ಕರ್ನಾಟಕ

karnataka

ETV Bharat / bharat

ಹಲ್ದ್ವಾನಿ ಹಿಂಸಾಚಾರ ಗುಪ್ತಚರ ವೈಫಲ್ಯ: ಮಾಜಿ ಸಿಎಂ ಮಾಯಾವತಿ ಆರೋಪ - ಮಾಜಿ ಸಿಎಂ ಮಾಯಾವತಿ

Mayawati on Haldwani Violence: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹಲ್ದ್ವಾನಿ ಘಟನೆಯನ್ನು ಗುಪ್ತಚರ ವ್ಯವಸ್ಥೆಯ ವೈಫಲ್ಯ ಎಂದು ಬಣ್ಣಿಸಿದ್ದಾರೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದ್ದಾರೆ.

BSP Supremo Mayawati  Haldwani Violence  Intelligence System  ಮಾಜಿ ಸಿಎಂ ಮಾಯಾವತಿ  ಗುಪ್ತಚಾರ ವೈಫಲ್ಯ
ಮಾಜಿ ಸಿಎಂ ಮಾಯಾವತಿ

By ETV Bharat Karnataka Team

Published : Feb 10, 2024, 12:38 PM IST

ಲಖನೌ, ಉತ್ತರಪ್ರದೇಶ:ಗುರುವಾರ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಎಂಬಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಕೆಲವರು ಬಲಿಯಾಗಿದ್ದರು. ಪೊಲೀಸರ ಕ್ರಮ ಖಂಡಿಸಿದ ಜನರು, ಕಲ್ಲು ತೂರಾಟ ಮಾಡಿ, ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಕರ್ಫ್ಯೂ ಜಾರಿ ಮಾಡಿದ್ದರು. ಸದ್ಯ ಅಲ್ಲಿನ ಪರಿಸ್ಥಿತಿ ಇನ್ನೂ ಸಹಜವಾಗಿಲ್ಲ. ಆದರೆ, ಹಲ್ದ್ವಾನಿ ಜ್ವಾಲೆ ಉತ್ತರ ಪ್ರದೇಶದ ಬರೇಲಿಯಲ್ಲಿಯೂ ಕಾಣಿಸಿಕೊಂಡಿದೆ. ಆದರೆ, ಪೊಲೀಸರ ಕ್ರಿಯಾಶೀಲತೆ ಮತ್ತು ಬುದ್ಧಿವಂತಿಕೆ ಮುಂದೆ ಅರಾಜಕತಾವಾದಿಗಳು ಯಶಸ್ವಿಯಾಗಲಿಲ್ಲ.

ಗುಪ್ತಚರ ವ್ಯವಸ್ಥೆ ಬಗ್ಗೆ ಮಾಯಾವತಿ ಹೇಳಿದ್ದೇನು?: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹಲ್ದ್ವಾನಿ ಘಟನೆಯನ್ನು ಗುಪ್ತಚರ ವ್ಯವಸ್ಥೆಯ ವೈಫಲ್ಯ ಎಂದು ಕರೆದಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಸೂಚಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಯುಪಿ ಸರ್ಕಾರಕ್ಕೆ ಸೂಚಿಸಲಾಗಿದೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಯಾವತಿ ಬರೆದಿದ್ದೇನು?:ಉತ್ತರಾಖಂಡ್‌ನ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರ ಮತ್ತು ಅದರಲ್ಲಿನ ಜೀವ ಮತ್ತು ಆಸ್ತಿ ನಷ್ಟವು ಅತ್ಯಂತ ಕಳವಳಕಾರಿಯಾಗಿದೆ. ಸರ್ಕಾರ, ಆಡಳಿತ ಮತ್ತು ಗುಪ್ತಚರ ವ್ಯವಸ್ಥೆ ಎಚ್ಚೆತ್ತುಕೊಂಡಿದ್ದರೆ ಈ ಘಟನೆಯನ್ನು ತಡೆಯಬಹುದಿತ್ತು. ಸರಕಾರ ಉನ್ನತ ಮಟ್ಟದ ತನಿಖೆ ನಡೆಸಿ ಶಾಂತಿ ಕಾಪಾಡಬೇಕು. ಉತ್ತರಾಖಂಡದ ಪಕ್ಕದಲ್ಲಿರುವ ಉತ್ತರಪ್ರದೇಶದ ಬರೇಲಿಯಲ್ಲಿಯೂ ಪ್ರತಿ ದಿನವೂ ಯಾವುದಾದರೊಂದು ಸಮಸ್ಯೆಯಿಂದ ಉದ್ವಿಗ್ನ ಪರಿಸ್ಥಿತಿ ಇದೆ, ಇದನ್ನು ಸರ್ಕಾರವು ಸಮಯಕ್ಕೆ ಸರಿಯಾಗಿ ನಿಯಂತ್ರಿಸಬೇಕು ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಬರೇಲಿಯಲ್ಲಿ ಹಲ್ದ್ವಾನಿಯಂತಹ ಘಟನೆಗೆ ಸಿದ್ಧತೆ ನಡೆದಿದೆಯಾ?:ಹಲ್ದ್ವಾನಿಯಲ್ಲಿ ನಡೆದ ಹಿಂಸಾತ್ಮಕ ಘಟನೆಯ ನಂತರ, ಶುಕ್ರವಾರ ಪ್ರಾರ್ಥನೆ ಸಲ್ಲಿಸುವ ಮುನ್ನವೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಮಸೀದಿಗಳ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಲ್ದ್ವಾನಿಯಂತಹ ಘಟನೆ ನಡೆಸಲು ಸಂಚು ರೂಪಿಸಲಾಗಿದ್ದರೂ, ಪೊಲೀಸರ ಕ್ರಿಯಾಶೀಲತೆ ಮತ್ತು ಬುದ್ಧಿವಂತಿಕೆಯ ಮುಂದೆ ಅರಾಜಕತಾವಾದಿಗಳು ಯಶಸ್ವಿಯಾಗಲಿಲ್ಲ.

ಓದಿ:ಆಪರೇಷನ್​ ಥಿಯೇಟರ್​ನಲ್ಲಿ ಪ್ರಿ ವೆಡ್ಡಿಂಗ್​ ಶೂಟ್​: ವೈದ್ಯ ಸೇವೆಯಿಂದಲೇ ಮದುಮಗ ವಜಾ

ABOUT THE AUTHOR

...view details