ಕರ್ನಾಟಕ

karnataka

ETV Bharat / bharat

ಸೈಬರ್​ ಅಪರಾಧಗಳ ಹಿಂದೆ ಚೀನಿ ಗ್ಯಾಂಗ್​ಗಳು: ಆನ್​ಲೈನ್​ ವಂಚನೆಯ ಹೊಸ ಮುಖಗಳು - Cyber Invasion by Chinese Gangs - CYBER INVASION BY CHINESE GANGS

ಈ ಗ್ಯಾಂಗ್​ಗಳು ತಮ್ಮ ಕಾರ್ಯಾಚರಣೆಯ ಯಾವುದೇ ಸುಳಿವು ನೀಡದಂತೆ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದು, ಕದ್ದ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ, ಸಾಗರದಾಚೆಗೆ ಸಾಗಿಸುತ್ತಿವೆ.

cyber-invasion-by-chinese-gangs-a-new-face-of-online-fraud
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

By ETV Bharat Karnataka Team

Published : Oct 3, 2024, 12:45 PM IST

ಹೈದರಾಬಾದ್​: ಸೈಬರ್​ ಅಪರಾಧದ ಹೊಸ ಅಲೆ ಭಾರತದೆಲ್ಲೆಡೆ ಕಂಡು ಬಂದಿದ್ದು, ಇದರ ಹಿಂದಿನ ಕೈ ಚೀನಾ ಗ್ಯಾಂಗ್​ಗಳಾದ್ದಾಗಿದೆ. ಕಣ್ಣಿಗೆ ಕಾಣದಂತೆ, ವಿಸ್ತರವಾದ ಮತ್ತು ದೊಡ್ಡ ಪ್ರಮಾಣದ ಲಾಭದೊಂದಿಗೆ ಈ ಗ್ಯಾಂಗ್​ಗಳು ಕಾರ್ಯ ನಿರ್ವಹಿಸುತ್ತಿವೆ. ವಂಚನೆ ಮತ್ತು ಕ್ರಿಪ್ಟೊಕರೆನ್ಸಿ ಪರಿವರ್ತನೆಯಂತಹ ಅತ್ಯಾಧುನಿಕ ಜಾಲದ ಮೂಲಕ ಈ ಗ್ಯಾಂಗ್​​ಗಳು ಕೋಟ್ಯಂತರ ರೂಪಾಯಿಗಳನ್ನು ವಿದೇಶಗಳಿಗೆ ಸಾಗಿಸುತ್ತಿದ್ದಾರೆ. ಈ ತಂಡಗಳ ಚಟುವಟಿಕೆಗಳನ್ನು ಪತ್ತೆ ಹಚ್ಚಲು ತನಿಖೆಗಳಿಗೂ ಸಾಧ್ಯವಾಗುತ್ತಿಲ್ಲ.

