ಕರ್ನಾಟಕ

karnataka

ETV Bharat / bharat

ಛತ್ತೀಸಗಢದಲ್ಲಿ ಎನ್​ಕೌಂಟರ್: ಇಬ್ಬರು ಮಾವೋವಾದಿಗಳು ಹತ, ಶಸ್ತ್ರಾಸ್ತ್ರ ವಶ - CHHATTISGARH ENCOUNTER

ಛತ್ತೀಸಗಢದಲ್ಲಿ ಮಾವೋವಾದಿಗಳೊಂದಿಗೆ ಯೋಧರ ಎನ್​ಕೌಂಟರ್ ಮುಂದುವರಿದಿವೆ.

ಛತ್ತೀಸಗಢದಲ್ಲಿ ಎನ್​ಕೌಂಟರ್: ಇಬ್ಬರು ಮಾವೋವಾದಿಗಳು ಹತ, ಶಸ್ತ್ರಾಸ್ತ್ರ ವಶ
ಛತ್ತೀಸಗಢದಲ್ಲಿ ಎನ್​ಕೌಂಟರ್: ಇಬ್ಬರು ಮಾವೋವಾದಿಗಳು ಹತ, ಶಸ್ತ್ರಾಸ್ತ್ರ ವಶ (etv bharat)

By ETV Bharat Karnataka Team

Published : 6 hours ago

ಬಿಜಾಪುರ (ಛತ್ತೀಸಗಢ): ಅಮಿತ್ ಶಾ ಅವರ ಬಸ್ತಾರ್ ಭೇಟಿಗೂ ಮುನ್ನ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಸೈನಿಕರು ಮತ್ತು ಮಾವೋವಾದಿಗಳ ನಡುವೆ ಪದೇ ಪದೆ ಎನ್ ಕೌಂಟರ್​ಗಳು ನಡೆಯುತ್ತಿವೆ. ಬಿಜಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೈನಿಕರು ಇಬ್ಬರು ನಕ್ಸಲರನ್ನು ಕೊಂದು ಹಾಕಿದ್ದಾರೆ. ಎಎಸ್​ಪಿ ಚಂದ್ರಕಾಂತ್ ಗವರ್ಣ ಎನ್ ಕೌಂಟರ್ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಬಸಗುಡ ಪೊಲೀಸ್ ಠಾಣೆ ವ್ಯಾಪ್ತಿಯ ನೇಂದ್ರ ಮತ್ತು ಪುನ್ನೂರು ಗ್ರಾಮಗಳ ಅರಣ್ಯದಲ್ಲಿ ಗುರುವಾರ ರಾತ್ರಿ ನಕ್ಸಲೈಟ್ ಸಂಘಟನೆ ಏರಿಯಾ ಕಮಿಟಿಯ ಸಶಸ್ತ್ರ ಮಾವೋವಾದಿಗಳು ಇರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಎಎಸ್​ಪಿ ತಿಳಿಸಿದ್ದಾರೆ. ಈ ಮಾಹಿತಿಯ ಮೇರೆಗೆ ಡಿಆರ್​ಜಿ, ಕೋಬ್ರಾ 210 ಮತ್ತು ಯಂಗ್ ಪ್ಲಾಟೂನ್ 168 ಬೆಟಾಲಿಯನ್ ಕೇಂದ್ರ ಮೀಸಲು ಪೊಲೀಸ್ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತು.

ಸೈನಿಕರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ:ಇಂದು ಬೆಳಗ್ಗೆ 7:30 ರ ಸುಮಾರಿಗೆ ಸೈನಿಕರು ಮತ್ತು ನಕ್ಸಲರ ನಡುವೆ ಎನ್ ಕೌಂಟರ್ ನಡೆದಿದೆ. ಗುಂಡಿನ ದಾಳಿ ನಿಂತ ನಂತರ ಇಬ್ಬರು ನಕ್ಸಲರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಎರಡು 12 ಬೋರ್ ಗನ್ ಗಳು, ಒಂದು ಬಂದೂಕು, ಟಿಫಿನ್ ಬಾಕ್ಸ್​ ಬಾಂಬ್ ಗಳು, ಮಾವೋವಾದಿ ಪಿಸ್ತೂಲ್​ಗಳು, ಸಮವಸ್ತ್ರ ಮತ್ತು ಇತರ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೀಡಾದ ನಕ್ಸಲರ ಗುರುತಿಸುವಿಕೆ ಕೆಲಸ ನಡೆಯುತ್ತಿದೆ.

ಇಬ್ಬರು ಡಿಆರ್​ಜಿ ಸಿಬ್ಬಂದಿಗೆ ಗಾಯ: ಇದಕ್ಕೂ ಮುನ್ನ ಬುಧವಾರ ಗಂಗಲೂರು ಪ್ರದೇಶದ ಮುಂಗಾ ಅರಣ್ಯ ಪರ್ವತದಲ್ಲಿ ಸೈನಿಕರು ಮತ್ತು ಮಾವೋವಾದಿಗಳ ನಡುವೆ ಎನ್ ಕೌಂಟರ್ ನಡೆದಿತ್ತು. ಈ ಎನ್ ಕೌಂಟರ್​ನಲ್ಲಿ ಇಬ್ಬರು ಡಿಆರ್​ಜಿ ಸಿಬ್ಬಂದಿ ಗಾಯಗೊಂಡಿದ್ದಾರೆ. ಒಬ್ಬ ನಕ್ಸಲೀಯನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಹತ್ಯೆಗೀಡಾದ ನಕ್ಸಲೀಯನನ್ನು ಗಂಗಲೂರು ಪ್ರದೇಶ ಸಮಿತಿಯ ಉಪ ಕಮಾಂಡರ್ ಪಾಂಡು ಮಾಡವಿ ಎಂದು ಗುರುತಿಸಲಾಗಿದೆ.

ಶೋಧ ಕಾರ್ಯಾಚರಣೆಯಲ್ಲಿ ಪಿಸ್ತೂಲ್, ಸ್ಫೋಟಕ ಪತ್ತೆ:ಎನ್ ಕೌಂಟರ್ ನಂತರ ಸ್ಥಳದಲ್ಲಿ ಸ್ಫೋಟಕಗಳು ಮತ್ತು 9 ಎಂಎಂ ಪಿಸ್ತೂಲ್, 1 ಟಿಫಿನ್ ಬಾಂಬ್, 1 ಕುಕ್ಕರ್ ಬಾಂಬ್ ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್ ಕೌಂಟರ್​ನಲ್ಲಿ ಬಹಳಷ್ಟು ಸಂಖ್ಯೆಯ ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಯೋಧರು ಹೇಳಿದ್ದಾರೆ. 2024ರ ಡಿಸೆಂಬರ್ 11ರಂದು ಡಿಆರ್ ಜಿ, ಬಸ್ತಾರ್ ಫೈಟರ್ಸ್ ಯೋಧರು ಮತ್ತು ನಕ್ಸಲರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಅಪರಿಚಿತ ನಕ್ಸಲರ ಶವ ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು ಎಂದು ಡಿಎಸ್​ಪಿ ವಿನೀತ್ ಸಾಹು ತಿಳಿಸಿದ್ದಾರೆ.

ಇದನ್ನೂ ಓದಿ : ತನ್ನ ಪಕ್ಷಾಂತರಿ ಶಾಸಕರನ್ನು ಅನರ್ಹಗೊಳಿಸದ ಕ್ರಮ ಪ್ರಶ್ನಿಸಿದ ಕಾಂಗ್ರೆಸ್​ ಅರ್ಜಿ ವಜಾ ಮಾಡಿದ ಸುಪ್ರೀಂ - SC DISMISSES CONGRESS PLEA

ABOUT THE AUTHOR

...view details