ಹೈದರಾಬಾದ್ (ತೆಲಂಗಾಣ): ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಕಂಡ ವಾಹನ ಸವಾರ ಬೈಕ್ ನಿಲ್ಲಿಸಿ ನೀರು ಚಿಮುಕಿಸಿ ಬೆಂಕಿ ನಂದಿಸುತ್ತಿದ್ದನು. ಇದನ್ನು ಗಮನಿಸಿದ ಅಕ್ಕಪಕ್ಕದ ಸ್ಥಳೀಯರು ಸಹಾಯಕ್ಕೆ ಬಂದರು. ಈ ಸಂದರ್ಭದಲ್ಲಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ. ಇದರಿಂದ ಸುತ್ತಮುತ್ತಲಿನ ಹತ್ತು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಚಲಿಸುತ್ತಿದ್ದ ಬೈಕ್ನಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿ ನಂದಿಸುವಾಗ ಟ್ಯಾಂಕ್ ಸ್ಫೋಟ, 10 ಜನರಿಗೆ ಗಾಯ - Bike Tank Blast - BIKE TANK BLAST
ಚಲಿಸುತ್ತಿರುವಾಗಲೇ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಾಹನ ಸವಾರ ಬೈಕ್ ನಿಲ್ಲಿಸಿ ಬೆಂಕಿ ನಂದಿಸಲು ಯತ್ನಿಸಿದ್ದು, ಈ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ.
ಬೆಂಕಿ ನಂದಿಸುವಾಗ ಟ್ಯಾಂಕ್ ಸ್ಫೋಟ, 10 ಜನರಿಗೆ ಗಾಯ (ETV Bharat)
Published : May 12, 2024, 7:55 PM IST
|Updated : May 12, 2024, 8:11 PM IST
ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಪಾತಬಸ್ತಿಯ ಭವಾನಿ ನಗರದ ಮುಘಲ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಬೇಕಿದೆ.
ಓದಿ:ತುಮಕೂರಿನಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಮುಖ್ಯ ಶಿಕ್ಷಕರು ಸಾವು, ಮತ್ತಿಬ್ಬರು ಗಂಭೀರ - Tumakuru Car Accident
Last Updated : May 12, 2024, 8:11 PM IST