್ಕೆ ಹೊರಟಿತು.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸೈಕ್ಲೋನ್ ದಾನಾವೂ ಕೇಂದ್ರಪಾರಾದ ಭಿತರ್ಕಾನಿಕಾ ಮತ್ತು ಒಡಿಶಾ ಕರಾವಳಿಯ ಭದ್ರಕ್ ಅಥವಾ ಬಾಲಸೋರ್ ನಡುವೆ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ. ಚಂಡ ಮಾರುತದ ಅತಿಹೆಚ್ಚಿನ ಪರಿಣಾಮವೂ ಬಾಲಸೋರ್, ಭದ್ರಕ್, ಮಯೂರ್‌ಭಂಜ್, ಜಗತ್‌ಸಿಂಗ್‌ಪುರ ಮತ್ತು ಪುರಿ ಜಿಲ್ಲೆಗಳಲ್ಲಿ ಇರಲಿದೆ ಎಂದು ತಿಳಿಸಿದೆ.
ವಾಯುಭಾರ ಕುಸಿತ:ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರದಲ್ಲಿ ವಾಯುಭಾರ ಕುಸಿತದಿಂದ ಪಶ್ಚಿಮ ವಾಯುವ್ಯದ ಕಡೆಗೆ ಗಂಟೆಗೆ 18 ಕಿ.ಮೀ ವೇಗದಲ್ಲಿ ಗಾಳಿ ಸಾಗಲಿದೆ. ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರವಾದ ಚಂಡಮಾರುತ ಅಕ್ಟೋಬರ್ 24 ರ ರಾತ್ರಿ ಮತ್ತು ಬೆಳಗ್ಗೆ ಪುರಿ ಮತ್ತು ಸಾಗರ್ ದ್ವೀಪದ ನಡುವೆ ಹಾಗೂ ಒಡಿಶಾದ ಉತ್ತರ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಅಕ್ಟೋಬರ್ 25 ರಂದು ಚಂಡ ಮಾರುತದ ಗಾಳಿಯು ಗಂಟೆಗೆ 100 ರಿಂದ 110 ಕಿಮೀ ವೇಗದಲ್ಲಿ ಬೀಸಲಿದೆ.