ಕರ್ನಾಟಕ

karnataka

ETV Bharat / bharat

ಖಿನ್ನತೆಯಿಂದ ನರರೋಗ ತಜ್ಞ ಆತ್ಮಹತ್ಯೆ - maulana azad medical college - MAULANA AZAD MEDICAL COLLEGE

ದೆಹಲಿಯ ಹಲವು ಕಡೆ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿದ ಜನರು ವಿವಿಧ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ವರದಿಯಾಗಿವೆ.

a-30-year-old-resident-doctor-has-committed-suicide-in-maulana-azad-medical-college-hostel
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

By ETV Bharat Karnataka Team

Published : Aug 28, 2024, 1:52 PM IST

Updated : Aug 28, 2024, 5:16 PM IST

ನವದೆಹಲಿ: ಮೌಲಾನಾ ಅಜಾದ್​ ಮೆಡಿಕಲ್​ ಕಾಲೇಜ್​ (ಎಂಎಎಂಸಿ)ನ ಮೊದಲ ವರ್ಷದ ಎಂಡಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಯುವಕ ಕಾಲೇಜ್​ ಹಾಸ್ಟೆಲ್​ನಲ್ಲಿ ಈ ಕೃತ್ಯ ಮಾಡಿಕೊಂಡಿದ್ದಾನೆ. ಸಾವನ್ನಪ್ಪಿದ ಯುವಕ 30 ವರ್ಷದ ಅಮಿತ್​ ಕುಮಾರ್​ ಎಂದು ಗುರುತಿಸಲಾಗಿದ್ದು, ಈತ ಹರಿಯಾಣದ ಬಹುದುರ್ಗಢನ ನಿವಾಸಿ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ. ಮೃತ ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಗೆ ಕುಟುಂಬಸ್ಥರ ವಿಚಾರಣೆಗೆ ಮುಂದಾಗಿದ್ದಾರೆ.

ಅಮಿತ್​ರ ಸಂಬಂಧಿ ಪ್ರತಿನಿತ್ಯ ಸಂಜೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತಿದ್ದರು. ಮಂಗಳವಾರ ಕೂಡ ಆತನ ಭೇಟಿಗೆ ಅಮಿತ್​​ ಹಾಸ್ಟೆಲ್​ಗೆ ಬಂದಿದ್ದಾರೆ, ಆತ ರೂಮ್​ ಬಾಗಿಲನ್ನು ತೆಗೆಯದಿದ್ದಾಗ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾದ ನರ ರೋಗತತಜ್ಞ: ದೆಹಲಿ ಏಮ್ಸ್​​ನಲ್ಲಿ ಕೂಡ ನರರೋಗ ತಜ್ಞರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಓವರ್​ಡೋಸ್ ಔಷಧ​ ಪಡೆಯುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 34 ವರ್ಷದ ವೈದ್ಯ ತಮ್ಮ ಹೆಂಡತಿಯೊಂದಿಗೆ ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಖಿನ್ನತೆ ಹಿನ್ನೆಲೆಯುಲ್ಲಿ ವೈದ್ಯ ಚಿಕಿತ್ಸೆ ಪಡೆಯುತ್ತಿದ್ದರು ಎಂದೂ ಕೂಡಾ ತಿಳಿದು ಬಂದಿದೆ.

ನರ್ಸಿಂಗ್​ ವಿದ್ಯಾರ್ಥಿ ಆತ್ಮಹತ್ಯೆ: ಇನ್ನು ಪೂರ್ವ ದೆಹಲಿಯ ಹೊಸ ಅಶೋಕ್​ನಗರ ಪ್ರದೇಶದಲ್ಲಿ ಅನುಮಾನಸ್ಪದ ಪರಿಸ್ಥಿತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಆಕೆ ನೆಲೆಸಿದ್ದ ಪಿಜಿಯಲ್ಲಿ ಮೃತದೇಹ ಪತ್ತೆಯಾಗಿದೆ. 22 ವರ್ಷದ ನಿಖಿತಾ ಸಾವನ್ನಪ್ಪಿದ ವಿದ್ಯಾರ್ಥಿನಿ ಆಗಿದ್ದಾರೆ. ಮಧ್ಯಪ್ರದೇಶ ಮೂಲಕ ನಿಖಿತ ನರ್ಸಿಂಗ್​ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಹೊಸ ಅಶೋಕ್​ ನಗರದ ಪ್ರದೇಶದ ಪಿಜಿಯಲ್ಲಿ ಇವರು ನೆಲೆಸಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಡ್ರಿಪ್​ಗೆ ವಿಷಕಾರಿ ಅಂಶವನ್ನು ಸೇರಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಮರಿಗೆ ಉರುಳಿ ಬಿದ್ದ ಸೇನಾ ಟ್ರಕ್​: ಮೂವರು ಯೋಧರ ದುರ್ಮರಣ

Last Updated : Aug 28, 2024, 5:16 PM IST

ABOUT THE AUTHOR

...view details