ಪ್ರಮುಖ ಟೆಲಿಕಾಂ ಕಂಪನಿ ಏರ್‌ಟೆಲ್ ಪ್ರಿಪೇಯ್ಡ್ ಮೊಬೈಲ್ ರಿಚಾರ್ಜ್ ಯೋಜನೆಗಳಲ್ಲಿ ಹೊಸ ಕ್ರಾಂತಿಯನ್ನು ತರುವತ್ತ ಹೆಜ್ಜೆ ಇಡುತ್ತಿದೆ. ಈಗಾಗಲೇ ತನ್ನ ಗ್ರಾಹಕರಿಗೆ ಡೇಟಾ ಸಾಲ ನೀಡುತ್ತಿರುವ ಏರ್‌ಟೆಲ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತೀಚೆಗೆ 'ತುರ್ತು ವ್ಯಾಲಿಡಿಟಿ ಲೋನ್' ಸೌಲಭ್ಯವನ್ನು ಒದಗಿಸುತ್ತಿದೆ. ಸಕ್ರಿಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನ ಅವಧಿ ಮುಗಿದ ತಕ್ಷಣ ಬಳಕೆದಾರರು ತುರ್ತು ಪರಿಸ್ಥಿತಿಗಳಿಗಾಗಿ 'ವ್ಯಾಲಿಡಿಟಿ ಲೋನ್' ಸೌಲಭ್ಯವನ್ನು ಪಡೆಯಬಹುದು. ಈ ಸಾಲದ ಭಾಗವಾಗಿ, ಏರ್‌ಟೆಲ್ ಬಳಕೆದಾರರು 1.5 GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು. ಆದರೆ ಇದರ ವ್ಯಾಲಿಡಿಟಿ ಕೇವಲ ಒಂದು ದಿನಕ್ಕೆ ಮಾತ್ರ. ಬೇಸ್ ಪ್ರಿಪೇಯ್ಡ್ ಪ್ಲಾನ್‌ನ ಅವಧಿ ಮುಗಿದ ತಕ್ಷಣ ರಿಚಾರ್ಜ್ ಮಾಡಲು ಸಾಧ್ಯವಾಗದವರಿಗೆ, ತುರ್ತು ಸಮಯದಲ್ಲಿ ಈ ಎಮರ್ಜೆನ್ಸಿ ವ್ಯಾಲಿಡಿಟಿ ಲೋನ್ ತುಂಬಾ ಉಪಯುಕ್ತವಾಗಿದೆ.
ಏರ್‌ಟೆಲ್ ತುರ್ತು ವ್ಯಾಲಿಡಿಟಿ ಲೋನ್ ಪಡೆಯುವುದು ಹೇಗೆ?:ಏರ್‌ಟೆಲ್ 'ವ್ಯಾಲಿಡಿಟಿ ಲೋನ್' ಪಡೆಯುವುದು ತುಂಬಾ ಸುಲಭ!! ಹೇಗೆ ಅಂದ್ರೆ- ಮೊದಲಿಗೆಏರ್‌ಟೆಲ್ IVR ಪ್ರೀಕಾಲ್ ಅನೌನ್ಸ್‌ಮೆಂಟ್ ಅಥವಾ USSD ಕೋಡ್ *567*2# ಇದಕ್ಕೆ ಡಯಲ್ ಮಾಡುವ ಮೂಲಕ ವ್ಯಾಲಿಡಿಟಿ ಲೋನ್ ಪಡೆಯಬಹುದು. ಬೇಸ್ ಪ್ರಿಪೇಯ್ಡ್ ಪ್ಲಾನ್ ಅವಧಿ ಮುಗಿದ ನಂತರ, CLI 56323 ಸಂಖ್ಯೆಯಿಂದ ಬರುವ ಸಂದೇಶಕ್ಕೆ '1' ಎಂದು ಎಂದು ಪ್ರತ್ಯುತ್ತರಿಸುವ ಮೂಲಕ ನೀವು ಸಾಲಕ್ಕಾಗಿ ವಿನಂತಿಯನ್ನು ಸಹ ಕಳುಹಿಸಬಹುದು. ಹೀಗೆ ನೀಡುವ ಲೋನ್ಅನ್ನು ಮುಂದಿನ ರಿಚಾರ್ಜ್ ವೇಳೆ ಮರುಪಡೆಯಲಾಗುತ್ತದೆ. ಅದು ಹೇಗೆ ಎಂದರೆ ನಿಮ್ಮ ಹೊಸ ಪ್ಲಾನ್ ವ್ಯಾಲಿಡಿಟಿಯ ಒಂದು ದಿನ ಮುಂಚೆಯೇ ಮುಕ್ತಾಯಗೊಳ್ಳುತ್ತದೆ. ಹೀಗೆ ತುರ್ತು ವ್ಯಾಲಿಡಿಟಿ ಲೋನ್ ಅನ್ನು ಮರುಪಡೆಯಲಾಗುತ್ತದೆ.