ಕರ್ನಾಟಕ

karnataka

ETV Bharat / bharat

ಇಟಲಿಯಿಂದ ಫ್ರಾನ್ಸ್​ವರೆಗೆ ಹಡಗಿನಲ್ಲಿ ಅನಂತ್​ ಅಂಬಾನಿ - ರಾಧಿಕಾ ಪ್ರಿ-ವೆಡ್ಡಿಂಗ್​ 2.0: 800 ವಿವಿಐಪಿ ಅತಿಥಿಗಳು! - Anant Ambani Pre Wedding Party - ANANT AMBANI PRE WEDDING PARTY

ಅನಂತ್​ ಅಂಬಾನಿ- ರಾಧಿಕಾ ಮರ್ಚೆಂಟ್​ ಅವರ ಪ್ರಿ - ವೆಡ್ಡಿಂಗ್​ ಎರಡನೇ ಕಾರ್ಯಕ್ರಮ ಸಾಗರದ ಮೇಲೆ ನಡೆಯಲಿದೆ.

ಇಟಲಿಯಿಂದ ಫ್ರಾನ್ಸ್​ವರೆಗೆ ಹಡಗಿನಲ್ಲಿ ಅನಂತ್​ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್
ಇಟಲಿಯಿಂದ ಫ್ರಾನ್ಸ್​ವರೆಗೆ ಹಡಗಿನಲ್ಲಿ ಅನಂತ್​ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್ (Getty Images)

By ETV Bharat Karnataka Team

Published : May 27, 2024, 11:01 PM IST

ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹಪೂರ್ವ ಎರಡನೇ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಈ ಸಲದ ಕಾರ್ಯಕ್ರಮ ಹಡಗಿನಲ್ಲಿ ನಡೆಯುತ್ತಿರುವುದು ವಿಶೇಷ. ವಿವಾಹ ಕಾರ್ಯಕ್ರಮಕ್ಕಾಗಿ ವಿಶೇಷ ಹಡಗನ್ನು ಶೃಂಗರಿಸಲಾಗಿದೆ. ಜೂನ್​ 29 ರಂದು ಇಟಲಿಯಲ್ಲಿ ಆರಂಭವಾಗಿ ಜೂನ್ 1 ರಂದು ಫ್ರಾನ್ಸ್‌ನಲ್ಲಿ ಕೊನೆಗೊಳ್ಳಲಿದೆ.

ನಾಲ್ಕು ದಿನಗಳು ನಡೆಯುವ ಈ ಮೆಗಾ ಪಾರ್ಟಿಯಲ್ಲಿ ಬಾಲಿವುಡ್​ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಸೇರಿದಂತೆ ಸುಮಾರು 800 ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ಹಲವು ವಿವಿಐಪಿ ಅತಿಥಿಗಳು ಇಟಲಿಗೆ ಹಾರಿದ್ದಾರೆ.

ಅನಂತ್​ ಅಂಬಾನಿ- ರಾಧಿಕಾ ಮರ್ಚೆಂಟ್ (Getty Images)

ಇಟಲಿಯಿಂದ ಆರಂಭವಾಗಿ ಫ್ರಾನ್ಸ್​ ತಲುಪುವವರೆಗೂ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಿಗೆ ಸೇವೆ ಸಲ್ಲಿಸಲು ಹಡಗಿನಲ್ಲಿ ಸುಮಾರು 600 ಸಿಬ್ಬಂದಿ ಇರಲಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಲಿದೆ.

ಇನ್ನೂ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಬರೆದಿರುವ ಸಾಲು ಹೀಗಿದೆ. "ಈ ಕಾಲದಲ್ಲಿ ಸ್ನೇಹಿತರು ಒಂದಾಗುವುದೇ ಜೀವಮಾನದ ಸಾಹಸ. ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಆವಿಷ್ಕಾರ ಮತ್ತು ಅನ್ವೇಷಣೆಯ ಪ್ರಯಾಣ ನಡೆಯಲಿದೆ" ಎಂದು ಬರೆದಿರುವುದು ಗಮನ ಸೆಳೆದಿದೆ. ಇದಕ್ಕೂ ಮೊದಲು ಅನಂತ್ ಅಂಬಾನಿ ಅವರ ಮೊದಲ ವಿವಾಹಪೂರ್ವ ಸಮಾರಂಭ ಗುಜರಾತ್​ನ ಜಾಮ್ ನಗರದಲ್ಲಿ ನಡೆದಿತ್ತು.

