ಕರ್ನಾಟಕ

karnataka

ETV Bharat / bharat

ಇಂಡಿಯಾ ಒಕ್ಕೂಟದ ಓಲೈಕೆ ರಾಜಕಾರಣದಿಂದ ಸಿಎಎ ಅಡಿಯಲ್ಲಿ ಪೌರತ್ವ ಕೋರುವವರಿಗೆ ಲಭಿಸದ ನ್ಯಾಯ: ಅಮಿತ್ ಶಾ - Amit Shah - AMIT SHAH

ಇಂಡಿಯಾ ಒಕ್ಕೂಟದ ಓಲೈಕೆ ರಾಜಕಾರಣದಿಂದ ಸಿಎಎ ಅಡಿಯಲ್ಲಿ ಪೌರತ್ವ ಕೋರುವವರಿಗೆ ನ್ಯಾಯ ಲಭಿಸಿಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

Union Home Minister Amit Shah  Amit Shah  INDI alliance  CAA
ಅಮಿತ್ ಶಾ (ETV Bharat)

By ANI

Published : Aug 18, 2024, 8:34 PM IST

ಅಹಮದಾಬಾದ್(ಗುಜರಾತ್):''ಭಾರತದಲ್ಲಿ ಪೌರತ್ವ ಬಯಸುತ್ತಿರುವ ಹಿಂದೂ, ಬೌದ್ಧ, ಸಿಖ್ ಅಥವಾ ಜೈನ ನಿರಾಶ್ರಿತರಿಗೆ ಓಲೈಕೆ ರಾಜಕಾರಣದಿಂದ ನ್ಯಾಯ ಲಭಿಸಲಿಲ್ಲ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.

ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

''ಸಿಎಎ ಕೇವಲ ಜನರಿಗೆ ಪೌರತ್ವ ನೀಡುವುದಕ್ಕಲ್ಲ, ಲಕ್ಷಗಟ್ಟಲೆ ಜನರಿಗೆ ನ್ಯಾಯ ಮತ್ತು ಹಕ್ಕುಗಳನ್ನು ನೀಡುವುದು ಆಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಓಲೈಕೆ ರಾಜಕಾರಣದಿಂದಾಗಿ 1947ರಿಂದ 2014ರವರೆಗೆ ಆಶ್ರಯ ಪಡೆದ ಜನರಿಗೆ ನ್ಯಾಯ ಸಿಗಲಿಲ್ಲ. ಅವರು ಹಿಂದೂ, ಬೌದ್ಧ, ಸಿಖ್ ಅಥವಾ ಜೈನ ಎಂಬ ಕಾರಣಕ್ಕಾಗಿ ನೆರೆಯ ದೇಶಗಳಲ್ಲಿ ಅವರನ್ನು ಹಿಂಸಿಸಲಾಯಿತು. ಆದರೆ, ಅವರ ಸ್ವಂತ ದೇಶದಲ್ಲಿಯೂ ಅವರನ್ನು ಹಿಂಸಿಸಲಾಯಿತು. ಇಂಡಿಯಾ ಮೈತ್ರಿಕೂಟದ ತುಷ್ಟೀಕರಣ ರಾಜಕಾರಣವು ಅವರಿಗೆ ನ್ಯಾಯವನ್ನು ಒದಗಿಸಲಿಲ್ಲ. ಆದ್ರೆ, ಪ್ರಧಾನಿ ಮೋದಿ ಅವರಿಗೆ ನ್ಯಾಯ ಒದಗಿಸಿದ್ದಾರೆ. ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಗಿದೆ ಎಂದು ಕಿಡಿಕಾರಿದರು.

"ವಿಭಜನೆ ನಡೆದ ಸಂದರ್ಭದಲ್ಲಿ ಗಲಭೆಗಳು ಸಂಭವಿಸಿದವು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದ ಕೋಟ್ಯಂತರ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ಅದರ ಭಾರತವನ್ನು ಹೊರಬೇಕಾಯಿತು ಮತ್ತು ಅನೇಕ ಕುಟುಂಬಗಳು ನಿರ್ನಾಮವಾದವು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿನ ನಿರಾಶ್ರಿತರಿಗೆ ಭಾರತದಲ್ಲಿ ಪೌರತ್ವ ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ತನ್ನ ಮತ ಬ್ಯಾಂಕ್​ಗೆ ನೀಡಿದ ಭರವಸೆಯನ್ನು ಈಡೇರಿಸಿಲಿಲ್ಲ'' ಎಂದು ಹೇಳಿದರು.

''ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದಾಗಿ 2014ರಲ್ಲಿ ಭರವಸೆ ನೀಡಿತ್ತು. 2019ರಲ್ಲಿ ಕಾನೂನನ್ನು ಅಂಗೀಕರಿಸಲಾಗಿದ್ದರೂ, ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸಿದ ಕಾರಣ ಪೌರತ್ವ ನೀಡಲು ವಿಳಂಬವಾಗಿದೆ. ಆದರೆ, ಸಿಎಎ ಅಡಿಯಲ್ಲಿ ಯಾರಿಂದಲೂ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಇಂದು ಕೂಡ ಕೆಲವು ರಾಜ್ಯ ಸರ್ಕಾರಗಳು ಜನರನ್ನು ದಾರಿ ತಪ್ಪಿಸುತ್ತಿವೆ. ನನ್ನ ರಾಜ್ಯದಲ್ಲಿ 128 ಕುಟುಂಬಗಳು ಭಾರತದ ಪ್ರಜೆಗಳಾಗಿ ಮಾರ್ಪಟ್ಟಿವೆ. ಬಾಂಗ್ಲಾದೇಶವನ್ನು ರಚಿಸಿದಾಗ ಅಲ್ಲಿ 27 ಪ್ರತಿಶತದಷ್ಟು ಹಿಂದೂಗಳಿದ್ದರು. ಆದರೆ ಇಂದು ಅದು 9 ಪ್ರತಿಶತದಷ್ಟಿದೆ. ಏಕೆಂದರೆ, ಅವರು ತಮ್ಮ ಧರ್ಮವನ್ನು ಬದಲಾಯಿಸಲು ಒತ್ತಾಯಕ್ಕೆ ಒಳಗಾಗಿದ್ದರು'' ಎಂದು ತಿಳಿಸಿದರು.

ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಅಹಮದಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕಿದರು. ಅಮಿತ್ ಶಾ ಅವರು ಅಹಮದಾಬಾದ್‌ನಲ್ಲಿ ಆಕ್ಸಿಜನ್ ಪಾರ್ಕ್ ಮತ್ತು ಜೀಲ್ ಅನ್ನು ಉದ್ಘಾಟಿಸಿದರು. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಕೂಡ ಇದೇ ವೇಳೆ ಉಪಸ್ಥಿತರಿದ್ದರು.

''ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 100 ದಿನಗಳಲ್ಲಿ 30 ಲಕ್ಷ ಮರಗಳನ್ನು ನೆಡಲು ಸಂಕಲ್ಪ ಮಾಡಿದೆ'' ಎಂದು ಅಮಿತ್ ಶಾ ಹೇಳಿದರು. ''ನಾನು ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದೇನೆ, ಅಹಮದಾಬಾದ್ ಜನರು ಸಹ ಇದಕ್ಕೆ ಕೈಜೋಡಿಸಬೇಕು. ನಮ್ಮ ಕುಟುಂಬದ ಸದಸ್ಯರ ಸಂಖ್ಯೆಗೆ ಸಮಾನವಾದ ಮರಗಳನ್ನು ನಾವು ನೆಡಬೇಕಿದೆ. ಪರಿಸರ ಬದಲಾವಣೆ ಮತ್ತು ಜಾಗತಿಕ ತಾಪಮಾನವು ಇಂದು ಮನುಷ್ಯರಿಗೆ ಎರಡು ತೀವ್ರ ಅಪಾಯಗಳಾಗಿವೆ. 'ತಾಯಿಯ ಹೆಸರಿನಲ್ಲಿ ಒಂದು ಗಿಡ' ಮತ್ತು ನಮ್ಮ ತಾಯಂದಿರೊಂದಿಗೆ ಗಿಡ ನೆಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತು ಗಿಡ ನೆಟ್ಟು ಅದನ್ನು ಪೋಷಿಸಬೇಕು'' ಎಂದರು.

ಇದನ್ನೂ ಓದಿ:ನಮ್ಮ ಕುಟುಂಬ, ಪಕ್ಷ ಒಡೆಯಲು ಬಿಜೆಪಿ ಸಂಚು: ಜಾರ್ಖಂಡ್ ಸಿಎಂ ಸೊರೆನ್ ಕಿಡಿ - JMM Political Crisis

ABOUT THE AUTHOR

...view details