ಕರ್ನಾಟಕ

karnataka

ETV Bharat / bharat

ಟೇಕಾಫ್ ವೇಳೆ ಟಗ್ ಟ್ರಕ್‌ಗೆ ಏರ್​ ಇಂಡಿಯಾ ವಿಮಾನ ಡಿಕ್ಕಿ: ತಪ್ಪಿದ ಅನಾಹುತ, 180 ಪ್ರಯಾಣಿಕರು ಸೇಫ್ - flight collides with tug truck - FLIGHT COLLIDES WITH TUG TRUCK

ಏರ್ ಇಂಡಿಯಾ ವಿಮಾನವು ಟೇಕಾಫ್ ಆಗುವ ವೇಳೆ ಟಗ್ ಟ್ರಕ್‌ಗೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಪುಣೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Representative image
ಸಾಂದರ್ಭಿಕ ಚಿತ್ರ (Etv Bharat)

By ETV Bharat Karnataka Team

Published : May 17, 2024, 3:42 PM IST

ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಏರ್ ಇಂಡಿಯಾ ವಿಮಾನವು ಟೇಕಾಫ್ ಆಗುವ ವೇಳೆ ಟಗ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ವೇಳೆ ವಿಮಾನದಲ್ಲಿ ಸುಮಾರು 180 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಪುಣೆಯಿಂದ ಏರ್​ ಇಂಡಿಯಾ ವಿಮಾನವು ಗುರುವಾರ ದೆಹಲಿಗೆ ಟೇಕಾಫ್ ಆಗುತ್ತಿತ್ತು. ಈ ವೇಳೆ, ವಿಮಾನದಲ್ಲಿ ಅಂದಾಜು 180 ಪ್ರಯಾಣಿಕರಿದ್ದರು. ಟಗ್ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ವಿಮಾನದ ಮುಂದಿನ ತುದಿ ಮತ್ತು ಲ್ಯಾಂಡಿಂಗ್ ಗೇರ್ ಬಳಿ ಟೈರ್‌ಗೆ ಹಾನಿಯಾಗಿದೆ. ಈ ಡಿಕ್ಕಿಯ ಹೊರತಾಗಿಯೂ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂಬುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಂದು ಸುದ್ದಿ ಸಂಸ್ಥೆ ಎಎನ್​ಐ ವರದಿ ಮಾಡಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದಾರೆ. ಈ ಘಟನೆ ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲಾಯಿತು. ವಿಮಾನದಿಂದ ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಲಾಯಿತು. ಬಳಿಕ ದೆಹಲಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಯಿತು ಎಂದು ಅಧಿಕಾರಿಯ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಈ ಡಿಕ್ಕಿಗೆ ಕಾರಣ ತಿಳಿಯಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ಟ್ಯಾಕ್ಸಿ ಪ್ರಕ್ರಿಯೆಯಲ್ಲಿ ವೇಳೆ ಟಗ್ ಟ್ರಕ್​ ವಿಮಾನಕ್ಕೆ ಅಪ್ಪಳಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಉಳಿದಂತೆ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಅಡೆತಡೆಗಳಿಲ್ಲದೇ ಮುಂದುವರೆದಿದೆ. ಆದರೂ, ಡಿಕ್ಕಿಯಾದ ವಿಮಾನವನ್ನು ಪರಿಶೀಲನೆ ಮತ್ತು ದುರಸ್ತಿಗಾಗಿ ಸ್ವಲ್ಪ ಸಮಯದವರೆಗೆ ಸೇವೆಯಿಂದ ದೂರ ಇರಿಸಲಾಗಿದೆ. ಈಗ ಆ ವಿಮಾನ ಕಾರ್ಯಾಚರಣೆಗೆ ಸಿದ್ಧವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:ಏರ್​ ಇಂಡಿಯಾ ವಿರುದ್ಧ ಪ್ರತಿಭಟನೆಗೆ ಮುಂದಾದ ವಿಧವೆ ಕುಟುಂಬ; ಕಾರಣ ಇದು

ABOUT THE AUTHOR

...view details