ಕರ್ನಾಟಕ

karnataka

ETV Bharat / bharat

ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವ ವಿ ಮುರಳೀಧರನ್ ಮೇಲೆ ಹಲ್ಲೆಗೆ ಯತ್ನ - Attempt to assault V Muralidharan - ATTEMPT TO ASSAULT V MURALIDHARAN

ಕೇರಳದಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದ ಅಟ್ಟಿಂಗಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಮುರಳೀಧರನ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.

ಕೇಂದ್ರ ಸಚಿವ ವಿ ಮುರಳೀಧರನ್ ಮೇಲೆ ಹಲ್ಲೆಗೆ ಯತ್ನ
ಕೇಂದ್ರ ಸಚಿವ ವಿ ಮುರಳೀಧರನ್ ಮೇಲೆ ಹಲ್ಲೆಗೆ ಯತ್ನ

By ETV Bharat Karnataka Team

Published : Apr 11, 2024, 9:28 AM IST

ತಿರುವನಂತಪುರಂ :ಅಟ್ಟಿಂಗಲ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ವಿ ಮುರಳೀಧರನ್ ಅವರ ಚುನಾವಣಾ ಪ್ರಚಾರದ ಮೇಲೆ ಮೂವರ ತಂಡವೊಂದು ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಬುಧವಾರ ಸಂಜೆ 7.30ಕ್ಕೆ ಪಳ್ಳಿಕ್ಕಲ್ ಗ್ರಾಮ ಪಂಚಾಯಿತಿಯ ಕೊಟ್ಟಿಯಂ ಮುಕ್ಕು ಬಳಿಯ ಪಕಲಕುರಿ ಎಂಬಲ್ಲಿ ಘಟನೆ ನಡೆದಿದೆ.

ಬೈಕ್‌ನಲ್ಲಿ ಬಂದ ಮೂವರ ತಂಡವೊಂದು ವಿ. ಮುರಳೀಧರನ್​ ಇದ್ದ ವಾಹನವನ್ನು ಹಿಂಬಾಲಿಸಿ ಹಲ್ಲೆಗೆ ಯತ್ನಿಸಿತ್ತು. ಈ ಮೂವರನ್ನು ಕೇರಳದಲ್ಲಿ ಆಡಳಿತ ಪಕ್ಷವಾದ ಸಿಪಿಎಂಗೆ ಸೇರಿದವರು ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಪ್ರಚಾರವನ್ನು ಅರ್ಧ ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಬಳಿಕ ಪಳ್ಳಿಕ್ಕಲ್ ಪೊಲೀಸರು ಸ್ಥಳಕ್ಕೆ ಬಂದ ನಂತರ ಪ್ರಚಾರ ಪುನರಾರಂಭಿಸಿದ್ದರು.

ಇದೇ ವೇಳೆ ವಿ ಮುರಳೀಧರನ್ ಮಾತನಾಡಿ, ಬೈಕ್​ನಲ್ಲಿ ಬಂದವರು ಹಲ್ಲೆ ಮಾಡಲು ಯತ್ನಿಸುತ್ತಿದರು. ಬಿಜೆಪಿ ಕಾರ್ಯಕರ್ತರು ಶಾಂತಿಯುತವಾಗಿರಬೇಕು. ಜೊತೆಗೆ ಈ ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ :ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ: ಯುವಕನ ವಿರುದ್ಧ ಪ್ರಕರಣ - crime news

ABOUT THE AUTHOR

...view details