ಕರ್ನಾಟಕ

karnataka

ETV Bharat / bharat

6,900 ಸಿಬಿಐ ಪ್ರಕರಣಗಳು ವಿಚಾರಣೆಗೆ ಬಾಕಿ: 361 ಕೇಸ್ 20 ವರ್ಷ ಹಳೆಯವು! - CBI Cases Pending Trial - CBI CASES PENDING TRIAL

ದೇಶದ ವಿವಿಧ ನ್ಯಾಯಾಲಯಗಳಲ್ಲಿ 6,900ಕ್ಕೂ ಅಧಿಕ ಸಿಬಿಐ ದಾಖಲಿಸಿದ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.

ಸಿಬಿಐ (ಸಾಂದರ್ಭಿಕ ಚಿತ್ರ)
ಸಿಬಿಐ (ಸಾಂದರ್ಭಿಕ ಚಿತ್ರ) (IANS)

By PTI

Published : Sep 2, 2024, 1:14 PM IST

ನವದೆಹಲಿ: ಸಿಬಿಐ ತನಿಖೆ ನಡೆಸುತ್ತಿರುವ 6,900ಕ್ಕೂ ಅಧಿಕ ಭ್ರಷ್ಟಾಚಾರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ ಎಂದು ಕೇಂದ್ರ ವಿಚಕ್ಷಣಾ ಆಯೋಗದ (ಸಿವಿಸಿ) ಇತ್ತೀಚಿನ ವಾರ್ಷಿಕ ವರದಿ ತಿಳಿಸಿದೆ. ಈ ಪೈಕಿ 361 ಪ್ರಕರಣಗಳ ವಿಚಾರಣೆ 20 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಇದಲ್ಲದೆ, 658 ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಬಿಐ ತನಿಖೆ ನಡೆಸುವುದು ಇನ್ನೂ ಬಾಕಿ ಇದ್ದು, ಇವುಗಳ ಪೈಕಿ 48 ಪ್ರಕರಣಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲದಿಂದ ತನಿಖೆಗಾಗಿ ಕಾಯುತ್ತಿವೆ.

ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿರುವ ಒಟ್ಟು 6,903 ಪ್ರಕರಣಗಳಲ್ಲಿ 1,379 ಪ್ರಕರಣಗಳು ಮೂರು ವರ್ಷಗಳಿಗಿಂತ ಕಡಿಮೆ, 875 ಪ್ರಕರಣಗಳು ಮೂರು ವರ್ಷಗಳಿಗಿಂತ ಹೆಚ್ಚು ಮತ್ತು ಐದು ವರ್ಷಗಳವರೆಗೆ ಮತ್ತು 2,188 ಪ್ರಕರಣಗಳು ಐದು ವರ್ಷಗಳಿಗಿಂತ ಹೆಚ್ಚು ಮತ್ತು ಹತ್ತು ವರ್ಷಗಳವರೆಗೆ ಬಾಕಿ ಉಳಿದಿವೆ ಎಂದು ಸಿವಿಸಿ ತಿಳಿಸಿದೆ.

2,100 ಪ್ರಕರಣಗಳು ಹತ್ತು ವರ್ಷಗಳಿಗಿಂತ ಹೆಚ್ಚು ಮತ್ತು ಇಪ್ಪತ್ತು ವರ್ಷಗಳವರೆಗೆ ಮತ್ತು 361 ಪ್ರಕರಣಗಳು 20 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ ಎಂದು ಸಿವಿಸಿಯ 2023ರ ವಾರ್ಷಿಕ ವರದಿ ತಿಳಿಸಿದೆ.

"ಡಿಸೆಂಬರ್ 31, 2023ರ ವೇಳೆಗೆ 6,903 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. 2023 ರ ಅಂತ್ಯದ ವೇಳೆಗೆ 2,461 ಪ್ರಕರಣಗಳು 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ ಎಂಬುದು ಕಳವಳಕಾರಿ ವಿಷಯವಾಗಿದೆ" ಎಂದು ವರದಿ ಹೇಳಿದೆ.

ಅಲ್ಲದೆ, ಸಿಬಿಐ ಮತ್ತು ಆರೋಪಿಗಳು ಸಲ್ಲಿಸಿದ 12,773 ಮೇಲ್ಮನವಿಗಳು, ಪರಿಷ್ಕರಣೆಗಳು ವಿವಿಧ ಹೈಕೋರ್ಟ್​ಗಳು ಮತ್ತು ಸುಪ್ರೀಂ ಕೋರ್ಟ್​ನಲ್ಲಿ ಬಾಕಿ ಉಳಿದಿವೆ ಎಂದು ಸಿವಿಸಿ ವರದಿ ತಿಳಿಸಿದೆ.

