ಕೊರಾಪುಟ್ (ಒಡಿಶಾ):ಫೆಬ್ರವರಿ 29. ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ಈ ದಿನಾಂಕ ನಮಗೆ ನೋಡಲು ಸಿಗುವುದು ನಾಲ್ಕು ವರ್ಷಗಳಿಗೊಮ್ಮೆ. ಈ ದಿನದಂದು ಹುಟ್ಟಿದವರಿಗೆ ವಿಶೇಷ ಎಂದು ದಿನ ಭಾವಿಸಬಹುದು. ಆದರೆ, ಅಂಥವರು ತಮ್ಮ ಜನ್ಮ ದಿನಾಚರಣೆಗೂ ನಾಲ್ಕು ವರ್ಷ ಕಾಯಲೇಬೇಕಾಗುತ್ತದೆ. ಹೀಗಾಗಿಯೇ ಒಡಿಶಾದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ತಮ್ಮ 9ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
36ನೇ ವಯಸ್ಸಿನಲ್ಲಿ 9ನೇ ಜನ್ಮದಿನ ಆಚರಿಸಿಕೊಂಡ ವ್ಯಕ್ತಿ! ಕಾರಣ ಗೊತ್ತೇ? - ಫೆಬ್ರವರಿ 29
ಫೆಬ್ರವರಿ 29 ನಾಲ್ಕು ವರ್ಷಗಳಿಗೊಮ್ಮೆ ಬರುವುದರಿಂದ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಗುರುವಾರ ತಮ್ಮ 9ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

Published : Feb 29, 2024, 11:01 PM IST
ಹೌದು, ಕೊರಾಪುಟ್ ಜಿಲ್ಲೆಯ 36 ವರ್ಷದ ಸೌಮೇಂದ್ರ ನಾಥ್ ನಾಯಕ್ ಗುರುವಾರ ತಮ್ಮ ಒಂಬತ್ತನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇಂದು ಜನ್ಮದಿನದ ಅಂಗವಾಗಿ ಸೌಮೇಂದ್ರ ಇಲ್ಲಿನ ಶ್ರೀಅರಬಿಂದೋ ಭವನದಲ್ಲಿ ತಮ್ಮ ತಾಯಿಯೊಂದಿಗೆ ಸೇರಿ ಪ್ರಾರ್ಥನೆ ಸಲ್ಲಿಸಿದರು. ಫೆಬ್ರವರಿ 29 ನಾಲ್ಕು ವರ್ಷಗಳಿಗೊಮ್ಮೆ ಬರುವುದರಿಂದ ಅವರು 36ನೇ ವಯಸ್ಸಿನಲ್ಲಿ ಇಲ್ಲಿಯವರೆಗೆ ತಮ್ಮ ಜನ್ಮದಿನವನ್ನು ಕೇವಲ ಒಂಬತ್ತು ಬಾರಿ ಆಚರಿಸಲು ಸಾಧ್ಯವಾಗಿದೆ.
ವೃತ್ತಿಯಲ್ಲಿ ಸಂಗೀತಗಾರರಾಗಿರುವ ಸೌಮೇಂದ್ರ 1988ರ ಫೆಬ್ರವರಿ 29ರಂದು ಜನಿಸಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ಬರುವ ಈ ದಿನಕ್ಕಾಗಿ ಅವರು ಕುತೂಹಲದಿಂದ ಕಾಯುತ್ತಾರೆ. ಅಲ್ಲದೇ, ಪ್ರತಿ ಬಾರಿಯೂ ವಿಶೇಷವಾಗಿ ಜನ್ಮದಿನವನ್ನು ಆಚರಿಸುತ್ತಾರೆ. ಈ ಬಾರಿ ಸಹ ಶ್ರೀಅರಬಿಂದೋ ಭವನದಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಜೊತೆಗೆ ರಾಷ್ಟ್ರಧ್ವಜಾರೋಹಣ ಮಾಡಿ, ನಂತರ ಆಕರ್ಷಕ ಪರೇಡ್ ನಡೆಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸೇರಿ ಊಟ ಸೌಮೇಂದ್ರ, ತಾಯಿ ಊಟ ಸೇವಿಸಿದರು. ಈ ವೇಳೆ, ಈತನ ತಾಯಿ ಮಾತನಾಡಿ, ಫೆಬ್ರವರಿ 29ರಂದು ತನ್ನ ಮಗ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ದೈವಿಕ ಕೃಪೆ. ಸೌಮೇಂದ್ರ ಆ ದೇವರು ನನಗೆ ನೀಡಿದ ಉಡುಗೊರೆ ಎಂದು ತಿಳಿಸಿದರು.