ಸಿಲಿಗುರಿ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ದುರ್ಗಾ ಪೂಜೆ ತುಂಬಾ ಪ್ರಸಿದ್ಧಿ. ದೊಡ್ಡ ದೊಡ್ಡ ಪೆಂಡಾಲ್ಗಳಲ್ಲಿ ವಿನೂತನ ಥೀಮ್ಗಳಲ್ಲಿ ಇಲ್ಲಿ ಕಾಳಿ ಮಾತೆಯನ್ನು ಪ್ರತಿಷ್ಠಾಪಿಸಿ ನವರಾತ್ರಿಯ ಸಂದರ್ಭದಲ್ಲಿ ಪೂಜಿಸಲಾಗುತ್ತದೆ. ಈ ನವರಾತ್ರಿಯ ದುರ್ಗಾ ಪೂಜೆ ನೋಡಲೆಂದೇ ಜನರು ದೇಶ- ವಿದೇಶಗಳಿಂದ ಆಗಮಿಸುತ್ತಾರೆ. ಈ ರೀತಿಯಲ್ಲಿ ದುರ್ಗಾ ಪೂಜೆಗೆ ಹೋಗುವ ಯೋಜನೆಯನ್ನು ನೀವು ನಡೆಸಿದ್ದರೆ, ಅಲ್ಲಿ ಕೇವಲ ದುರ್ಗೆಯನ್ನು ಮಾತ್ರವಲ್ಲ, ರಾಜಸ್ಥಾನ ಭವ್ಯ ಕೋಟೆಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಅಚ್ಚರಿಯಾದರೂ ಹೌದು. ಸಿಲಿಗುರಿಯ ರವೀಂದ್ರ ನಗರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಪೂಜಾ ಪೆಂಡಾಲ್ ಅನ್ನು ರಾಜಸ್ಥಾನದ ಕೋಟೆಯ ಥೀಮ್ ರೀತಿ ವಿನ್ಯಾಸ ಮಾಡಲಾಗುತ್ತಿದೆ. ದುರ್ಗಾ ಪೂಜೆಗೆ ಇನ್ನೊಂದು ತಿಂಗಳು ಬಾಕಿ ಇದ್ದು, ರವೀಂದ್ರ ಕ್ಲಬ್ನ ಸಂಘಟಕರು ಮತ್ತು ನಿವಾಸಿಗಳು, ತಮ್ಮ ಸಮುದಾಯದ ದೊಡ್ಡ ಧಾರ್ಮಿಕ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ನಾವು 72ನೇ ದುರ್ಗಾ ಪೂಜೆಯನ್ನು ಈ ವರ್ಷ ಆಚರಣೆ ಮಾಡುತ್ತಿದ್ದು, ಪಧಾರೊ ಮಹ್ರೆ ದೇಶ್ ಎಂಬ ಟ್ಯಾಗ್ಲೈನ್ ಮಾಡಲಾಗಿದೆ. ನಾವು ರಾಜಸ್ಥಾನದ ಕಲೆಯನ್ನು ಈ ಬಾರಿ ಪೆಂಡಾಲ್ನಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂದು ರವೀಂದ್ರ ಕ್ಲಬ್ನ ವಕ್ತಾರ ಉದ್ಯಾನ್ ದಾಸ್ಗುಪ್ತಾ ತಿಳಿಸಿದರು.