ಕರ್ನಾಟಕ

karnataka

ಸೇಲಂ - ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ; 2 ಕಾರು - ಲಾರಿ ಬೆಂಕಿಗಾಹುತಿ, ಮೂವರು ಸುಟ್ಟು ಕರಕಲು

By ETV Bharat Karnataka Team

Published : Jan 24, 2024, 8:22 PM IST

Updated : Jan 25, 2024, 2:52 PM IST

ಮೂರು ಲಾರಿಗಳು ಮತ್ತು ಎರಡು ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದ ಘಟನೆ ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಸೇಲಂ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

a-horrible-road-accident-in-salem-bengaluru-national-highway
ಸೇಲಂ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ; 2 ಕಾರು - ಲಾರಿ ಬೆಂಕಿಗಾಹುತಿ

ಸೇಲಂ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ; 2 ಕಾರು - ಲಾರಿ ಬೆಂಕಿಗಾಹುತಿ

ಧರ್ಮಾಪುರಿ (ತಮಿಳುನಾಡು):ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಸೇಲಂ ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಐದು ವಾಹನಗಳು ನಡುವೆ ಡಿಕ್ಕಿ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಒಂದು ಲಾರಿ ಮತ್ತು ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ.

ಇಲ್ಲಿನ ತೊಪ್ಪೂರು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯಲ್ಲಿ ಈ ದುರಂತ ನಡೆದಿದೆ. ಧರ್ಮಾಪುರಿಯಿಂದ ಸೇಲಂ ಕಡೆಗೆ ಭತ್ತದ ಚೀಲಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಲಾರಿ ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಕಾರುಗಳು ನಡುವೆ ಮೂರು ಲಾರಿಗಳು ಸಿಲುಕಿಕೊಂಡಿವೆ. ಈ ಇದೇ ವೇಳೆ, ಮುಂದೆ ಹೋಗುತ್ತಿದ್ದ ಒಂದು ಲಾರಿ ಸೇತುವೆಯಿಂದ ಕೆಳಗಡೆಗೆ ಬಿದ್ದಿದೆ. ಆದರೆ, ಅಪಘಾತಕ್ಕೆ ಕಾರಣ ಎನ್ನಲಾಗುವ ಲಾರಿ ಮುಂದೆ ಸಾಗುತ್ತಿದ್ದ ಮತ್ತೊಂದು ಲಾರಿಯೊಂದಿಗೆ ಘರ್ಷಣೆಗೆ ಒಳಗಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಎರಡು ಕಾರುಗಳಿಗೂ ಬೆಂಕಿ ತಲುಗಿದೆ ಎನ್ನಲಾಗುತ್ತಿದೆ. ಇದರ ದೃಶ್ಯಗಳು ಸಿಸಿವಿಟಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿವೆ.

ಈ ಘಟನೆಯಲ್ಲಿ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಮೂರು ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೃತರ ವಿವರಗಳು ಅಲಭ್ಯವಾಗಿಲ್ಲ. ಧರ್ಮಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಟೀಫನ್ ಜೇಸುಪಾದಂ ಹಾಗೂ ತೊಪ್ಪೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಭೀಕರ ಅಪಘಾತದಿಂದಾಗಿ ಸೇಲಂ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಸಹ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರ ಘಟನೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Last Updated : Jan 25, 2024, 2:52 PM IST

ABOUT THE AUTHOR

...view details