ಚೀನಾ ಅಪರಾಧಿಗಳ ಮಾಸ್ಟರ್​ಮೈಂಡ್​ ಹೊರತಾಗಿ, ಈ ಗ್ಯಾಂಗ್​ಗಳು ತಮ್ಮ ಕಾರ್ಯಾಚರಣೆಯ ಯಾವುದೇ ಸುಳಿವು ನೀಡದಂತೆ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದು, ಕದ್ದ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಸಾಗರದಾಚೆಗೆ ಸಾಗಿಸುತ್ತಿವೆ. ಇದರಿಂದ ಕಾನೂನು ಜಾರಿ ಏಜೆನ್ಸಿಗಳಿಗೂ ಕೂಡ ಈ ಅಕ್ರಮ ಚಟುವಟಿಕೆ ಪತ್ತೆ ಮಾಡಲು ಕಷ್ಟಸಾಧ್ಯವಾಗಿದೆ. ಇತ್ತೀಚಿನ ತನಿಖೆಯ ಪ್ರಕಾರ, ಈ ಕಾರ್ಯಾಚರಣೆಗಳು ಲಾವೋಸ್, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್​ನ ಗಡಿಯಲ್ಲಿರುವ 'ಗೋಲ್ಡನ್ ಟ್ರಯಾಂಗಲ್'ಗೆ ಸೇರಿದ ದೊಡ್ಡ ಸೈಬರ್ ಕ್ರೈಮ್ ರಾಕೆಟ್‌ನ ಭಾಗವಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಉದ್ಯೋಗದ ಆಮಿಷದ ವಂಚನೆ: ಈ ಅಪರಾಧಿ ಗ್ಯಾಂಗ್​ಗಳು ಯುವ ಜನರಿಗೆ ಅನುಮಾನ ಬಾರದಂತೆ ಅವರನ್ನು ಟ್ರಾಪ್​ ಭಾಗವಾಗಿಸಿಕೊಳ್ಳುತ್ತಿವೆ. ಕಾಲ್ ಸೆಂಟರ್ ಅಥವಾ ಡೇಟಾ ಎಂಟ್ರಿಯಂತಹ ಕೆಲಸಕ್ಕೆ ಆಕರ್ಷಕ ವೇತನದ ಉದ್ಯೋಗ ಜಾಹೀರಾತುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುತ್ತದೆ, ಉದ್ಯೋಗವನ್ನು ಹುಡುಕುತ್ತಿರುವವರನ್ನು ಗುರಿಯಾಗಿಸಿ ವಂಚನೆ ನಡೆಸಲಾಗುತ್ತದೆ. ಇಂತಹ ವಂಚನೆಗಳಲ್ಲಿ ಯುವಕರು ಗೋಲ್ಡನ್ ಟ್ರಯಾಂಗಲ್​ನ ವಿಮಾನ ನಿಲ್ದಾಣಗಳಲ್ಲಿ ಇಳಿದ ತಕ್ಷಣ, ಗ್ಯಾಂಗ್ ಸದಸ್ಯರು ಅವರನ್ನು ಭೇಟಿಯಾಗುತ್ತಾರೆ, ಅವರು ಅವರ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದು, ದೂರದ ಸ್ಥಳಗಳಿಗೆ ಕರೆದೊಯ್ಯುತ್ತಾರೆ.

ಅವರಿಗೆ 15 ದಿನಗಳ ಕಾಲ ಸೈಬರ್​ ಅಪರಾಧದ ಚಟುವಟಿಕೆಯ ತರಬೇತಿ ನೀಡುತ್ತಾರೆ. ಅವರಿಗೆ ಅನೇಕ ಆನ್​ಲೈನ್​ ವಂಚನೆ ತಂತ್ರಜ್ಞಾನವನ್ನು ಹೇಳಿಕೊಡುತ್ತಾರೆ. ಜೊತೆಗೆ ಸೈಬರ್​ ಅಪರಾಧ ಮಾಡುವಂತೆ ಒತ್ತಡ ತರುತ್ತಾರೆ. ಈ ವೇಳೆ ಕೃತ್ಯ ಎಸಗಲು ನಿರಾಕರಿಸಿದರೆ, ಅವರಿಗೆ ಬೆದರಿಕೆ ಮತ್ತು ಹಿಂಸೆ ನೀಡಲಾಗುತ್ತದೆ. ಭಾರತದ ರಾಯಭಾರಿಗಳ ಸಂಪರ್ಕಕ್ಕೆ ಒಳಗಾದವರು, ಇದರಿಂದ ಬಚಾವ್ ಆಗಬಹುದಾಗಿದೆ.

ಮನಿ ಲಾಂಡರಿಂಗ್​ ಮತ್ತು ಕ್ರಿಪ್ಟೋಕರೆನ್ಸಿ: ಆನ್‌ಲೈನ್ ವಂಚನೆಗಳ ಮೂಲಕ ಸಂತ್ರಸ್ತರಿಂದ ವಂಚಿಸಿದ ಹಣವನ್ನು ಆರಂಭದಲ್ಲಿ ಸ್ಥಳೀಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಅಲ್ಲಿಂದ, ಅನೇಕ ಖಾತೆಗಳ ಮೂಲಕ ವರ್ಗಾಯಿಸುವ ಮೂಲಕ ತನಿಖಾಧಿಕಾರಿಗಳನ್ನು ಗೊಂದಲಗೊಳಿಸಲಾಗುವುದು. ಇದಕ್ಕಾಗಿ ಸಣ್ಣ ಅವಧಿಗಗಾಗಿ ತಮ್ಮ ಹೆಸರಿನಲ್ಲಿ ಕೆಲವರು ಖಾತೆ ತೆರೆಯುತ್ತಾರೆ. ಅನೇಕ ಬಾರಿ ಇವರು ಪೊಲೀಸರ ಬಂಧನಕ್ಕೆ ಒಳಗಾಗುತ್ತಾರೆ. ಇವರಿಗೆ ಈ ದೊಡ್ಡ ಯೋಜನೆ ಮತ್ತು ಗ್ಯಾಂಗ್​ ಕಾರ್ಯಾಚರಣೆ ಮಾಹಿತಿ ಲಭ್ಯ ಇರುವುದಿಲ್ಲ.

