ಕರ್ನಾಟಕ

karnataka

ETV Bharat / bharat

ಹಾರಾಟದ ವೇಳೆ ಎಂಜಿನ್ ಬಂದ್​; ಬೆಂಗಳೂರಿನಲ್ಲಿ ವಿಮಾನ ತುರ್ತು ಲ್ಯಾಂಡಿಂಗ್​ - FLIGHT EMERGENCY LANDING

ಭಾನುವಾರ ಸಂಜೆ ಏರ್ ಇಂಡಿಯಾ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

air-india-flight-makes-emergency-landing-after-engine-shut-off-midair
ಸಂಗ್ರಹ ಚಿತ್ರ (IANS)

By ETV Bharat Karnataka Team

Published : Jan 7, 2025, 10:52 AM IST

ಬೆಂಗಳೂರು: ದೆಹಲಿಗೆ ತೆರಳಬೇಕಿದ್ದ ಏರ್​ ಇಂಡಿಯಾ ವಿಮಾನದ ಇಂಜಿನ್​ ವಿಫಲಗೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್​ ಇಂಡಿಯಾ ವಿಮಾನ 2820 ಹಾರಾಟ ನಡೆಸಿತ್ತು. ಇದಾಗಿ ಒಂದು ಗಂಟೆಯೊಳಗೆ ವಿಮಾನ ಮತ್ತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಆಗಿದೆ.

"ಇದು ಭಾನುವಾರ ನಡೆದ ಘಟನೆ. ಯಾವುದೇ ತಾಂತ್ರಿಕ ಮಾಹಿತಿ ನಮ್ಮ ಬಳಿ ಇಲ್ಲ. ಆದರೆ, ವಿಮಾನ ತುರ್ತು ಲ್ಯಾಂಡಿಂಗ್​ ನಡೆಸಿರುವುದು ವರದಿಯಾಗಿದೆ" ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

ಟರ್ಕಿ ವಿಮಾನ ಮಾರ್ಗ ಬದಲಾವಣೆ:ಮಂಗಳವಾರ ಟರ್ಕಿಸ್​ ಏರ್​ಲೈನ್ಸ್​​ನ ವಿಮಾನವೊಂದು ಕೇರಳದ ತಿರುವನಂತಪುರದಲ್ಲಿ ಮಾರ್ಗ ಬದಲಾಯಿಸಿ ಲ್ಯಾಂಡ್​ ಆಯಿತು. ಇಸ್ತಾಂಬುಲ್​ನಿಂದ ಕೊಲೊಂಬೊಗೆ ವಿಮಾನ ತೆರಳುತ್ತಿತ್ತು. ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ಕೆಟ್ಟ ಹವಾಮಾನದಿಂದಾಗಿ ತಿರುವನಂತಪುರದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ.

ವಿಮಾನದಲ್ಲಿ 10 ಮಂದಿ ಸಿಬ್ಬಂದಿ ಸೇರಿದಂತೆ 299 ಪ್ರಯಾಣಿಕರಿದ್ದರು. ಈ ವಿಮಾನ ಮಂಗಳವಾರ ಬೆಳಗ್ಗೆ 6.51ಕ್ಕೆ ತಿರುವನಂತರಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಟ್ಟ ಹವಾಮಾನ ನಿವಾರಣೆಯಾದ ಬಳಿಕ ಮತ್ತೆ ವಿಮಾನ ಹಾರಾಟ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಪ್ರಾಣಾಂತಕವಾದ ಚಳಿ: ಸಾವಿನ ಸಂಖ್ಯೆ 11ಕ್ಕೆ ಏರಿಕೆ: ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವು

ABOUT THE AUTHOR

...view details