ನವದೆಹಲಿ: ಕತ್ತಲಾಗುತ್ತಿದ್ದಂತೆ ದೆಹಲಿ ಬಸ್ನ ಪ್ರಯಾಣವು ಅಸುರಕ್ಷತೆಯಿಂದ ಕೂಡಿರುತ್ತದೆ ಎಂದು ಶೇ 75ರಷ್ಟು ಮಹಿಳೆಯರು ತಿಳಿಸಿದ್ದಾರೆ. ಮಹಿಳೆಯರ ಸುರಕ್ಷತೆ ಕಾಯುವ ಉದ್ದೇಶದಿಂದಲೇ ಸರ್ಕಾರ ನಗರದಲ್ಲಿ ಪಾವತಿ ರಹಿತ ಬಸ್ ಪ್ರಯಾಣಕ್ಕಾಗಿ ಯೋಜನೆ ರೂಪಿಸಿದ ನಡುವೆಯೂ ಈ ಅಭಿಪ್ರಾಯ ಕೇಳಿ ಬಂದಿದೆ.
ರೈಡಿಂಗ್ ದಿ ಜಸ್ಟಿಸ್ ರೂಟ್ ವರದಿಯಲ್ಲಿ ಸರ್ಕಾರೇತರ ಸಂಘಟನೆಯಾದ ಗ್ರೀನ್‌ಪೀಸ್ ಈ ಸಂಬಂಧ ಸಮೀಕ್ಷೆ ನಡೆಸಿ, ರೈಡಿಂಗ್ ದಿ ಜಸ್ಟೀಸ್ ರೂಟ್ ಎಂಬ ವರದಿ ಹೊರತಂದಿದೆ. ಸಮೀಕ್ಷೆಯಲ್ಲಿ ಶೇ 75ರಷ್ಟು ಮಹಿಳೆಯರು ಪಿಂಕ್ ಟಿಕೆಟ್ ಯೋಜನೆಯಿಂದ ಗಣನೀಯ ಉಳಿತಾಯವಾಗುತ್ತಿದೆ ಎಂದಿದ್ದು, ಈ ಉಳಿತಾಯವಾದ ಹಣವೂ ತುರ್ತು ಪರಿಸ್ಥಿತಿಗಳು ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಇತರ ತುರ್ತು ಸಂದರ್ಭದಲ್ಲಿ ಬಳಕೆ ಮಾಡುವುದಾಗಿ ತಿಳಿಸಿದ್ದಾರೆ.
ಜೊತೆಗೆ ಶೇ 25ರಷ್ಟು ಈ ಹಿಂದೆ ನಾವು ಬಸ್ ಸಂಚಾರಕ್ಕೆ ಮುಂದಾಗುತ್ತಿರಲಿಲ್ಲ. ಆದರೆ, ಇದೀಗ ನಾವು ಸಾರ್ವಜನಿಕ ಬಸ್ ಸೇವೆಯನ್ನು ಹೆಚ್ಚಾಗಿ ಬಳಕೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವೂ ಮಹಿಳೆಯರಿಗಾಗಿ ಸುರಕ್ಷಿತ ಹಾಗೂ ಪಾವತಿ ರಹಿತ ಪಿಂಕ್ ಟಿಕೆಟ್ ಯೋಜನೆಯನ್ನು 2019ರಲ್ಲಿ ಜಾರಿಗೆ ತಂದಿತು.
ಸಕಾಲಕ್ಕೆ ಬಸ್ ಇಲ್ಲದಿರುವುದು ಅಸುರಕ್ಷತೆಗೆ ಕಾರಣ:ಇದರ ಹೊರತಾಗಿ ಶೇ 77ರಷ್ಟು ಮಹಿಳೆಯರು ಕತ್ತಲಾದ ಮೇಲೆ ಮಂದ ಬೆಳಕು ಮತ್ತು ಬಸ್ ಸಕಾಲಕ್ಕೆ ಇಲ್ಲದಿರುವುದರಿಂದ ಈ ಸಮಯದಲ್ಲಿ ಪ್ರಯಾಣದ ಬಗ್ಗೆ ಅಸುರಕ್ಷತೆ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಜನದಟ್ಟಣೆಯ ಬಸ್ನಲ್ಲಿ ಮಹಿಳೆಯರು ಕಿರುಕುಳಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.