ತೇಜ್‌ಪುರ (ಅಸ್ಸಾಂ):ಸೈನಿಕನಾಗಿದ್ದ ತನ್ನ ಅಜ್ಜ 1962ರಲ್ಲಿ ನಡೆದ ಇಂಡೋ-ಚೀನಾ ಯುದ್ಧದಲ್ಲಿ ಮಡಿದಿದ್ದು, ಅವರನ್ನು ಹುತಾತ್ಮರೆಂದು ಪರಿಗಣಿಸುವಂತೆ ಕೋರಿ ಮೃತ ತಾತ ಎಡ ಮೊಯಾಂಗ್ ಅವರ ಮೊಮ್ಮಗ ತಾನಿ ಮೊಯಾಂಗ್ ಎಂಬಾತ ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ಯುದ್ಧವಾಗಿ ಇದೀಗ 62 ವರ್ಷ. ಈ ಹಿನ್ನೆಲೆ ತಾನಿ ಮೊಯಾಂಗ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.
ದಾಖಲೆಯ ಪ್ರತಿಗಳು (ETV Bharat) ಅಂದು ನಡೆದ ಯುದ್ಧದಲ್ಲಿ ಅರುಣಾಚಲ ಪ್ರದೇಶದ ವಿವಿಧ ಗಡಿ ಭಾಗಗಳಲ್ಲಿದ್ದ ಸ್ಥಳೀಯರು ಚೀನಾದ ಆಕ್ರಮಣ ವಿರೋಧಿಸಲು ಯುದ್ಧಕ್ಕೆ ಸೇರಿಕೊಂಡರು. ಆ ಯುದ್ಧದಲ್ಲಿ ಅನೇಕ ಭಾರತೀಯರು ಮಡಿದರು. ಆದರೆ, ಕೆಲವರ ಬಗ್ಗೆ ಮಾಹಿತಿ ಇಲ್ಲ. ಆಳುವ ಸರ್ಕಾರಗಳು ಅವರನ್ನು ಹುತಾತ್ಮರೆಂದು ಪರಿಗಣಿಸಿಲ್ಲ. ಈ ಯುದ್ಧದಲ್ಲಿ ನನ್ನ ಅಜ್ಜ ಕೂಡ ಭಾಗಿಯಾಗಿದ್ದರು. ಮಡಿದ ಎಷ್ಟೋ ಹೋರಾಟಗಾರರಲ್ಲಿ ನನ್ನ ಅಜ್ಜ ಕೂಡ ಒಬ್ಬರು. ಯಾವುದೋ ಕಾರಣದಿಂದ ಹುತಾತ್ಮರು ಎಂದು ಪರಿಗಣಿಸಲು ಮರೆತಿವೆ. ಇದರಿಂದ ಸರ್ಕಾದಿಂದ ಸಿಗಬೇಕಾದ ಸೌಲಭ್ಯ ಹಾಗೂ ಸ್ಥಾನಮಾನ ಸಿಗುತ್ತಿಲ್ಲ ಎಂದು ತಾನಿ ಮೊಯಾಂಗ್ ಬೇಸರ ಹೊರಹಾಕಿದ್ದಾರೆ.
ದಾಖಲೆಯ ಪ್ರತಿಗಳು (ETV Bharat) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿರುವ ತಾನಿ ಮೊಯಾಂಗ್, ಈಗಿನ ಅಪ್ಪರ್ ಸಿಯಾಂಗ್ ಜಿಲ್ಲೆ ಎಂದು ಕರೆಯಲ್ಪಡುವ ಸಿಯಾಂಗ್ ಜಿಲ್ಲೆಯ ಅಂದಿನ ಈಶಾನ್ಯ ಫ್ರಾಂಟಿಯರ್ ಏಜೆನ್ಸಿಯ (NEFA) ಸಿಬುಕ್ ಹಳ್ಳಿ (ಆದಿ ಪಾಸಿ) ಪ್ರದೇಶದಲ್ಲಿ 1962ರಲ್ಲಿ ಚೀನಾದಿಂದ ಆಕ್ರಮಣ ನಡೆಯಿತು. ಆಗ ಸಿಯಾಂಗ್ ಕೇವಲ ಒಂದು ಜಿಲ್ಲೆಯಾಗಿತ್ತು. ಈಗ ಪೂರ್ವ ಸಿಯಾಂಗ್, ಪಶ್ಚಿಮ ಸಿಯಾಂಗ್, ಅಪ್ಪರ್ ಸಿಯಾಂಗ್, ಸಿಯಾಂಗ್ ಮತ್ತು ಲಾಯರ್ ಸಿಯಾಂಗ್ ಎಂಬ ಐದು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ತಾನು ಸದ್ಯ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್‌ನಲ್ಲಿ ನೆಲೆಸಿದ್ದು, ಪ್ರಧಾನಿಗಳು ಈ ಮನವಿ ಆಲಿಸುವಂತೆ ಕೇಳಿಕೊಂಡಿದ್ದಾರೆ.
ಶಿಬುಕ್ ಗ್ರಾಮದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ತನ್ನ ಅಜ್ಜನ ಸಾವಿನ ಬಗ್ಗೆ ಆಗ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. 1910ರಲ್ಲಿ ಜನಿಸಿದ್ದ ತನ್ನ ಅಜ್ಜ, ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದ. ಇದನ್ನು ಗಮನಿಸಿ ಆಗಿನ ಸರ್ಕಾರವು ಅವರನ್ನು ಟ್ಯೂಟಿಂಗ್ ಗಡಿ ಪ್ರದೇಶದಲ್ಲಿ ರಾಜಕೀಯ ಇಂಟರ್ಪ್ರಿಟರ್ (PI) ಆಗಿ ನೇಮಿಸಿತ್ತು. ಇದೊಂದು ಸಾರ್ವಜನಿಕರ ಮತ್ತು ಸರ್ಕಾರದ ನಡುವಿನ ಸಮಸ್ಯೆ ಆಲಿಸುವ ಕೆಲಸವಾಗಿತ್ತು. 1957ರಲ್ಲಿ ಇಂಡೋ-ಚೀನಾ ಗಡಿಯಲ್ಲಿರುವ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್‌ನಲ್ಲಿ ನನ್ನ ಅಜ್ಜನನ್ನು ಸೇವೆಗಾಗಿ ನೇಮಿಸಲಾಗಿತ್ತು. ಆಗ ಸಭೆ ಮಾಡುವ ಮೂಲಕ ಸಂವಹನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಈ ಸಮಯದಲ್ಲಿ, ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಚೀನೀ ಸೈನಿಕರು ಭಾರತದ ಗಡಿ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಆಗ ನನ್ನ ತಾತನನ್ನು ಅಸ್ಸಾಂ ರೈಫಲ್ಸ್ ತಂಡವನ್ನು ಪ್ರತಿನಿಧಿಸಲು ಮತ್ತು ಗಡಿಯ ಸಮೀಪ ರಹಸ್ಯ ಸ್ಥಳದಲ್ಲಿ ಒಂದು ಆಯಕಟ್ಟಿನ ಹೆಲಿಪ್ಯಾಡ್ ನಿರ್ಮಿಸಲು ನೇಮಿಸಲಾಯಿತು. ಸೆಪ್ಟೆಂಬರ್ 1962ರಲ್ಲಿ, ಚೀನಾ ಆಕ್ರಮಣದ ಒಂದು ತಿಂಗಳ ಮೊದಲು, ಅವರು ಅಸ್ಸಾಂ ರೈಫಲ್ಸ್ ತಂಡವನ್ನು ಮುನ್ನಡೆಸಿದರು. ಯುದ್ಧ ನಡೆಯುತ್ತಿದ್ದಾಗ ಎಡ ಮೊಯಾಂಗ್ ದೈಹಿಕವಾಗಿ ಅಸ್ವಸ್ಥರಾದರು. ದುರದೃಷ್ಟವಶಾತ್ ಅವರು ಸೆಪ್ಟೆಂಬರ್‌ನಲ್ಲಿ ಗಡಿಯ ಗುಡ್ಡದ ತುದಿಯಲ್ಲೇ ಸಾವನ್ನಪ್ಪಿದರು. ಅವರ ದೇಹವನ್ನು ಕಾಡು ಮತ್ತು ದುರ್ಗಮ ಪರ್ವತಗಳಿಂದ ತರಲಾಗಲಿಲ್ಲ. ಅಲ್ಲಿಯೇ ಸಮಾಧಿ ಮಾಡಲಾಯಿತು. ಈ ಬಗ್ಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಕೆಲವು ದಾಖಲೆಗಳನ್ನು ಬಿಚ್ಚಿಟ್ಟರು.
ಇದನ್ನೂ ಓದಿ:ಕನ್ವರ್ ಯಾತ್ರೆ: ಅಂಗಡಿ ಮಾಲೀಕರ ಹೆಸರು, ವಿಳಾಸ ಬಹಿರಂಗ ಆದೇಶ ತಡೆಹಿಡಿದ ಸುಪ್ರೀಂಕೋರ್ಟ್ - SC ON KANWAR YATRA NAME DISPLAY