ಅಯೋಧ್ಯೆ: ರಾಮನೂರಿನಲ್ಲಿ ಪವಿತ್ರ ಸರಯೂ ನದಿಯಲ್ಲಿ ಮೆಟ್ರೋ ಸಂಚಾರ ಕಾರ್ಯ ತೀವ್ರಗೊಳಿಸಲಾಗಿದೆ. ಇದಕ್ಕಾಗಿ ನೀರಿನ ಪ್ರಮಾಣ ಹೆಚ್ಚಿಸಲು ಹೂಳೆತ್ತುವ ಕಾರ್ಯಕ್ಕೆ ಮುಂದಾಗಲಾಗಿದೆ. ಈ ಮೂಲಕ ಸುಗುಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಗುರಿಯನ್ನು ಹೊಂದಿದ್ದು, ಈ ಕಾರಣದಿಂದ ಒಳನಾಡು ಜಲಮಾರ್ಗ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಕುಮಾರ್, ಇಲ್ಲಿನ ಜಲಮಾರ್ಗ ಪರಿಶೀಲಿಸಿದರು. ಗುಪ್ತ ಘಾಟ್ನಿಂದ ಅಯೋಧ್ಯೆಯ ನಯಾ ಘಾಟ್ವರೆಗಿನ ಮಾರ್ಗ ಪರಿಶೀಲನೆ ಮಾಡಲಾಗಿದೆ.
ಪ್ರಯಾಣಿಕರ ಜೊತೆಗೆ ಸರಕಿನ ಸಾಗಣೆ ಹೆಚ್ಚಿಸುವ ಉದ್ದೇಶ: ಈ ಜಲಮಾರ್ಗದ ಕುರಿತು ಮಾತನಾಡಿದ ವಿಜಯ್ ಕುಮಾರ್, ಇಲ್ಲಿ ಯಾವ ರೀತಿ ಜಲಮಾರ್ಗ ಇರಬೇಕು ಎಂಬ ಕುರಿತು ನಿರ್ಧರಿಸಲಾಗುತ್ತಿದ್ದು, ಭಾರತ ಸರ್ಕಾರವೂ ಜಲಮಾರ್ಗದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ. ಪ್ರಯಾಣಿಕರ ಜೊತೆಗೆ ಸರಕು ಸಾಗಣೆ ಸಂಚಾರವೂ ಹೆಚ್ಚಬೇಕಿದೆ. ಇದಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಿದ ಕೂಡಲೇ ಜಲಮಾರ್ಗದ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು. ಸರಯೂ ಜಲಮಾರ್ಗ ಪರಿಶೀಲನೆಗೆ ಉತ್ತರ ಪ್ರದೇಶ ಸರ್ಕಾರ ಮತ್ತು ಅಯೋಧ್ಯೆ ಜಿಲ್ಲಾಡಳಿತ ಸಮೀಕ್ಷೆ ಸಹಕಾರ ನೀಡುತ್ತಿದೆ. ನದಿಯಲ್ಲಿ ಹೂಳೆತ್ತುವ ಮೂಲಕ ನೀರಿನ ಪ್ರಮಾಣ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.