ಸೂರತ್ (ಗುಜರಾತ್): ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಚಕಮಕಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೋಡಿದ ಸೂರತ್‌ನ ವಿದ್ಯಾರ್ಥಿಯೊಬ್ಬ ಸೇನೆಗೆ ಹೆಚ್ಚಿನ ಬಲ ನೀಡುಬೇಕು ಎಂದು ನಿರ್ಧರಿಸಿದ್ದ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅರ್ಥಾ ಚೌಧರಿ, ಸ್ಟಾರ್ಟ್ಅಪ್ವೊಂದನ್ನು ಸ್ಥಾಪಿಸಿ ಕಣ್ಗಾವಲು ಮತ್ತು ಗಸ್ತು ತಿರುಗಲು ಸಾವಿರಾರು ಕಿಲೋಮೀಟರ್ ದೂರದಿಂದಲೇ ಡ್ರೋನ್‌ಗಳನ್ನು ಹಾರಿಸುವ ವ್ಯವಸ್ಥೆಯೊಂದನ್ನು ರಚಿಸಿದ್ದಾನೆ. ಅಂದ್ರೆ ಆತ ರೆಡಿ ಮಾಡಿರುವ ಡ್ರೋನ್ 7000 ಕಿ.ಮೀ ದೂರದಿಂದಲೇ ಕಾರ್ಯ ನಿರ್ವಹಿಸುತ್ತದೆ. ಪ್ರಸ್ತುತ ಓಮನ್, ನೆದರ್ಲ್ಯಾಂಡ್ಸ್ ಮತ್ತು ಬೆಂಗಳೂರಿನಲ್ಲಿ ಕುಳಿತಿರುವ ಜನರಿಂದ ಈ ಸಿಸ್ಟಮ್ ಮೂಲಕ ಸೂರತ್‌ನಲ್ಲಿ ಡ್ರೋನ್‌ಗಳನ್ನು ನಿರ್ವಹಿಸಬಹುದಾಗಿದೆ.
ಸೂರತ್‌ನ ಉದ್ಯಮಿ ಅರ್ಥಾ ಚೌಧರಿ: ಅರ್ಥಾ ಚೌಧರಿ ಕೇವಲ 24 ವರ್ಷ. ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಎರಡನೇ ವರ್ಷದಲ್ಲಿದ್ದಾಗ ಗಾಲ್ವಾನ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವಿನ ಘರ್ಷಣೆ ಮತ್ತು ಭಾರತೀಯ ಸೈನಿಕರ ಹುತಾತ್ಮತೆ ಬಗ್ಗೆ ಓದಿದ್ದರು. ಭದ್ರತಾ ಪಡೆಗಳಿಗೆ ತಾಂತ್ರಿಕವಾಗಿ ಅನುಕೂಲ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ಗಾಲ್ವಾನ್ ಘಾಟಿಯಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅರ್ಥಾ ಯೋಚಿಸಿದ್ದರು.
ಇಂಟರ್‌ಕಂಟ್ರಿ ಡ್ರೋನ್ ಆಪರೇಷನ್ ಸಿಸ್ಟಮ್:ಅರ್ಥಾ ಚೌಧರಿ ಅವರು ಇಲ್ಲಿನ ಡ್ರೋನ್‌ಗಳನ್ನು ಬೇರೆ ದೇಶದಿಂದ ಮತ್ತು ವಿದೇಶಿ ಡ್ರೋನ್‌ಗಳನ್ನು ನಮ್ಮ ದೇಶದಿಂದ ನಿರ್ವಹಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ಈ ಇಂಟರ್‌ಕಂಟ್ರಿ ಡ್ರೋನ್ ಆಪರೇಷನ್ ಸಿಸ್ಟಮ್ ಮೂಲಕ, ಪ್ರಸ್ತುತ ಸೂರತ್‌ನಲ್ಲಿರುವ ಡ್ರೋನ್‌ಗಳು ಬೆಂಗಳೂರು, ಓಮನ್ ಮತ್ತು ನೆದರ್‌ಲ್ಯಾಂಡ್‌ನಲ್ಲಿ ನಿಯಂತ್ರಿಸುವ ಮೂಲಕ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಈ ವ್ಯವಸ್ಥೆ ಮೂಲಕ, ಗಡಿ ಪ್ರದೇಶಗಳಂತಹ ಸ್ಥಳಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ಕಣ್ಗಾವಲು, ತಪಾಸಣೆ, ಪ್ರದೇಶದ ಚಿತ್ರಣ ಮತ್ತು ಟ್ರ್ಯಾಕಿಂಗ್ ಸಹ ಮಾಡಬಹುದಾಗಿದೆ.
ಮೂರು ವರ್ಷಗಳ ಶ್ರಮ: ಈ ಇಂಟರ್ ಕಂಟ್ರಿ ಡ್ರೋನ್ ಆಪರೇಷನ್ ಸಿಸ್ಟಂ ಅಭಿವೃದ್ಧಿಪಡಿಸಲು ಅರ್ಥಾ ಚೌಧರಿ ಅವರ ತಂಡ ಕಳೆದ 3 ವರ್ಷಗಳಿಂದ ಶ್ರಮಿಸುತ್ತಿದೆ. ಇದಕ್ಕಾಗಿ ಅವರು ಸುಮಾರು 2 ಕೋಟಿ ಖರ್ಚು ಮಾಡಿದ್ದಾರೆ. ಸೂರತ್‌ನಲ್ಲಿ 7 ಸಾವಿರ ಕಿಮೀ ದೂರದಲ್ಲಿರುವ ನಿಯಂತ್ರಣ ವ್ಯವಸ್ಥೆಯಿಂದ ಡ್ರೋನ್‌ಗಳನ್ನ ಚಾಲನೆಗೊಳಿಸಬಹುದಾಗಿದೆ.