ಲಖನೌ, ಉತ್ತರಪ್ರದೇಶ: 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಕುರಿತು ಅನೇಕ ವಿಶ್ಲೇಷಣೆಗಳು ನಡೆಯತ್ತಿವೆ. ಇದರಲ್ಲಿ ಪ್ರಮುಖವಾಗಿರುವುದು ರಾಜ್ಯದಲ್ಲಿ ಸಂಘದ ಕಾರ್ಯದ ವಿಸ್ತರಣೆಯ ಗುರಿ ಅಪೂರ್ಣವಾಗಿರುವುದೂ ಕೂಡಾ ಒಂದು. ಸಂಘ ಹಾಕಿಕೊಂಡ ಗುರಿಯನ್ನು ತಲುಪಲಾಗದೇ ಇರುವುದು ಉತ್ತರಪ್ರದೇಶದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಸಂಘದ ನಾಯಕರು ಕಳವಳ ವ್ಯಕಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರಚಾರಕದ ಸಭೆಯಲ್ಲಿ ಈ ಕುರಿತು ಆತಂಕ ವ್ಯಕ್ತವಾಗಿದೆ. ಬುಧವಾರದಿಂದ ಉತ್ತರಪ್ರದೇಶದ ರಾಜಧಾನಿ ಲಖನೌದ ನಿರಲ ನಗರ್ನಲ್ಲಿನ ಸರಸ್ವತಿ ಶಿಶು ಮಂದಿರದಲ್ಲಿ ಮಹತ್ವದ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಸರಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗಿಯಾಗಿದ್ದಾರೆ. ಸಭೆಯಲ್ಲಿ ಕುಟುಂಬ ಜ್ಞಾನ ಸೇರಿದಂತೆ ಇತರ ವಿಷಯಗಳ ಚರ್ಚೆ ನಡೆಯಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡಿದೆ. 2025ರ ವಿಜಯದಶಮಿಯಿಂದ ಸಂಘದ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿದೆ. ಆದರೂ ಉತ್ತರ ಭಾಗದ ಉತ್ತರ ಪ್ರದೇಶದಲ್ಲಿ ಸಂಘದ ವಿಸ್ತರಣೆ ಕಾರ್ಯದ ಗುರಿ ಹಾಗೆಯೇ ಉಳಿದಿದೆ. 2022ರಲ್ಲಿ ಈ ಸಂಬಂಧ ಪ್ರಯಾಗ್ರಾಜ್ನಲ್ಲಿನ ಕಾರ್ಯಕಾರಿ ಮಂಡಳಿ ಸಭೆ ನಡೆಸಲಾಗಿತ್ತು.
ಈ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಂಘದ ಕಾರ್ಯವನ್ನು ಮಂಡಲ್ ಮಟ್ಟದಲ್ಲಿ ಆರಂಭಿಸುವ ಕುರಿತು ಗುರಿ ಹೊಂದಲಾಗಿತ್ತು. ಆದರೆ, ರಾಜ್ಯದ ಉತ್ತರ ಭಾಗದಲ್ಲಿ ಮಂಡಲ್ ಮಟ್ಟದಲ್ಲಿ ಸಂಘದ ಕೆಲಸವನ್ನು ಮುಟ್ಟಿಸುವಲ್ಲಿ ವಿಫಲವಾಗಿದೆ. ಮಂಡಲ್ ಮಟ್ಟದಲ್ಲಿ ಅನೇಕ ಬ್ರಾಂಚ್ಗಳ ಕೊರತೆ ಇರುವುದು ಕೂಡ ಸಂಘದ ಪ್ರಮುಖ ನಾಯಕರ ಚಿಂತೆಗೆ ಕಾರಣವಾಗಿದೆ. ಇದರಿಂದ ಸಂಘದ ಅನೇಕ ಪ್ರಯತ್ನಗಳ ಹೊರತಾಗಿಯುವ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಲ್ಲ. ಪರಿಣಾಮ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಸಂಘ ಸಾರ್ವಜನಿಕ ಅಭಿಪ್ರಾಯವನ್ನು ಪರಿಷ್ಕರಿಸುವ ಕೆಲಸ ಮಾಡಿತ್ತು. ಇದಕ್ಕಾಗಿ ಪ್ರತಿ ಲೋಕಸಭಾದಲ್ಲಿ 10 ಸಾವಿರ ಡ್ರಾಯಿಂಗ್ ರೂಮ್ ಸೆಮಿನಾರ್ ನಡಸಲಾಗಿತ್ತು. ಆದರೆ, ಪೂರ್ವಾಂಚಲದಲ್ಲಿ ಮಂಡಲ್ ಮಟ್ಟದಲ್ಲಿ ಅಂದುಕೊಂಡಂತೆ ಕೆಲಸ ನಡೆಯದ ಹಿನ್ನೆಲೆ ಈ ಸಭೆಯನ್ನು ನಡೆಸಲಾಗಿತ್ತು. ಲಖನೌ ಮತ್ತು ಕಾಶಿಯಂತಹ ನಗರದಲ್ಲಿ ಮತದಾನದ ಶೇಖಡಾವಾರು ಪ್ರಮಾಣ ಕಡಿಮೆ ಆಗಿದೆ. ಚುನಾವಣಾ ಫಲಿತಾಂಶ ಮತ್ತು ಮತದಾನದ ಶೇಕಡಾವಾರು ಗಮನಿಸಿದಾಗ ಕಾಶಿ ಪ್ರಾಂತ್ಯದಲ್ಲೇ ಅತ್ಯಂತ ಕಳಪೆ ಮತದಾನ ಆಗಿರುವುದು ಕಂಡು ಬಂದಿದೆ.