ಕರ್ನಾಟಕ

karnataka

ETV Bharat / bharat

ಹಿಮಾಚಲದಲ್ಲಿ ಸೋತಿದ್ದ ಅಭಿಷೇಕ್ ಮನು​ ಸಿಂಘ್ವಿ ತೆಲಂಗಾಣದಿಂದ ರಾಜ್ಯಸಭೆಗೆ ಸ್ಪರ್ಧೆ - Abhishek Manu Singhvi - ABHISHEK MANU SINGHVI

ಫೆಬ್ರವರಿಯಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಿಂದ ಸ್ಪರ್ಧಿಸಿ ತಮ್ಮದೇ ಪಕ್ಷದ ಶಾಸಕರ ಅವಕೃಪೆಗೆ ಗುರಿಯಾಗಿ ಸೋತಿದ್ದ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಅವರು ಗೆಲುವು ಪಕ್ಕಾ ಇರುವ ತೆಲಂಗಾಣದಿಂದ ಸ್ಪರ್ಧಿಸುತ್ತಿದ್ದಾರೆ.

ಅಭಿಷೇಕ್​ ಮನು ಸಿಂಘ್ವಿ ಗೆಲುವು ಅರಸಿ ತೆಲಂಗಾಣದಿಂದ ರಾಜ್ಯಸಭೆಗೆ ಸ್ಪರ್ಧೆ
ಅಭಿಷೇಕ್​ ಮನು ಸಿಂಘ್ವಿ ಗೆಲುವು ಅರಸಿ ತೆಲಂಗಾಣದಿಂದ ರಾಜ್ಯಸಭೆಗೆ ಸ್ಪರ್ಧೆ (ANI)

By ANI

Published : Aug 14, 2024, 9:50 PM IST

ನವದೆಹಲಿ:ತೆರವಾಗಿರುವ ಒಂಬತ್ತು ರಾಜ್ಯಗಳ 12 ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ನಡೆಸಲು ಮುಹೂರ್ತ ಫಿಕ್ಸ್​ ಮಾಡಿದ್ದು, ಸೆಪ್ಟೆಂಬರ್ 3 ರಂದು ಮತದಾನ ನಡೆಯಲಿದೆ. ತೆಲಂಗಾಣದ ಒಂದು ಸ್ಥಾನ ಖಾಲಿ ಇದ್ದು, ಇದಕ್ಕೆ ಹಿರಿಯ ವಕೀಲರಾಗಿರುವ ಅಭಿಷೇಕ್​ ಮನು ಸಿಂಘ್ವಿ ಅವರನ್ನು ಕಾಂಗ್ರೆಸ್​ ತನ್ನ ಉಮೇದುವಾರಿಯನ್ನಾಗಿ ಘೋಷಿಸಿದೆ.

ಈ ಬಗ್ಗೆ ಎಐಸಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತೆಲಂಗಾಣದಿಂದ ರಾಜ್ಯಸಭೆ ಉಪಚುನಾವಣೆಗೆ ಪಕ್ಷದ ಮುಖಂಡ ಅಭಿಷೇಕ್​ ಮನು ಸಿಂಘ್ವಿ ಅವರು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದೆ. ತೆಲಂಗಾಣದಿಂದ ರಾಜ್ಯಗಳ ಪರಿಷತ್ತಿಗೆ ಮುಂದಿನ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಭಿಷೇಕ್ ಮನು ಸಿಂಘ್ವಿ ಅವರ ಉಮೇದುವಾರಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ದೃಢಪಡಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಹಿಮಾಚಲ ಪ್ರದೇಶದಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಭಿಷೇಕ್ ಮನು ಸಿಂಘ್ವಿ ಅವರು ಸೋತಿದ್ದರು. ಕಾಂಗ್ರೆಸ್​ನ ಅತೃಪ್ತ ಶಾಸಕರು ಅಡ್ಡಮತದಾನ ಹಾಕಿದ್ದರಿಂದ ಸಿಂಘ್ವಿ ಅವರಿಗೆ ಸೋಲಾಗಿತ್ತು. ಪ್ರಮುಖ ನಾಯಕನನ್ನು ಮತ್ತೆ ರಾಜ್ಯಸಭೆಗೆ ಕಳುಹಿಸಬೇಕು ಎಂದು ಇದೀಗ ಪಕ್ಷ ಆಡಳಿತದಲ್ಲಿರುವ ತೆಲಂಗಾಣದಿಂದ ಕಣಕ್ಕಿಳಿಸಿದೆ.

ಬಿಆರ್​​ಎಸ್​ ಪಕ್ಷದ ರಾಜ್ಯಸಭೆ ಸದಸ್ಯರಾಗಿದ್ದ ಕೆ.ಕೇಶವ್​ ರಾವ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಇದರಿಂದ ಈ ಸ್ಥಾನ ಖಾಲಿಯಾಗಿದೆ. ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಪಕ್ಷ ಆಡಳಿತದಲ್ಲಿದ್ದು, ಇಲ್ಲಿ ಕಾಂಗ್ರೆಸ್​ ಗೆಲುವು ನಿಶ್ಚಿತವಾಗಿದೆ. ಹೀಗಾಗಿ ಸಿಂಘ್ವಿ ಅವರು ಗೆಲ್ಲುವುದು ಕೂಡ ಪಕ್ಕಾ ಆಗಿದೆ.

ರಾಜ್ಯಸಭೆಯಲ್ಲಿ ಬಹುಮತದತ್ತ ಎನ್​ಡಿಎ:ಪ್ರಸ್ತುತ 229 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿ 87 ಸಂಸದರನ್ನು ಹೊಂದಿದ್ದರೆ, ಮಿತ್ರಪಕ್ಷಗಳೊಂದಿಗೆ ಈ ಸಂಖ್ಯೆ 105 ಆಗಿದೆ. ಸಾಮಾನ್ಯವಾಗಿ ಸರ್ಕಾರದೊಂದಿಗೆ ಮತ ಚಲಾಯಿಸುವ ಆರು ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿದರೆ ಎನ್​ಡಿಎ ಬಲ 111 ರಷ್ಟಿದೆ. ಇದು ಮ್ಯಾಜಿಕ್​ ನಂಬರ್​ 115ರ ಸಂಖ್ಯೆಗೆ ನಾಲ್ಕು ಸ್ಥಾನ ಕಡಿಮೆಯಿದೆ.

ಮೇಲ್ಮನೆಯಲ್ಲಿ ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದೆ. ಅದರ ಮಿತ್ರಪಕ್ಷಗಳ 58 ಸದಸ್ಯರನ್ನು ಸೇರಿಸಿದರೆ, ಇಂಡಿಯಾ ಮೈತ್ರಿಕೂಟದ ಸಂಖ್ಯೆ 84 ರಷ್ಟಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ 11 ಸದಸ್ಯರನ್ನು ಹೊಂದಿದ್ದರೆ, ಬಿಜೆಡಿ 8 ಸದಸ್ಯರನ್ನು ಹೊಂದಿದೆ. ಸೆಪ್ಟೆಂಬರ್ 3 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಇನ್ನಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಬಹುಮತ ಹೊಂದಲಿದೆ.

ಇದನ್ನೂ ಓದಿ:ರಾಜ್ಯಸಭೆ ಸಭಾನಾಯಕರಾಗಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ನೇಮಕ - J P Nadda

ABOUT THE AUTHOR

...view details