ಅನಂತ್ನಾಗ್: ಭಾರೀ ಮಳೆ ಹಿನ್ನಲೆ ಅಮರಾನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿಹ್ನಾ ತಿಳಿಸಿದ್ದಾರೆ. ಯಾತ್ರಿಕರ ಶಿಬಿರ ಸೇರಿದಂತೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಯಾತ್ರಾ ಮಾರ್ಗದಲ್ಲಿ ಮಳೆಯಾಗುತ್ತಿದ್ದು, ಹಠಾತ್ ಪ್ರವಾಹಗಳು ಮತ್ತು ಭೂಕುಸಿತ ಉಂಟಾಗಬಹುದು. ಈ ಹಿನ್ನೆಲೆ ಶನಿವಾರದ ಯಾತ್ರಿಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7ನೇ ದಿನದ ಯಾತ್ರೆಯಲ್ಲಿ 5876 ಅಮರನಾಥ ಯಾತ್ರಿಕರು ಜಮ್ಮುವಿನ ಭಗವತಿ ನಗರ್ ಯಾತ್ರಿ ನಿವಾಸದಿಂದ ಅಮರನಾಥ ಗುಹಾ ದೇವಾಲಯದ ಕಡೆ ತೆರಳಿದರು. ಆದರೆ, ಬಳಿಕ ಅವರ ಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ. ಹವಾಮಾನದ ಸುಧಾರಣೆ ಕಂಡಲ್ಲಿ ಮಾತ್ರ ಯಾತ್ರಿಗಳಿಗೆ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹವಾಮಾನ ಮುನ್ಸೂಚನೆ: ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಅಮರನಾಥ ಗುಹಾ ದೇಗುಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರವಿರುವ ಅಮರಾನಾಥ ಗುಹೆಗೆ ಯಾತ್ರಿಗಳು ಕಾಲ್ನಡಿಗೆ ಅಥವಾ ಕುದರೆ ಮೂಲಕ ತೆರಳಬೇಕಿದೆ. ಹಿಮಾಲಯದ ಆಳದಲ್ಲಿರುವ ಈ ಗುಹೆಯನ್ನು ಅನಂತನಾಗ್ನ ಪಹಲ್ಗಾಮ್ ಅಕ್ಷ ಮತ್ತು ಗಂಡರ್ಬಲ್ ಸೋನಾಮಾರ್ಗ್ ಬಾಲ್ಟಾಲ್ ಅಕ್ಷದ ಮೂಲಕ ಪ್ರವೇಶಿಸಬಹುದು. ಈ ವರ್ಷದ ಅಮರನಾಥ ಯಾತ್ರೆಗೆ ಈವರೆಗೆ ಒಟ್ಟು 3.50 ಲಕ್ಷ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ.