ಕರ್ನಾಟಕ

karnataka

ETV Bharat / bharat

ಕೇರಳ ಹೈಕೋರ್ಟ್​ಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ - JUDGES TO KERALA HIGH COURT

ಕೇರಳ ಹೈಕೋರ್ಟ್​ಗೆ ಐವರು ಹೆಚ್ಚುವರಿ ನ್ಯಾಯಾಧೀಶರನ್ನು ನೇಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಕೇರಳ ಹೈಕೋರ್ಟ್​
ಕೇರಳ ಹೈಕೋರ್ಟ್​ (IANS)

By ETV Bharat Karnataka Team

Published : Oct 29, 2024, 7:49 PM IST

ನವದೆಹಲಿ: ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿನ ಮೇರೆಗೆ ಕೇರಳ ಹೈಕೋರ್ಟ್​ಗೆ ಐವರು ಹೆಚ್ಚುವರಿ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ.

"ಭಾರತದ ಸಂವಿಧಾನದ 224ನೇ ವಿಧಿಯ ಕಲಂ (1) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, (i) ಪರಮೇಶ್ವರ ಪಣಿಕ್ಕರ್ ಕೃಷ್ಣ ಕುಮಾರ್, (ii) ಕೊಡಸ್ಸೆರಿ ವೆಲಿಯತ್ ಮದಮ್ ಜಯಕುಮಾರ್, (iii) ಮುರಳೀ ಕೃಷ್ಣ ಶಂಕರಮೂಲೆ, (iv) ಜೋಬಿನ್ ಸೆಬಾಸ್ಟಿಯನ್ ಮತ್ತು (v) ಪಾಂಡಿಕರನ್ ವರದರಾಜ ಲೈಯರ್ ಬಾಲಕೃಷ್ಣನ್ ಅವರನ್ನು ಕೇರಳ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಅವರು ಆಯಾ ಕಚೇರಿಗಳ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಇವರನ್ನು ನೇಮಕ ಮಾಡಲಾಗಿದೆ" ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 15ರಂದು ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ನಾಲ್ವರು ನ್ಯಾಯಾಂಗ ಅಧಿಕಾರಿಗಳನ್ನು ಕೇರಳ ಹೈಕೋರ್ಟ್​ಗೆ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಶಿಫಾರಸು ಮಾಡಿತ್ತು. ನ್ಯಾಯಮೂರ್ತಿಗಳಾದ ಕೆ.ವಿ.ಜಯಕುಮಾರ್, ಮುರಳಿ ಕೃಷ್ಣ ಎಸ್., ಜೋಬಿನ್ ಸೆಬಾಸ್ಟಿಯನ್ ಮತ್ತು ಪಿ.ವಿ.ಬಾಲಕೃಷ್ಣನ್ ಅವರನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಈ ವರ್ಷದ ಮೇ ತಿಂಗಳಲ್ಲಿ ಶಿಫಾರಸು ಮಾಡಿದ್ದರು.

ನೂತನ ನ್ಯಾಯಮೂರ್ತಿಗಳ ಸಂಕ್ಷಿಪ್ತ ಪರಿಚಯ: ಡಿಸೆಂಬರ್ 2012ರಲ್ಲಿ ನ್ಯಾಯಾಂಗ ಸೇವೆಗೆ ಸೇರಿದ ಜಯಕುಮಾರ್, ಜನವರಿ 2022ರಿಂದ ಹೈಕೋರ್ಟ್​ನಲ್ಲಿ ರಿಜಿಸ್ಟ್ರಾರ್ (ವಿಜಿಲೆನ್ಸ್) ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೇಳಿದೆ. ಮಾರ್ಚ್ 2014ರಲ್ಲಿ ನ್ಯಾಯಾಂಗ ಸೇವೆಗೆ ಸೇರಿದ ಕೃಷ್ಣ ಎಸ್ ಅವರು ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾರ್ಚ್ 2014ರಲ್ಲಿ ನ್ಯಾಯಾಂಗ ಸೇವೆಗೆ ಸೇರಿದ ಸೆಬಾಸ್ಟಿಯನ್ ಅವರು ಏಪ್ರಿಲ್ 2024ರಿಂದ ಕೇರಳ ಹೈಕೋರ್ಟ್​ನಲ್ಲಿ ರಿಜಿಸ್ಟ್ರಾರ್ (ಜಿಲ್ಲಾ ನ್ಯಾಯಾಂಗ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲಕೃಷ್ಣನ್ ಅವರು ಮಾರ್ಚ್ 2014ರಲ್ಲಿ ನ್ಯಾಯಾಂಗ ಸೇವೆಗೆ ಸೇರಿದರು ಮತ್ತು ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಜಿಲ್ಲಾ ಮ್ಯಾಜಿಸ್ಟ್ರೇಟ್ ನವೀನ್ ಬಾಬು ಆತ್ಮಹತ್ಯೆ ಪ್ರಕರಣ: ಸಿಪಿಐ(ಎಂ) ನಾಯಕಿ ದಿವ್ಯಾ ಬಂಧನ

ABOUT THE AUTHOR

...view details