ಬಿಹಾರ: ಯಾರೋ ದುಷ್ಕರ್ಮಿಗಳು ಬಿಹಾರದ ಭಾಗಲ್ಪುರದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರನ್ನು ಸಜೀವ ದಹನ ಮಾಡಲು ಯತ್ನಿಸಿದ್ದಾರೆ. ಜಿಲ್ಲೆಯ ನವ್ಗಾಚಿಯಾ ರಂಗಾ ಒಪಿ ವ್ಯಾಪ್ತಿಯ ಮುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ತಂಡ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಘಟನೆಯಲ್ಲಿ ಓರ್ವ ವ್ಯಕ್ತಿ ಸೇರಿದಂತೆ ಮೂವರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ. ನಾಲ್ವರು ಮಾಯಾಗಂಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಯಗಂಜ್‌ನಲ್ಲಿ ಚಿಕಿತ್ಸೆ:ಘಟನೆಯಲ್ಲಿ ದಾದಾ ವಿದ್ಯಾನಂದ್ ಮತ್ತು ಅವರ ಮೊಮ್ಮಗಳಿಗೆ ಗಂಭೀರದ ಸುಟ್ಟ ಗಾಯಗಳಾಗಿದ್ದು, ಮಾಯಗಂಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರೆದಿದೆ.
ಮಲಗಿದ್ದಾಗ ಬೆಂಕಿ ಹಚ್ಚಿದ ದುಷ್ಕರ್ಮಿಗಳು:ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದರು. ಈ ವೇಳೆ ಮನೆಗೆ ಬಂದ ದುಷ್ಕರ್ಮಿಗಳು, ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಚೀರಾಟ ಮತ್ತು ಕೂಗಾಟ ಕೇಳಿ ಓಡೋಡಿ ಬಂದ ಸ್ಥಳೀಯರು, ತಕ್ಷಣ ಅವರನ್ನು ನವ್‌ಗಾಚಿಯಾ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾಗಶಃ ಸುಟ್ಟಿದ್ದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇತ್ತು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಅವರನ್ನು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಾಯಾಗಂಜ್‌ಗೆ ರವಾನಿಸಲಾಗಿದೆ.
ರಾತ್ರಿ 2 ಗಂಟೆಗೆ ಬೆಂಕಿ: ಗ್ರಾಮದ ಯಾರೋ ಒಂದಿಬ್ಬರು ಈ ಕೃತ್ಯ ಎಸಗಿರುವ ಶಂಕೆ ಇದೆ. ಆರೋಪಿಗಳ ಪತ್ತೆಗಾಗಿ ಶೋಧ ನಡೆದಿದೆ. ವೈಯಕ್ತಿಕ ಕಲಹದಿಂದ ಕೊಲೆಗೆ ಯತ್ನಿಸಿರಬಹುದು ಎಂಬ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಮನೆಗೆ ಬಂದ ಆರೋಪಿಗಳು, ಮಲಗಿದ್ದ ವಿದ್ಯಾನಂದ್ ಸಿಂಗ್ ಹಾಗೂ ಮೂವರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನವ್ಗಾಚಿಯಾ ಎಸ್ಪಿ ಪುರಾನ್ ಝಾ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೂಡಾ ನಡೆಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಯುವಕನ ಬರ್ಬರ ಹತ್ಯೆ, ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