ಮುಂಬೈ (ಮಹಾರಾಷ್ಟ್ರ) : ಇಲ್ಲಿನ ನಾಂದೇಡ್ ಜಿಲ್ಲೆಯಲ್ಲಿ ದೇವಸ್ಥಾನವೊಂದರ ಹಬ್ಬದ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಿದ ಕನಿಷ್ಠ 90 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಗಾಂವ್‌ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಒಂದು ಔತಣವನ್ನು ಆಯೋಜಿಸಿ, ಶಿವನ ದೇವಾಲಯದ ಹೊರಗೆ ಭಕ್ತರಿಗೆ ಪ್ರಸಾದವನ್ನು ನೀಡಲಾಗಿತ್ತು. ಅವರಿಗೆ ತಿನ್ನಲು 'ಅಂಬಿಲ್' (ಗಂಜಿ, ಅಂಬಲಿ) ಮತ್ತು 'ಖೀರ್' (ಹಾಲಿನಿಂದ ಮಾಡಿದ ಸಿಹಿ ಖಾದ್ಯ) ತಿನ್ನಲು ನೀಡಲಾಗಿತ್ತು. ಆದರೆ ಅಂಬಲಿ ಸೇವಿಸಿದ ನಂತರ ಭಕ್ತರು ತಲೆಸುತ್ತು ಬಂದು ವಾಂತಿ ಮಾಡಿಕೊಳ್ಳಲು ಆರಂಭಿಸಿದರು'' ಎಂದು ತಿಳಿದು ಬಂದಿದೆ.