ಕರ್ನಾಟಕ

karnataka

ಇಂದು ಸಂಜೆ ದೆಹಲಿ ಸಿಎಂ ಆಗಿ ಪ್ರಮಾಣ ಸ್ವೀಕರಿಸಲಿರುವ ಅತಿಶಿ - Atishi to be sworn in as Delhi

By PTI

Published : 4 hours ago

ದೇಶದಲ್ಲಿ 17ನೇ ಮತ್ತು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಇವರಾಗಿದ್ದಾರೆ.

atishi-to-be-sworn-in-as-delhi-chief-minister-on-saturday
ಅತಿಶಿ (ಎಎನ್​ಐ)

ನವದೆಹಲಿ: ಅರವಿಂದ್​ ಕೇಜ್ರಿವಾಲ್​ ರಾಜೀನಾಮೆ ಬಳಿಕ ಸಿಎಂ ಅಭ್ಯರ್ಥಿಯಾಗಿ ಬಿಂಬಿತವಾಗಿರುವ ಅತಿಶಿ ಇಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೂಲಗಳ ಪ್ರಕಾರ ಇಂದು ಸಂಜೆ 4.30ಕ್ಕೆ ರಾಜ್​ ನಿವಾಸ್​ನಲ್ಲಿ ಅವರು ಎಎಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಅತಿಶಿ ಜೊತೆಗೆ ಪಕ್ಷದ ಘೋಷಣೆಯಂತೆ ಸುಲ್ತಾನ್‌ಪುರ್ ಮಜ್ರಾ ಶಾಸಕ ಮುಖೇಶ್ ಅಹ್ಲಾವತ್, ಸಚಿವರಾದ ಗೋಪಾಲ್ ರೈ, ಕೈಲಾಶ್ ಗಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಕೂಡ ಹೊಸ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ.

ದೇಶದಲ್ಲಿ 17ನೇ ಮತ್ತು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಇವರಾಗಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿದ್ದು, ಪ್ರಮಾಣವಚನ ದಿನಾಂಕದಿಂದ ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ನೇಮಕಗೊಳ್ಳಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮಾ ತಿಳಿಸಿದ್ದಾರೆ ಎಂದು ಲೆಫ್ಟಿನೆಂಟ್​​ ಗವರ್ನರ್​ ಕಚೇರಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದರು. ಇದೇ ವೇಳೆ ರಾಷ್ಟ್ರಪತಿಗಳು ಐವರು ಸಚಿವರ ನೇಮಕಕ್ಕೆ ಕೂಡ ಅನುಮತಿ ನೀಡಿದ್ದಾರೆ ಎಂದರು.

ಕೇಜ್ರಿವಾಲ್​ ರಾಜೀನಾಮೆ ಮತ್ತು ಅನುಮತಿ ವಿಳಂಬ ಹಾಗೂ ಸಿದ್ಧತೆಗೆ ಸಮಯ ಹೆಚ್ಚಿಲ್ಲದ ಕಾರಣ ಈ ಪ್ರಮಾಣವಚನ ಕಾರ್ಯಕ್ರಮ ಹೆಚ್ಚಿನ ಅದ್ಧೂರಿತನವಿಲ್ಲದೇ ಸಾಗಲಿದ್ದು, ಕೆಲವೇ ಗಣ್ಯರು ಹಾಜರಿರಲಿದ್ದಾರೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಐದು ತಿಂಗಳ ಕಾಲ ಸೆರೆವಾಸದಲ್ಲಿದ್ದ ಪಕ್ಷದ ಮುಖ್ಯಸ್ಥರಾಗಿರುವ ಅರವಿಂದ್​ ಕೇಜ್ರಿವಾಲ್​ ಷರತ್ತು ಬದ್ಧ ಜಾಮೀನಿನ ಮೇಲೆ ಸೆಪ್ಟೆಂಬರ್​ 13ರಂದು ಹೊರ ಬಂದಿದ್ದರು. ಇದಾದ ಎರಡು ದಿನಕ್ಕೆ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದರು. ಅಲ್ಲದೇ, ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜನರ ಪ್ರಾಮಾಣಿಕತೆ ಪ್ರಮಾಣಪತ್ರ ಸಿಗುವವರೆಗೆ ದೆಹಲಿ ಗದ್ದುಗೆ ಪಟ್ಟ ಏರುವುದಿಲ್ಲ ಎಂದು ತಿಳಿಸಿದ್ದರು.

ಇದರ ಬೆನ್ನಲ್ಲೇ ನಡೆದ ಎಎಪಿ ಶಾಸಕರ ಸಭೆಯಲ್ಲಿ ಅತಿಶಿಯನ್ನು ತಮ್ಮ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಲು ಸರ್ವಾನುಮತದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಮುಂದಿನ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆಗೆ ಸಜ್ಜಾಗಿದ್ದು, ಅಲ್ಲಿಯವರೆಗೆ ಅತಿಶಿ ದೆಹಲಿ ಸಿಎಂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರದಲ್ಲಿ ಅತಿಶಿ, ಹಣಕಾಸು, ಕಂದಾಯ, ಪಿಡಬ್ಲ್ಯೂಡಿ, ಇಂಧನ ಮತ್ತು ಶಿಕ್ಷಣದಂತಹ ಪ್ರಮುಖ 13 ಖಾತೆಗಳನ್ನು ಹೊಂದಿದ್ದರು. ಹಳೆಯ ಸರ್ಕಾರದಲ್ಲಿದ್ದ ನಾಲ್ವರು ಸಚಿವರು ತಮ್ಮ ಈ ಹಿಂದಿನ ಖಾತೆಯನ್ನೇ ಪಡೆಯುವ ಸಾಧ್ಯತೆ ಇದ್ದು, ರಾಜೀನಾಮೆ ನೀಡಿದ್ದ ರಾಜ್​ ಕುಮಾರ್​ ಆನಂದ್​​ ಅವರ ಖಾತೆಗಳು ಅಹ್ಲಾವತ್​ ಅವರಿಗೆ ಸಿಗುವ ಸಾಧ್ಯತೆ ಇದೆ.

ಅತಿಶಿ ಸಿಎಂ ಆದ ಬಳಿಕ ಅವರ ಸರ್ಕಾರದ ಸಮ್ಮಾನ್ ಯೋಜನೆ, ಎಲೆಕ್ಟ್ರಿಕ್ ವೆಹಿಕಲ್ ನೀತಿ 2.0 ಮತ್ತು ಮನೆ ಬಾಗಿಲಿಗೆ ಸೇವೆ ತಲುಪಿಸುವಂತಹ ಯೋಜನೆ ಸೇರಿದಂತೆ ವಿವಿಧ ಬಾಕಿ ಇರುವ ನೀತಿಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಅನುಮೋದನೆ ಸಿಗಲಿದೆ.

ಇದನ್ನೂ ಓದಿ: ಯಾರಿದು ಆತಿಶಿ ಮಾರ್ಲೆನ್​? ದೆಹಲಿ ಶಾಲೆಗಳ ಸುಧಾರಣೆಯಲ್ಲಿ ಇವರ ಪಾತ್ರ ಹಿರಿದು!

ABOUT THE AUTHOR

...view details