ಹಡಗಿನಲ್ಲಿ ಕಾರ್ಯಕ್ರಮಗಳು ಹೀಗಿರಲಿವೆ

  • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಕಾರ್ಯಕ್ರಮ ಕ್ರೂಸ್ ಹಡಗಿನಲ್ಲಿ ಮೇ 29 ರಂದು ಇಟಲಿಯಿಂದ ಪ್ರಾರಂಭವಾಗಲಿದೆ. ಅತಿಥಿಗಳನ್ನು ಭೂರಿ ಭೋಜನದ ಮೂಲಕ ಸ್ವಾಗತಿಸಲಾಗುತ್ತದೆ. ಎಲ್ಲ ಅತಿಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರಲಿದ್ದಾರೆ. ರಾತ್ರಿ ಕಾರ್ಯಕ್ರಮಕ್ಕೆ ಪಾಶ್ಚಾತ್ಯ ಡ್ರೆಸ್​ಗಳಲ್ಲಿ ಇರಬಹುದು.
  • ಮೇ 30 ರಂದು 'ರೋಮನ್ ಹಾಲಿಡೇ' ಎಂಬ ಕಾರ್ಯಕ್ರಮವಿದೆ. ಅದರಲ್ಲಿ ಭಾಗವಹಿಸುವವರು ವಿಶೇಷ ಬಟ್ಟೆಗಳನ್ನು ಧರಿಸಲಿದ್ದಾರೆ. ರಾತ್ರಿ ಟೋಗಾ ಪಾರ್ಟಿ ಇರಲಿದೆ. ಇದರಲ್ಲಿ ಹಾಜರಾಗುವವರು ಪ್ರಾಚೀನ ಗ್ರೀಕೋ - ರೋಮನ್ ಶೈಲಿಯ ಬಟ್ಟೆ ಮತ್ತು ಚಪ್ಪಲಿಗಳನ್ನು ಧರಿಸುವರು. ವಿಶೇಷ ವೇಷಭೂಷಣಗಳೇ ಕಾರ್ಯಕ್ರಮದ ವಿಶೇಷ.
  • ಮೇ 31 ರಂದು 'ವಿ ಟರ್ನ್ಸ್ ಒನ್ ಅಂಡರ್ ದಿ ಸನ್' ಎಂಬ ಕಾರ್ಯಕ್ರಮವಿದೆ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಪುತ್ರಿ ವೇದಾ ಅಕ್ಷಾ ಅಂಬಾನಿಯ ಮೊದಲ ಜನ್ಮದಿನ ಆಚರಿಸಲಾಗುತ್ತದೆ.
  • ಅದೇ ಸಂಜೆ, 'ಲೆ ಮಾಸ್ಕ್ವೆರೇಡ್ ಮತ್ತು ಪರ್ಡನ್ ಮೈ ಫ್ರೆಂಚ್ ಆಫ್ಟರ್ ಪಾರ್ಟಿ' ಕಾರ್ಯಕ್ರಮವಿರಲಿದೆ. ಇಲ್ಲಿ ಹಾಜರಾಗುವ ಎಲ್ಲರೂ ಮುಖವನ್ನೂ ಮುಚ್ಚುವ ಉಡುಪಿನಲ್ಲಿ ಇರಲಿದ್ದಾರೆ. ನಂತರ ನಡೆಯುವ 'ಪಾರ್ಡನ್​ ಆಫ್​ ಫ್ರೆಂಚ್​' ಪಾರ್ಟಿಯಲ್ಲಿ ವಿನೋದವಾಗಿ ಕ್ಷಮೆಯಾಚಿಸುವ ಅವಕಾಶ ಇರಲಿದೆ.
  • ಕೊನೆಯ ದಿನವಾದ ಜೂನ್ 1 ರಂದು 'ಲಾ ಡೋಲ್ಸ್ ವೀಟಾ' ಎಂಬ ಕಾರ್ಯಕ್ರಮ ಇರಲಿದೆ. ಇದರರ್ಥ 'ಒಳ್ಳೆಯ ಜೀವನ'.

ಇದನ್ನೂ ಓದಿ:ಅನಂತ್​ ಅಂಬಾನಿ ಗ್ರ್ಯಾಂಡ್​ ಪ್ರೀ ವೆಡ್ಡಿಂಗ್​​ ಸೆಲೆಬ್ರೇಶನ್​​ ಫೋಟೋಗಳಿಲ್ಲಿವೆ ನೋಡಿ

ABOUT THE AUTHOR

...view details