ಈ ಮೇಲ್ಮನವಿಗಳು, ಪರಿಷ್ಕರಣಾ ಅರ್ಜಿಗಳ ಪೈಕಿ 501 ಅರ್ಜಿಗಳು 20 ವರ್ಷಗಳಿಗಿಂತ ಹೆಚ್ಚು ಕಾಲ, 1,138 ಅರ್ಜಿಗಳು 15 ವರ್ಷಕ್ಕಿಂತ ಹೆಚ್ಚು ಹಾಗೂ 20 ವರ್ಷಗಳಿಗಿಂತ ಕಡಿಮೆ, 2,558 ಅರ್ಜಿಗಳು 10 ವರ್ಷಗಳಿಗಿಂತ ಹೆಚ್ಚು ಹಾಗೂ 15 ವರ್ಷಗಳಿಗಿಂತ ಕಡಿಮೆ, 3,850 ಅರ್ಜಿಗಳು ಐದು ವರ್ಷಗಳಿಗಿಂತ ಹೆಚ್ಚು ಹಾಗೂ 10 ವರ್ಷಗಳಿಗಿಂತ ಕಡಿಮೆ, 2,172 ಅರ್ಜಿಗಳು ಎರಡು ವರ್ಷಗಳಿಗಿಂತ ಹೆಚ್ಚು ಹಾಗೂ ಐದು ವರ್ಷಗಳಿಗಿಂತ ಕಡಿಮೆ ಮತ್ತು 2,554 ಅರ್ಜಿಗಳು ಎರಡು ವರ್ಷಗಳಿಗಿಂತ ಕಡಿಮೆ ಅವಧಿಗೆ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಬಿಐ ತನಿಖೆ ಬಾಕಿ ಇರುವ 658 ಪ್ರಕರಣಗಳಲ್ಲಿ 48 ಪ್ರಕರಣಗಳು ಐದು ವರ್ಷಗಳಿಗಿಂತ ಹೆಚ್ಚು, 74 ಪ್ರಕರಣಗಳು ಮೂರು ವರ್ಷಗಳಿಗಿಂತ ಹೆಚ್ಚು ಹಾಗೂ ಐದು ವರ್ಷಗಳಿಗಿಂತ ಕಡಿಮೆ, 75 ಪ್ರಕರಣಗಳು ಎರಡು ವರ್ಷಗಳಿಗಿಂತ ಹೆಚ್ಚು ಹಾಗೂ ಮೂರು ವರ್ಷಗಳಿಗಿಂತ ಕಡಿಮೆ, 175 ಪ್ರಕರಣಗಳು ಒಂದು ವರ್ಷಕ್ಕಿಂತ ಹೆಚ್ಚು ಹಾಗೂ ಎರಡು ವರ್ಷಗಳಿಗಿಂತ ಕಡಿಮೆ ಮತ್ತು 286 ಪ್ರಕರಣಗಳು ಒಂದು ವರ್ಷಕ್ಕಿಂತ ಕಡಿಮೆ ಕಾಲದಿಂದ ತನಿಖೆಗೆ ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.

2023 ರಲ್ಲಿ, 876 ನಿಯಮಿತ ಪ್ರಕರಣಗಳು/ಪ್ರಾಥಮಿಕ ವಿಚಾರಣೆಗಳನ್ನು ಸಿಬಿಐ ದಾಖಲಿಸಿದೆ. 2023ರಲ್ಲಿ ಲಂಚ ಪ್ರಕರಣಗಳನ್ನು ಪತ್ತೆ ಹಚ್ಚಲು 198 ಹಾಗೂ ಅಕ್ರಮ ಆಸ್ತಿ ಹೊಂದಿರುವ 37 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. 876 ಪ್ರಕರಣಗಳಲ್ಲಿ 91 ಪ್ರಕರಣಗಳನ್ನು ಸಾಂವಿಧಾನಿಕ ನ್ಯಾಯಾಲಯಗಳ ಆದೇಶದ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಮತ್ತು 84 ಪ್ರಕರಣಗಳನ್ನು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಉಲ್ಲೇಖಗಳ ಮೇಲೆ ಪ್ರಾರಂಭಿಸಲಾಗಿದೆ ಎಂದು ಅದು ಹೇಳಿದೆ.