ಎರಡು ದಿನದ ಹಿಂದೆ, ಈ ರೀತಿಯ 27 ಖಾತೆದಾರರನ್ನು ರಾಜಸ್ಥಾನದಲ್ಲಿ ತೆಲಂಗಾಣ ಸೈಬರ್​ ಸೆಕ್ಯೂರಿಟಿ ಬ್ಯೂರೋ ಬಂಧಿಸಿದೆ. ಇವರು ಅತಿ ದೊಡ್ಡ ಕಾರ್ಯಾಚರಣೆಯ ಕೇವಲ ಒಂದು ಭಾಗವಷ್ಟೇ. ಇದರ ಹಿಂದಿನ ನಿಜವಾದ ಮಾಸ್ಟರ್​ಮೈಂಡ್​ಗಳು ಪತ್ತೆಯಾಗುವುದಿಲ್ಲ. ಇವರು ಹಣವನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಿ, ಅದನ್ನು ತಮ್ಮ ವಿದೇಶಿ ಖಾತೆಯಲ್ಲಿ ಇಡುತ್ತಾರೆ. ಇದರಿಂದ ತನಿಖಾ ಏನ್ಸಿನಿಗೆ ಇದರ ಮೂಲ ಪತ್ತೆ ಪ್ರಯತ್ನ ಬಲು ಕಷ್ಟವಾಗುತ್ತದೆ.

14ಸಿಗೆ ಸವಾಲಾಗುವ ಅಂಶಗಳು: ಭಾರತೀಯ ಸೈಬರ್​ಕ್ರೈಂ ಕೋರ್ಡಿನೇಷನ್ ​ ಪ್ರಕಾರ ಈ ವಂಚನೆ ಸಮಸ್ಯೆ ಅಗಾಧವಾಗಿದೆ. ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಧಿಕಾರಿಗಳು ಈ ರೀತಿ 3.25 ಲಕ್ಷ ಸಣ್ಣ ಸಣ್ಣ ಖಾತೆ ವಶಕ್ಕೆ ಪಡೆದಿದ್ದಾರೆ. ಜೊತೆಗೆ 3 ಲಕ್ಷ ಯುಆರ್​ಎಲ್​ಗಳು ಮತ್ತು 595 ಆ್ಯಪ್​ಗಳನ್ನು ಬ್ಲಾಕ್​ ಮಾಡಲಾಗಿದೆ. 5.3 ಲಕ್ಷ ಸಿಮ್​ ಕಾರ್ಡ್​ ಮತ್ತು 80,848 ಐಎಂಇಐ ನಂಬರ್​ಗಳನ್ನು ಅಮಾನತು ಮಾಡಲಾಗಿದೆ.

ನ್ಯಾಷನಲ್​ ಸೈಬರ್​ಕ್ರೈಂ ರಿಪೋರ್ಟಿಂಗ್​ ಪೋರ್ಟಲ್​ (ಎನ್​ಸಿಆರ್​ಪಿ) ದಿನಕ್ಕೆ ಅಂದಾಜು 7000 ದೂರನ್ನು ಸ್ವೀಕರಿಸುತ್ತದೆ. ಇದರಲ್ಲಿ ಶೇ 85ರಷ್ಟು ಆನ್​ಲೈನ್​ ಆರ್ಥಿಕ ವಂಚನೆಗಳದ್ದೇ ಆಗಿದೆ. ಈ ದೂರುಗಳು ಬಹುತೇಕ ಸೈಬರ್​ ಗ್ಯಾಂಗ್​ಗಳು ವಿಶೇಷವಾಗಿ ಚೀನಾ ಸಂಬಂಧಿಸಿದ ಗ್ಯಾಂಗ್​ಗಳು ಬೆಳೆಯುತ್ತಿರುವ ಬೆದರಿಕೆಯನ್ನು ತಿಳಿಸುತ್ತದೆ.

