ಸಿವಾನ್/ಛಾಪ್ರಾ, ಬಿಹಾರ: ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಬುಧವಾರದಿಂದ ಇಲ್ಲಿಯವರೆಗೆ 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ ಹತ್ತಾರು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಹಲವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಜಿಲ್ಲಾಡಳಿತಗಳು ಮಾತ್ರ ಸಿವಾನ್‌ನಲ್ಲಿ ಕೇವಲ 4 ಮತ್ತು ಛಾಪ್ರಾದಲ್ಲಿ 2 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿವೆ.
ಸಿವಾನ್‌ನಲ್ಲಿ 24 ಜನರ ಸಾವು: ಸಿವಾನ್‌ನಲ್ಲಿ ಸಾವಿನ ಸಂಖ್ಯೆ 24 ಕ್ಕೆ ಏರಿದೆ. ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಘರ್ ಗ್ರಾಮದಲ್ಲಿ ಪಾಲಿಥಿನ್ ಮಿಶ್ರಿತ ಮದ್ಯ ಸೇವಿಸಿ ಜನರ ಆರೋಗ್ಯ ಹದಗೆಡಲಾರಂಭಿಸಿದೆ. ವಾಂತಿ, ಭೇದಿ ಮತ್ತು ದೃಷ್ಟಿ ನಷ್ಟದ ದೂರುಗಳ ನಂತರ ಅನೇಕ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ 24 ಮಂದಿ ಸಾವನ್ನಪ್ಪಿದ್ದಾರೆ. 4 ಜನರನ್ನು ಪಿಎಂಸಿಎಚ್‌ಗೆ ಉಲ್ಲೇಖಿಸಲಾಗಿದೆ, ಅವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಛಾಪ್ರಾದಲ್ಲಿ ನಾಲ್ವರ ಸಾವು: ಮತ್ತೊಂದೆಡೆ, ಸರನ್ ಜಿಲ್ಲೆಯ ಮಸ್ರಖ್ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದಲ್ಲಿ ವಿಷಕಾರಿ ಮದ್ಯ 4 ಜನರ ಜೀವವನ್ನು ಬಲಿ ಪಡೆದುಕೊಂಡಿದೆ. ಕುಟುಂಬಸ್ಥರ ಪ್ರಕಾರ ಮಂಗಳವಾರ ರಾತ್ರಿ ಎಲ್ಲರೂ ಮದ್ಯ ಸೇವಿಸಿದ್ದರು. ಮದ್ಯ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯ ಹದಗೆಡತೊಡಗಿತು ಎಂದು ಹೇಳಿದ್ದಾರೆ.
49 ಮಂದಿಯ ಸ್ಥಿತಿ ಚಿಂತಾಜನಕ: ಆಸ್ಪತ್ರೆ ಆಡಳಿತದ ಪ್ರಕಾರ ಸಿವಾನ್‌ನಲ್ಲಿ 29 ಮತ್ತು ಸರನ್‌ನಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ. ಅದೇ ಸಮಯದಲ್ಲಿ, ಸರನ್‌ನ ಒಬ್ಬ ವ್ಯಕ್ತಿ ಮತ್ತು ಸಿವಾನ್‌ನ ನಾಲ್ವರನ್ನು ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಪಾಟ್ನಾದ ಪಿಎಂಸಿಎಚ್‌ಗೆ ರೆಪರ್ ಮಾಡಿ ಅಲ್ಲಿಗೆ ರವಾನಿಸಲಾಗಿದೆ. ಇವರೆಲ್ಲರೂ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ತನಿಖೆಗೆ ಎಸ್‌ಐಟಿ ರಚನೆ:ಪ್ರಕರಣದ ತನಿಖೆಗಾಗಿ ಸರನ್ ಆಡಳಿತವು ಎಸ್‌ಐಟಿ ರಚಿಸಿದೆ. ಮರಣೋತ್ತರ ಪರೀಕ್ಷೆ ಮತ್ತು ಒಳಾಂಗಗಳ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಸರನ್ ಡಿಎಂ ಹೇಳಿದ್ದಾರೆ. ಸದ್ಯ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.