ಅಮರಾವತಿ (ಆಂಧ್ರ ಪ್ರದೇಶ):ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಯಾದ ಮುಖೇಶ್ ಕುಮಾರ್ ಮೀನಾ ಅವರ ನಡವಳಿಕೆಯಿಂದಾಗಿ ಆಡಳಿತಾರೂಢ ವೈಎಸ್‌ಆರ್‌ಸಿಪಿಗೆ ಲಾಭವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಚುನಾವಣಾ ಪ್ರಕ್ರಿಯೆಗಳನ್ನು ತಟಸ್ಥ ಮತ್ತು ನಿಷ್ಪಕ್ಷಪಾತವಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಮುಖ್ಯ ಕಾರ್ಯದರ್ಶಿ ಕೆ. ಎಸ್. ಜವಾಹರ್ ರೆಡ್ಡಿ ಮತ್ತು ಡಿಜಿಪಿ ರಾಜೇಂದ್ರನಾಥ ರೆಡ್ಡಿ ಅವರಿಗೆ ಉಸ್ತುವಾರಿ ವಹಿಸಿದರೆ, ಚುನಾವಣೆಗಳು ನ್ಯಾಯಸಮ್ಮತ ಮತ್ತು ಪಾರದರ್ಶಕ ಆಗಿರುವುದಿಲ್ಲ ಹಾಗೂ ಅವರನ್ನು ತಕ್ಷಣವೇ ವರ್ಗಾಯಿಸಬೇಕು ಎಂದು ಎಲ್ಲ ವಿಪಕ್ಷಗಳು ಪದೇ ಪದೇ ಒತ್ತಾಯಿಸುತ್ತಿವೆ.
ಕೇಂದ್ರ ಚುನಾವಣಾ ಆಯೋಗಕ್ಕೆ ವಾಸ್ತವಾಂಶದ ವರದಿಯನ್ನು ಕಳುಹಿಸಿ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕಾದ ಸಿಇಒ ಮೀನಾ ಅವರು ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದೂ ವಿರೋಧ ಪಕ್ಷಗಳು ಟೀಕಿಸುತ್ತಿವೆ. ಮುಖ್ಯಮಂತ್ರಿ ಜಗನ್ ಅವರು ಪಿಂಚಣಿದಾರರ ಮನೆಗಳಿಗೆ ಪಿಂಚಣಿ ವಿತರಣೆಯನ್ನು ಕೈಗೆತ್ತಿಕೊಳ್ಳದೆ ಮತ್ತು ಪಿಂಚಣಿದಾರರ ತೀವ್ರ ತೊಂದರೆಗೆ ಸಿಲುಕಿಸಿ, ಇದಕ್ಕೆ ಪ್ರತಿಪಕ್ಷಗಳನ್ನು ದೂಷಿಸಲು ಸಿಎಸ್ ಮೂಲಕ ಸಂಚು ರೂಪಿಸುತ್ತಿದ್ದಾರೆ. ಪಿಂಚಣಿ ಸಮಸ್ಯೆ ನಿಲ್ಲದೆ ಇದ್ದರೆ, ಇದನ್ನು ಪರಿಹರಿಸಲಾಗಿದೆ ಎಂದು ಸಿಇಒ ಮೀನಾ ಹೇಳಿದ್ದು ಹೇಗೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.
ಅಲ್ಲದೇ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ವೈಎಸ್‌ಆರ್‌ಸಿಪಿ ನಾಯಕರು ದೊಡ್ಡ ಮಟ್ಟದಲ್ಲಿ ಹಲ್ಲೆ ನಡೆಸುತ್ತಿದ್ದರೂ ಸಂಬಂಧಪಟ್ಟ ಡಿಎಸ್‌ಪಿ, ಇನ್ಸ್‌ಪೆಕ್ಟರ್, ಎಸ್‌ಎಸ್‌ಐಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಸಿಇಒ ಈ ರೀತಿ ಯಾವುದಕ್ಕೂ ಸ್ಪಂದಿಸದಿರುವುದು ಚುನಾವಣಾ ಆಯೋಗದ ನಿಷ್ಪಕ್ಷಪಾತ ಮತ್ತು ತಟಸ್ಥತೆಯ ಬಗ್ಗೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.