ಆರ್ಥಿಕ ನಷ್ಟ: ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಸೈಬರ್​ ಅಪರಾಧಿಗಳು 70,61,51 ಕೋಟಿಯನ್ನು ವಂಚಿಸಿದ್ದು, ಅದೃಷ್ಟವಶಾತ್​ ಕೆಲವು ಸಂತ್ರಸ್ತರು ಗೋಲ್ಡನ್​ ಅವರ್​ನಲ್ಲಿ ಈ ಕುರಿತು ಮಾಹಿತಿ ನೀಡಿದ ಹಿನ್ನಲೆ ಅವರಿಗೆ ಸಹಾಯ ಮಾಡಲು ಸಾಧ್ಯವಾಗಿದ್ದು, 812.72 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದಾಗ್ಯೂ ಇನ್ನೂ ಗಮನಾರ್ಹ ಪ್ರಮಾಣದ ಹಣಗಳು ತಕ್ಷಣಕ್ಕೆ ಕ್ರಿಪ್ಟೋಕರೆನ್ಸಿಯಾದ ಹಿನ್ನಲೆ ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಅಂತಾರಾಷ್ಟ್ರೀಯ ಪರಿಣಾಮ: ಈ ಚೀನಾ ನೇತೃತ್ವದ ಸೈಬರ್​ ಗ್ಯಾಂಗ್​ಗಳು ಭಾರತದಿಂದ ಕಾರ್ಯಾಚರಣೆ ಮಾಡುವುದಿಲ್ಲ. ಬದಲಾಗಿ, ಕಾಂಬೋಡಿಯಾ, ಪಿಲಿಫೈನ್ಸ್​, ಮಲೇಷ್ಯಾ, ಸಿಂಗಾಪೂರ್​ನಂತಹ ಆಗ್ನೇಯ ಏಷ್ಯಾದಿಂದ ಕಾರ್ಯಾಚರಣೆ ಮಾಡುತ್ತವೆ. ಪೋನೊಮ್​ ಫೆನ್. ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿಗಳು ಈ ವಂಚನೆ ಗ್ಯಾಂಗ್​ನಲ್ಲಿ ಸಿಲುಕಿರುವ 360 ಭಾರತೀಯರ ರಕ್ಷಣೆ ಮಾಡಿದ್ದಾರೆ. ಇಂತಹ ಗ್ಯಾಂಗ್​ನಿಂದ ಮುಕ್ತಿ ಪಡೆದವರು ಹೇಳುವ ಪ್ರಕಾರ, ಕಾಂಬೋಡಿಯಾ ಮತ್ತು ಮಯಾನ್ಮರ್​ ಗಡಿಗಳಲ್ಲಿ ಈ ರೀತಿ ಸೈಬರ್​ ಅಪರಾಧದ ಚಟುವಟಿಕೆ ನಡೆಸುವ ಗ್ಯಾಂಗ್​ಗಳಲ್ಲಿ ಸುಮಾರು 5 ಸಾವಿರ ಭಾರತೀಯರು ಸಿಲುಕಿದ್ದಾರೆ.

ಮುಂದಿನ ಮಾರ್ಗ: ಸೈಬರ್​ ಅಪರಾಧಿಗಗಳು ಅಕ್ರಮ ಹಣ ಸಾಗಾಣೆಗೆ ಕ್ರಿಪ್ಟೋಕರೆನ್ಸಿಯಾಗಿ ಕದ್ದ ಹಣವನ್ನು ಬಳಕೆ ಮಾಡುತ್ತಿದ್ದು, ಇದನ್ನು ಭೇದಿಸುವುದು ತನಿಖಾ ಸಂಸ್ಥೆಗಳಿಗೆ ಸವಾಲುದಾಯಕವಾಗಿದೆ. ಈ ಗ್ಯಾಂಗ್​ಗಳು ತಮ್ಮ ಜಾಲವನ್ನು ಗಡಿಗಳಲ್ಲಿ ವಿಸ್ತರಿಸಿಕೊಂಡಿದ್ದು, ಇದನ್ನು ಭೇದಿಸಲು ಅಂತಾರಾಷ್ಟ್ರೀಯ ಸಹಕಾರ ಬೇಕಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಇತ್ತೀಚಿನ ಬಹಿರಂಗಪಡಿಸಿದಂತೆ, ಈ ಸೈಬರ್ ಕ್ರೈಮ್ ನೆಟ್‌ವರ್ಕ್‌ಗಳು ಎಷ್ಟು ಆಳವಾಗಿ ಮತ್ತು ಸಂಘಟಿತವಾಗಿವೆ.

ಇದನ್ನೂ ಓದಿ: ಎಚ್ಚರ ನಿಮಗೂ ಹೀಗಾಗಬಹುದು: ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಸೈಬರ್ ಖದೀಮರು!

ABOUT THE AUTHOR

...view details