ಜೈಪುರ, ರಾಜಸ್ಥಾನ: ಸೋಮವಾರ ಮಧ್ಯಾಹ್ನ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಬಾಲಕಿಯನ್ನು ಜೀವಂತವಾಗಿ ಮೇಲೆ ತರಲು ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 18 ಗಂಟೆಗಳಿಂದ ರಕ್ಷಣಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ನಾವು ಬಾಲಕಿಯನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೊಳವೆ ಬಾವಿಯಲ್ಲಿ ಅವಳು ಸಿಲುಕಿಕೊಂಡಿರುವ ಜಾಗದಲ್ಲಿ ಕೆಸರು ತುಂಬಿಕೊಂಡಿದೆ. ಹೀಗಾಗಿ ಅವಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಎಸ್ ಡಿಆರ್ ಎಫ್ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಹೇಳಿದ್ದಾರೆ.
ನಾವು ನಮ್ಮ ಕೈಲಾದಷ್ಟು ನಮ್ಮ ಪಯತ್ನ ಮಾಡುತ್ತಿದ್ದೇವೆ. ಬೋರ್‌ವೆಲ್ ಒಳಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನೊಂದು ಕಡೆ ಉಂಗುರ ತೊಡಿಸಿ ಬಾಲಕಿಯನ್ನು ಹೊರತರುವ ಪ್ರಯತ್ನವೂ ನಡೆಯುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಬಾಲಕಿ ಮೇಲಕ್ಕೆ ಕರೆ ತರಲು ಕೆಳಗೆ ಉಂಗುರ ಇರಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಇದೇ ಕಾರಣಕ್ಕೆ ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ.
ಘಟನೆಯ ವಿವರ: ಸೋಮವಾರ ಮಧ್ಯಾಹ್ನ 1:30ರ ಸುಮಾರಿಗೆ ಮೂರೂವರೆ ವರ್ಷದ ಬಾಲಕಿ ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಬೋರ್‌ವೆಲ್‌ಗೆ ಬಿದ್ದಿದ್ದಳು. ಆರಂಭದಲ್ಲಿ 15 ಅಡಿ ಆಳದಲ್ಲ ಸಿಲುಕಿಕೊಂಡ ಮಗು ಬಳಿಕ ಸುಮಾರು 150 ಅಡಿ ಆಳಕ್ಕೆ ತಲುಪಿದೆ ಎನ್ನಲಾಗಿದೆ.
ಎರಡು ಬಾರಿ ರಕ್ಷಣಾ ಯತ್ನ ವಿಫಲ: ಸ್ಥಳದಲ್ಲಿದ್ದ ರಕ್ಷಣಾ ತಂಡ ಜುಗಾಡ್ ಮೂಲಕ ಬಾಲಕಿಯನ್ನು ಹೊರ ತೆಗೆಯಲು ಯತ್ನಿಸುತ್ತಿದೆ. ಇದಕ್ಕಾಗಿ ಬೋರ್‌ವೆಲ್‌ಗೆ ಕೊಕ್ಕೆ ಹಾಕಲಾಗುತ್ತಿದೆ. ಆದರೆ, ಸ್ಥಳೀಯ ಜುಗಾಡ್ ಬಳಸಿ ಬಾಲಕಿಯನ್ನು ಹೊರತೆಗೆಯುವ ಪ್ರಯತ್ನ ಎರಡು ಬಾರಿ ವಿಫಲವಾಗಿದೆ. ಸದ್ಯ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಮತ್ತೆ ರಕ್ಷಣಾ ತಂಡ ಜುಗಾಡ್ ಮೂಲಕ ಬಾಲಕಿಯನ್ನು ರಕ್ಷಿಸಲು ಯತ್ನಿಸುತ್ತಿದೆ. ಬಾಲಕಿ ಬೋರ್ ವೆಲ್ ಗೆ ಬೀಳುವ ಸಂದರ್ಭದಲ್ಲಿ ಅದರೊಂದಿಗೆ ಮಣ್ಣು ಕೂಡ ಇಳಿಯುತ್ತಿರುವುದರಿಂದ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ.