ಹೈದರಾಬಾದ್: ಅನಾಥ ಮಕ್ಕಳನ್ನು ಭಿಕ್ಷಾಟನೆಗೆ ದೂಡಿ ಅದರಿಂದ ಹಣ ಸಂಪಾದನೆ ಮಾಡುತ್ತಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಅಪರಾಧಿ ಹಿನ್ನಲೆವುಳ್ಳ ಗ್ಯಾಂಗ್‌ಗಳು 10 ಸಾವಿರ ಮಕ್ಕಳ ಮೇಲೆ ಭಿಕ್ಷಾಟನೆಯಂತಹ ದೌರ್ಜನ್ಯಕ್ಕೆ ಒಳಕೆ ಮಾಡುತ್ತಿದೆ. ಅಂತಾರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ಗ್ಯಾಂಗ್‌ಗಳು ನಗರದ ವಿವಿಧ ಭಾಗಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡಿಕೊಂಡು, ಅಕ್ರಮ ಮಾರಾಟ ಮತ್ತು ಶೋಷಣೆಯಲ್ಲಿ ತೊಡಗಿವೆ.
ಖೈರತಾಬಾದ್ ಇಂಟರ್ಸೆಕ್ಷನ್ ಈ ಗಂಭೀರ ಪ್ರಕರಣಗಳನ್ನು ಬೆಳಕಿಗೆ ತಂದಿದ್ದಾರೆ. ಮಹಿಳೆಯೊಬ್ಬಳು ಮಗುವಿಗೆ ಕೈಕೊಳ ತೊಡಿಸಿ ಭಿಕ್ಷಾಟನೆ ಮಾಡಿಸುತ್ತಿರುವುದನ್ನು ಟ್ರಾಫಿಕ್ ಕಾನ್ಸ್ಟೇಬಲ್ ಗಮನಿಸಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಮಹಿಳೆ ಬಳಿ ಹೋಗಲು ಮುಂದಾದಾಗ ಆಕೆ ಮಗುವಿನೊಂದಿಗೆ ಕಣ್ಮರೆಯಾಗಿದ್ದಾಳೆ. ಮತ್ತೊಂದು ಘಟನೆಯಲ್ಲಿ ವರ್ಷದ ಮಗುವನ್ನು ಮಸಬ್ ಟ್ಯಾಂಕ್ ಓವರ್ಪಾಸ್ ಬಳಿ ಅನಾಥವಾಗಿ ಅಳಲು ಬಿಟ್ಟು, ಅದರಿಂದ ಲಾಭ ಪಡೆಯಲು ಇಬ್ಬರು ಮಹಿಳೆಯರು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಮೋಟರ್ ಬೈಕ್ ಚಾಲಕ ಮಧ್ಯಪ್ರವೇಶಕ್ಕೆ ಮುಂದಾದಾಗ, ಮತ್ತೊಬ್ಬ ವ್ಯಕ್ತಿ ಆತನಿಗೆ ಬೆದರಿಕೆ ಹಾಕಿದ್ದು, ಮಹಿಳೆ ತಕ್ಷಣಕ್ಕೆ ಪರಾರಿಯಾಗಿದ್ದಾಳೆ
ಇಂತಹ ಘಟನೆಗಳು ಅಸಮಾನ್ಯವಾಗಿಲ್ಲ. ಅದರಲ್ಲೂ ಟ್ರಾಫಿಕ್ ಜಂಕ್ಷನ್, ಪ್ರವಾಸಿ ತಾಣ ಮತ್ತು ದೇಗುಲಗಳ ಬಳಿ ಹೆಚ್ಚು ಕಂಡು ಬರುತ್ತಿದೆ. ನವಜಾತ ಶಿಶುಗಳಿಂದ 12 ವರ್ಷದೊಳಗಿನ ಮಕ್ಕಳನ್ನು ಈ ರೀತಿಯ ಭಿಕ್ಷಾಟನೆಗೆ ಬಳಕೆ ಮಾಡಲಾಗುತ್ತಿದೆ. ಈ ಮಕ್ಕಳು ಎಲ್ಲಿಂದ ಬಂದವು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ಮಕ್ಕಳನ್ನು ಅಪಹರಿಸಲಾಗಿದ್ಯಾಯಾ ಅಥವಾ ಕುಟುಂಬಗಳಿಂದ ಮಾರಾಟ ಮಾಡಲಾಗಿದೆಯಾ ಎಂಬುದು ತಿಳಿಯದು. ಈ ನಡುವೆ ಮಕ್ಕಳ ಮೇಲೆ ನಡೆಯುತ್ತಿರುವ ಈ ಶೋಷಣೆ ತಡೆಯುವಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಫಲವಾಗಿದೆ.
ಸ್ವಯಂ ಸಂಘಟನಾ ಸಂಸ್ಥೆಗಳು ಅಪರೂಪದ ಪ್ರಕರಣದಲ್ಲಿ ಈ ರೀತಿ ಮಕ್ಕಳನ್ನು ರಕ್ಷಣೆ ಮಾಡಿ, ಅವರನ್ನು ಆರೈಕೆ ಕೇಂದ್ರಕ್ಕೆ ಮತ್ತು ಅವರ ಕುಟುಂಬದೊಂದಿಗೆ ಸೇರಿಸುವ ಕೆಲಸ ಮಾಡುತ್ತಿದೆ. ಇಂತಹ ಒಂದು ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ, ನಗರದಲ್ಲಿ ಅಂದಾಜು 10 ಸಾವಿರ ಬಾಲ ಕಾರ್ಮಿಕರಿದ್ದಾರೆ ಎಂದು ತಿಳಿಸಿದೆ.