ಹಲ್ದ್ವಾನಿ (ಉತ್ತರಾಖಂಡ): ಈ ಬಾರಿಯ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಬೇಕೇ ಅಥವಾ ನವೆಂಬರ್ 1 ರಂದು ಆಚರಿಸಬೇಕಾ ಎಂಬ ಬಗ್ಗೆ ಗೊಂದಲವಿದೆ. ಯಾವಾಗ ಆಚರಿಸಬೇಕು ಎಂಬ ಬಗ್ಗೆ ಜಿಜ್ಞಾಸೆ ಇದೆ. ಈ ನಿಟ್ಟಿನಲ್ಲಿ ಹಲ್ದ್ವಾನಿಯಲ್ಲಿ ಪ್ರಾಂತೀಯ ಕೈಗಾರಿಕಾ ವ್ಯಾಪಾರದಿಂದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಜ್ಯೋತಿಷ್ಯ ಮತ್ತು ದೀಪಾವಳಿಗೆ ಸಂಬಂಧಿಸಿದ ಇತರ ಲೆಕ್ಕಾಚಾರಗಳ ಪ್ರಕಾರ ನವೆಂಬರ್ 1 ರಂದು ದೀಪಾವಳಿ ಹಬ್ಬವನ್ನು ಆಚರಿಸಲು ಜ್ಯೋತಿಷಿಗಳು ಒಮ್ಮತದಿಂದ ಮನವಿ ಮಾಡಿದ್ದಾರೆ.
ಈ ಬಾರಿ ಅಮಾವಾಸ್ಯೆ ಎರಡು ದಿನ, ಹೀಗಾಗಿಯೇ ಗೊಂದಲ:ದೀಪಾವಳಿ ಆಚರಣೆ ಬಗ್ಗೆ ಆಚಾರ್ಯ ಡಾ.ನವೀನ್ ಚಂದ್ರ ಜೋಶಿ ಮಾತನಾಡಿ, ಈ ವರ್ಷ ಕಾರ್ತಿಕ ಅಮಾವಾಸ್ಯೆ ಒಂದು ದಿನದ ಬದಲು ಎರಡು ದಿನ ಬರುತ್ತಿದೆ. ದೀಪಾವಳಿಯ ದಿನಾಂಕದ ಕುರಿತು ನಿಮ್ಮ ಮನಸ್ಸಿನಲ್ಲಿರುವ ಸಂದಿಗ್ಧತೆಯನ್ನು ಹೋಗಲಾಡಿಸಲು, ಅನುಭವಿ, ಪಂಡಿತ ಜ್ಯೋತಿಷಿಗಳು ಮತ್ತು ದೇಶಾದ್ಯಂತ ಪ್ರಮುಖ ಜ್ಯೋತಿಷ್ಯ ಮತ್ತು ಸಂಸ್ಕೃತ ಸಂಸ್ಥೆಗಳೊಂದಿಗೆ ಮಾತನಾಡಿದ್ದೇವೆ. ಆ ಬಳಿಕ ಒಂದು ನಿರ್ಧಾರಕ್ಕೆ ಬಂದು ದೀಪಾವಳಿಯನ್ನು ನವೆಂಬರ್ 1 ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.