ಜೈಪುರ, ರಾಜಸ್ಥಾನ: ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದ ಹರಿಮಲ್ ಪ್ಯಾಲೇಸ್‌ನಲ್ಲಿ ಬೆಲಾರಸ್‌ನ ದಂಪತಿಗಳು ಹಿಂದೂ ಸಂಪ್ರದಾಯದಂತೆ ಸೋಮವಾರ ವಿವಾಹವಾದರು. ಡಿಮಿಟ್ರಿ ಮತ್ತು ಲಿಜಿಯಾ ಟ್ರೆಸೆವಿಚ್ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಪ್ರವಾಸೋದ್ಯಮ ಉದ್ಯಮಿ ಸುರೇಶ್ ಸರ್ವಾನಿ ಮಾತನಾಡಿ, ಬೆಲಾರಸ್ ಪ್ರಜೆಗಳಾದ ಲಿಡ್ಜಿಯಾ ತ್ಸಾರೆಸೆವಿಚ್ ಮತ್ತು ಡಿಮಿಟ್ರಿ ಖ್ಲೆಬೆಸ್ಟ್ ವಿವಾಹದ ಪವಿತ್ರ ಬಂಧಕ್ಕೊಳಗಾಗುವ ಮೂಲಕ ತಮ್ಮ ಹೊಸ ಜೀವನ ಪ್ರಾರಂಭಿಸಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಈ ವಿದೇಶಿ ಜೋಡಿಯು ಮದುವೆಯ ಎಲ್ಲಾ ವಿಧಿವಿಧಾನಗಳನ್ನು ತುಂಬಾ ಉತ್ಸಾಹದಿಂದಲೇ ನೆರವೇರಿಸಿ ಗಮನ ಸೆಳೆಯಿತು.
ರಾಜಸ್ಥಾನಿ ಸಂಪ್ರದಾಯದಂತೆ ಮದುವೆ: ಮುಂದೊಂದು ದಿನ ಹಿಂದೂ ಪದ್ಧತಿಯಂತೆ ಮದುವೆ ಆಗಬೇಕು ಎಂಬುದು ನಮ್ಮ ಕನಸಾಗಿತ್ತು ಎಂದು ಡಿಮಿಟ್ರಿ ಮತ್ತು ಲಿಜಿಯಾ ಟ್ರೆಸೆವಿಚ್ ಹೇಳಿದ್ದಾರೆ. ಇಂದು ಆ ನಮ್ಮ ಕನಸು ನನಸಾಗಿದೆ, ನಾವಿಬ್ಬರೂ ತುಂಬಾ ಸಂತಸಗೊಂಡಿದ್ದೇವೆ. ಜೈಪುರದ ಅದ್ಧೂರಿ ವಿವಾಹ ಸ್ಥಳದಲ್ಲಿ ಆಯೋಜಿಸಲಾದ ಈ ವಿವಾಹ ಸಮಾರಂಭದಲ್ಲಿ ಭಾರತೀಯ ಮತ್ತು ವಿಶೇಷವಾಗಿ ರಾಜಸ್ಥಾನಿ ಸಂಪ್ರದಾಯಗಳ ಸಮೃದ್ಧ ಸಮ್ಮಿಳನ ಕಂಡು ಬಂತು.
ವಧು - ವರರು ಭಾರತೀಯ ಉಡುಗೆ ತೊಟ್ಟಿದ್ದು, ಸ್ಥಳೀಯ ಪದ್ಧತಿಯಂತೆ ಪ್ರದಕ್ಷಿಣೆ ಹಾಕಿದರು. ವರ ಡಿಮಿಟ್ರಿ ಸಾಂಪ್ರದಾಯಿಕ ಶೇರ್ವಾನಿ ತೊಟ್ಟಿದ್ದರೆ, ವಧು ಲಿಡ್ಜಿಯಾ ಸುಂದರ ಕೆಂಪು ಬಣ್ಣದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದರು. ಈ ದಂಪತಿಗೆ ಭಾರತ ಮತ್ತು ಅದರ ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಮಗೆ ವಿಶೇಷವಾದ ಬಾಂಧವ್ಯವಿದೆ ಎಂದು ಸುರೇಶ್ ಸರ್ವಾನಿ ಹೇಳಿದರು. ಇದೇ ಕಾರಣಕ್ಕೆ ಅವರು ತಮ್ಮ ಮದುವೆಗೆ ಜೈಪುರವನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಈ ದಂಪತಿ ತಿಳಿಸಿದ್ದಾರೆ.