2023ರಲ್ಲಿ ಸಿಬಿಐ 873 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿದೆ. ಇದಲ್ಲಿ 755 ಸಾಮಾನ್ಯ ಪ್ರಕರಣಗಳು ಮತ್ತು 118 ಪ್ರಾಥಮಿಕ ವಿಚಾರಣೆಗಳು ಸೇರಿವೆ.

"2023ರ ಅಂತ್ಯದ ವೇಳೆಗೆ, ಒಟ್ಟು 1,028 ಪ್ರಕರಣಗಳು ಬಾಕಿ ಉಳಿದಿವೆ. ಅದರಲ್ಲಿ 956 ಸಾಮಾನ್ಯ ಪ್ರಕರಣಗಳು, ಜೊತೆಗೆ 72 ಪ್ರಾಥಮಿಕ ವಿಚಾರಣೆಗಳು ಸೇರಿವೆ. 2023ರ ಅಂತ್ಯದ ವೇಳೆಗೆ 510 ಸಾಮಾನ್ಯ ಪ್ರಕರಣಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ ಮತ್ತು 58 ಪ್ರಾಥಮಿಕ ವಿಚಾರಣೆಗಳು ಮೂರು ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿವೆ ಎಂದು ಅದು ಹೇಳಿದೆ. 2023ರಲ್ಲಿ ಸಿಬಿಐ 674 ಸರ್ಕಾರಿ ನೌಕರರನ್ನು (195 ಗೆಜೆಟೆಡ್ ಅಧಿಕಾರಿಗಳು) ಒಳಗೊಂಡ 552 ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿದೆ ಎಂದು ಸಿವಿಸಿ ತಿಳಿಸಿದೆ.

ವಿಚಾರಣೆ ಮತ್ತು ಶಿಕ್ಷೆಯ ವಿವರಗಳನ್ನು (ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕರಣಗಳು ಸೇರಿದಂತೆ) ನೀಡಿರುವ ವರದಿಯು, 636 ನ್ಯಾಯಾಲಯ ಪ್ರಕರಣಗಳಲ್ಲಿ ತೀರ್ಪು ಬಂದಿದೆ ಎಂದು ಹೇಳಿದೆ. ಈ ಪೈಕಿ 411 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ, 140 ಪ್ರಕರಣಗಳ ಖುಲಾಸೆಯಾಗಿದೆ, 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಮತ್ತು 61 ಪ್ರಕರಣಗಳನ್ನು ಇತರ ಕಾರಣಗಳಿಗಾಗಿ ವಿಲೇವಾರಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ. 2023ರಲ್ಲಿ, ಶಿಕ್ಷೆಯ ಪ್ರಮಾಣವು ಶೇಕಡಾ 71.47ರಷ್ಟಿದ್ದರೆ, 2022ರಲ್ಲಿ ಶೇಕಡಾ 74.59ರಷ್ಟಿತ್ತು.

ವರದಿಯ ಪ್ರಕಾರ, 2023ರ ಡಿಸೆಂಬರ್ 31ರ ವೇಳೆಗೆ ಸಿಬಿಐನಲ್ಲಿ ಮಂಜೂರಾದ 7,295 ಹುದ್ದೆಗಳ ಪೈಕಿ 1,610 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಲ್ಲಿ 1,040 ಕಾರ್ಯನಿರ್ವಾಹಕ ಶ್ರೇಣಿಗಳು, 84 ಕಾನೂನು ಅಧಿಕಾರಿಗಳು, 53 ತಾಂತ್ರಿಕ ಅಧಿಕಾರಿಗಳು, 388 ಸಚಿವಾಲಯದ ಸಿಬ್ಬಂದಿ ಮತ್ತು 45 ಕ್ಯಾಂಟೀನ್ ಸಿಬ್ಬಂದಿ ಹುದ್ದೆಗಳು ಸೇರಿವೆ.

ಇದನ್ನೂ ಓದಿ: ಜಿಎಸ್​ಟಿ ಕಾಯ್ದೆ ತಿದ್ದುಪಡಿಯ ಸಾಂವಿಧಾನಿಕತೆ ಪ್ರಶ್ನಿಸಿದ ಅರ್ಜಿ ಸುಪ್ರೀಂ ಕೋರ್ಟ್​ನಲ್ಲಿ ವಜಾ - Goods And Services Tax

ABOUT THE AUTHOR

...view details