ಕರ್ನಾಟಕ

karnataka

ETV Bharat / bharat

₹50 ಸಾವಿರದಿಂದ ಹೂಡಿಕೆ ಪ್ರಾರಂಭಿಸಿ ₹1 ಕೋಟಿ ಕಳೆದುಕೊಂಡ ಸಿವಿಲ್ ಇಂಜಿನಿಯರ್​! - ENGINEER LOSES ONE CRORE IN FRAUD

ಸ್ಟಾಕ್​ ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡಿದೆರೆ ಹೆಚ್ಚು ಲಾಭಾಂಶ ಕೂಡುವುದಾಗಿ ನಂಬಿಸಿ ಹೈದರಾಬಾದ್​ನ ಸಿವಿಲ್ ಇಂಜಿನಿಯರ್​ನಿಂದ ಸೈಬರ್​ ವಂಚಕರು ಒಂದು ಕೋಟಿ ಲಪಟಾಯಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 12, 2024, 4:54 PM IST

ಹೈದರಾಬಾದ್(ತೆಲಂಗಾಣ):ಸೈಬರ್​ ವಂಚಕರು ಸ್ಟಾಕ್​ ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಕೂಡುವುದಾಗಿ ನಂಬಿಸಿ ಹೈದರಾಬಾದ್​ನ ಸಿವಿಲ್ ಇಂಜಿನಿಯರ್​ನಿಂದ ಒಂದು ಕೋಟಿ ರೂಪಾಯಿ ದೋಚಿರುವ ಘಟನೆ ನಡೆದಿದೆ.

ನಕಲಿ ಆ್ಯಪ್ ನಂಬಿ ಮೊದಲು 50 ಸಾವಿರದಿಂದ ಹೂಡಿಕೆ ಆರಂಭಿಸಿದ್ದ ಇಂಜಿನಿಯರ್,​ ವರ್ಚುಯಲ್​ನಲ್ಲಿ ಕಾಣಿಸುವ ಲಾಭವನ್ನು ನಿಜವೆಂದು ಭಾವಿಸಿ ವಂಚಕರಿಗೆ ಹಣ ವರ್ಗಾಯಿಸಿದ್ದರು. ಆ್ಯಪ್​ನಲ್ಲಿ ಒಟ್ಟು 9.3 ಕೋಟಿ ರೂ ಲಾಭ ತೋರಿಸಿದ್ದರೂ, ಹಣ ವಿತ್​ಡ್ರಾ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ತಾನು ಮೋಸ ಹೋಗಿರುವುದುನ್ನು ಅರಿತು ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ ಏನು:ಸೆರಿಲಿಂಗಂಪಲ್ಲಿ ಮೂಲದ ಸಿವಿಲ್ ಇಂಜಿನಿಯರ್ ಅವರು ಸೆಪ್ಟೆಂಬರ್​ನಲ್ಲಿ ಸೊಹೈಲ್ ರಜಪೂತ್ ಪೋರ್ಟ್‌ಫೋಲಿಯೊ ಶೇರಿಂಗ್​ ಹೆಸರಿನ ವಾಟ್ಸ್​ಆ್ಯಪ್​ ಗ್ರೂಪ್​ಗೆ ಸೇರಿದ್ದರು. ರಾಹುಲ್ ಹೆಸರಿನಿಂದ ಪರಿಚಯವಾದ ಅಪರಿಚಿತ ವ್ಯಕ್ತಿ, ವ್ಯಾಪಾರ ಕೌಶಲ ಕಲಿಸುವುದಾಗಿ ನಂಬಿಸಿದ್ದ. ಅವರು ಹೇಳಿದಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಶೇ. 2 ಸಾವಿರದಷ್ಟು ಲಾಭ ಬರಲಿದೆ ಎಂದು ಆಮಿಷವೊಡ್ಡಿದ್ದ.

ಮೋರ್ಗಾನ್ ಸ್ಟಾನ್ಲಿ ಇನ್‌ಸ್ಟಿಟ್ಯೂಷನಲ್ ಅಕೌಂಟಿಂಗ್‌ ಸಹಯೋಗದ ಈ ಟ್ರೇಡ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸೂಚಿಸಿದ್ದರು. ಬಳಿಕ ವಂಚನೆಗೊಳಗಾದ ವ್ಯಕ್ತಿಗೆ ಯೂಸರ್ ಐಡಿ ಮತ್ತು ಪಾಸ್​ವರ್ಡ್ ನೀಡಿದ್ದರು. ಇದರ ನಡುವೆ ವಂಚನೆಗೊಳಗಾದ ವ್ಯಕ್ತಿ ಸೆ.25ರಂದು 50 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು.

