ಅಮೃತ್ಸರ್: ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ಯೋಧರು ಪಾಕಿಸ್ತಾನದ ಮೂರು ಸುಧಾರಿತ ತಂತ್ರಜ್ಞಾನದ ಡ್ರೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಮೃತ್ಸರದ ರಜತಲ್ ಗ್ರಾಮದಲ್ಲಿ ಈ ಡ್ರೋನ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿ ಈ ಡ್ರೋನ್ಗಳನ್ನು ಬಿಎಸ್ಎಫ್ ಪರಿಣಾಮಕಾರಿಯಾಗಿ ತಟಸ್ಥಗೊಳಿಸಿದೆ. ಹಾಗೇ ಮಾದಕವಸ್ತು ಕಳ್ಳಸಾಗಣೆಗೆ ಬಳಸದಂತೆ ತಡೆಯಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಸ್ಎಫ್ ಪಂಜಾಬ್, ಇಂದಿನ ಮಹತ್ವದ ಕಾರ್ಯಾಚರಣೆಯಲ್ಲಿ ಬಿಎಸ್ಎಫ್ ಪಂಜಾಬ್ ಪಡೆ ಎರಡು ಡಿಜೆಐ ಮ್ಯಾಟ್ರಿಕ್ ಆರ್ಟಿಕೆ ಡ್ರೋನ್ ಮತ್ತು ಡಿಜೆಐ ಮ್ಯಾವಿಕ್ 3 ಕ್ಲಾಸಿಕ್ ಸೇರಿದಂತೆ 3 ಡ್ರೋನ್ ಗಳನ್ನ ಪಂಜಾಬ್ ಗಡಿಯ ರಜತಲ್ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.