ಅನಂತರ, ಪ್ರೊಫೆಸರ್ ಲೂಸಿ ಎಂಬ ಹೆಸರಿನ ವ್ಯಕ್ತಿಯೊಬ್ಬರು ಪ್ರತಿದಿನ ಷೇರುಗಳನ್ನು ಖರೀದಿಸುವಂತೆ ಸೂಚಿಸಿದ್ದರು. ಪ್ರಸಿದ್ಧ ಕಂಪನಿಗಳ ಹೆಸರಿನಲ್ಲಿ ಷೇರುಗಳನ್ನು ಖರೀದಿಸುವುದಾಗಿ ನಂಬಿಸಿ ಪ್ರತಿ ಬಾರಿ ಲಕ್ಷಗಟ್ಟಲೆ ಹಣವನ್ನು ವಕ್ತಿಯಿಂದ ವರ್ಗಾಯಿಸಿಕೊಳ್ಳುತ್ತಿದ್ದರು. ವ್ಯಕ್ತಿ ಹೆಚ್ಚು ಹಣ ಹೂಡಿಕೆ ಮಾಡುವಂತೆ ಮಾಡಲು ಎರಡನೇ ಬಾರಿ 3.9 ಲಕ್ಷ ರೂಪಾಯಿ ವಿತ್​ಡ್ರಾ ಮಾಡುಕೊಳ್ಳುವುದಕ್ಕೆ ಅವಕಾಶ ನೀಡಿದ್ದರು. ಸ್ವಲ್ಪ ಮೊತ್ತ ಬರುತ್ತಿದ್ದಂತೆ ಇದರಿಂದ ನಿಜವಾಗಿಯೂ ಹಣ ಬರುತ್ತದೆ ಎಂದು ನಂಬಿದ ವ್ಯಕ್ತಿ , ನವೆಂಬರ್​ 4ನೇ ತಾರೀಖಿನ ವರೆಗೆ ಒಂದು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು.

ವಂಚಕರು ಹೂಡಿಕೆಗೆ ಲಾಭಾಂಶವಾಗಿ 9.3 ಕೋಟಿ ರೂ ಎಂದು ತೋರಿದ್ದರು. ವ್ಯಕ್ತಿ ಹಣ ವಿತ್​ಡ್ರಾ ಮಾಡಿಕೊಳ್ಳಲು ಪ್ರತ್ನಿಸಿದಾಗ ಮೊದಲ ಶೇ.5 ರಷ್ಟು ಆದಾಯ ತೆರಿಗೆಯನ್ನು ಪಾವತಿಸಬೇಕು ಎಂದು ಸೂಚಿಸಿದ್ದರು. ಆ ಬಳಿಕ ಶೇ.5ರಷ್ಟು ಜಿಎಸ್​ಟಿ ಅಡಿ 46 ಲಕ್ಷ ರೂ ನೀಡಿದರೆ ಹಣ ವಿತ್​ಡ್ರಾ ಮಾಡಿಕೊಳ್ಳಬಹುದು ಎಂದಿದ್ದರು. ಬೇರೆ ಬೇರೆ ಕಾರಣ ನೀಡಿ ಹಣ ವಿತ್​ಡ್ರಾ ಮಾಡಿಕೊಳ್ಳಲು ಪದೇ ಪದೆ ನಿರಾಕರಿಸಿದ್ದರಿಂದ ವ್ಯಕ್ತಿ ತಾನು ವಂಚನೆಗೊಳಗಾಗಿರುವುದನ್ನು ಅರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್​ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಡೇಟಿಂಗ್ ಆ್ಯಪ್​​ನ ವಿದೇಶಿ 'ನಕಲಿ ಸಖ'ನಿಂದ ₹18 ಲಕ್ಷ ಕಳೆದುಕೊಂಡ ಏಮ್ಸ್​ ವೈದ್ಯೆ

ABOUT THE AUTHOR

...view details