ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್) 10ನೇ ಹಾಗು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ 6 ಡಿಜಿಟ್ ಡಿಜಿಲಾಕರ್ ಪ್ರವೇಶ ಕೋಡ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಶಾಲೆಗಳು ತಮ್ಮ ಸ್ವಂತ ಡಿಜಿಲಾಕರ್ ಖಾತೆಗಳಿಂದ 6 ಡಿಜಿಟ್ ಡಿಜಿಲಾಕರ್ ಪ್ರವೇಶ ಕೋಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ.
ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ 6 ಸಂಖ್ಯೆಯ ಪ್ರವೇಶ ಕೋಡ್ ಪಡೆಯಬೇಕಿದೆ. ಸಿಬಿಎಸ್‌ಸಿ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಡಿಜಿಲಾಕರ್‌ನಲ್ಲಿ ಲಾಗಿನ್ ಆಗಿ ತಮ್ಮ ಫಲಿತಾಂಶ ಮತ್ತು ಇತರ ಅಧಿಕೃತ ದಾಖಲೆಗಳನ್ನು ನೋಡಬಹುದು.
ಫಲಿತಾಂಶ ತಿಳಿಯುವುದು ಹೇಗೆ?
- cbse.digitallocker.gov.in ಗೆ ಹೋಗಿ.
- ಸ್ಕೂಲ್ ಲಾಗಿನ್: Enter the required credentials and 'Login as School' ಆಯ್ಕೆ ಮಾಡಿ.
- ಡೌನ್‌ಲೋಡ್ ಕೋಡ್: 'Download Access Code file' ಆಯ್ಕೆ ಮಾಡಿ.
- 10ನೇ ತರಗತಿಗಾಗಿ: ‘Download Access Code for Class X’ ಕ್ಲಿಕ್ ಮಾಡಿ.
- 12ನೇ ತರಗತಿಗೆ: ‘Download Access Code for Class XII’ ಕ್ಲಿಕ್ ಮಾಡಿ.
- ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಶಾಲೆಗಳು ಪ್ರವೇಶ ಕೋಡ್‌ಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು
ಡಿಜಿಲಾಕರ್ ಖಾತೆ ತೆರೆಯುವುದು ಹೇಗೆ?: ನಿಮ್ಮ ಫಲಿತಾಂಶಗಳನ್ನು ತಿಳಿದುಕೊಳ್ಳಲು ನಿಮಗೆ ಡಿಜಿಲಾಕರ್ ಖಾತೆಯ ಅಗತ್ಯವಿದೆ. ಖಾತೆ ತಯಾರಿಸುವ ವಿಧಾನ ಇಲ್ಲಿದೆ.
- ನಿಮ್ಮ ಶಾಲೆಯಿಂದ 6 ಡಿಜಿಟ್ ಪ್ರವೇಶ ಕೋಡ್ ಪಡೆಯಿರಿ. ಇದಕ್ಕಾಗಿ ಶಾಲೆಯ ಆಡಳಿತ ಕಚೇರಿಯನ್ನು ಸಂಪರ್ಕಿಸಿ.
- https://digilocker.gov.in ಗೆ ಹೋಗಿ ಅಥವಾ Google Play Store ಅಥವಾ Apple App Store ನಿಂದ DigiLocker ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ನಿಮ್ಮ ಶಾಲೆಯು ಒದಗಿಸಿದ 6 ಟಿಜಿಟ್ ಪ್ರವೇಶ ಕೋಡ್ ನಮೂದಿಸಿ. ನಿಮ್ಮ ಪ್ರವೇಶ ಕೋಡ್ ಕೇವಲ 5 ಅಂಕೆಗಳನ್ನು ಹೊಂದಿದ್ದರೆ, ಅದನ್ನು 6-ಅಂಕಿಯ ಸಂಖ್ಯೆಯನ್ನು ಮಾಡಲು ಆರಂಭದಲ್ಲಿ ಶೂನ್ಯವನ್ನು ಸೇರಿಸಿ.
- ಡಿಜಿಲಾಕರ್‌ನಲ್ಲಿನ ವಿವರಗಳು ನಿಮ್ಮ ಶಾಲಾ ದಾಖಲೆಗಳಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಮೊಬೈಲ್ ನಂಬರ್ ನಮೂದಿಸಿರಿ. ಈ ಸಂಖ್ಯೆಯಲ್ಲಿ ನೀವು ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ಸ್ವೀಕರಿಸುತ್ತೀರಿ; ನಿಮ್ಮ ಫೋನ್ ಅನ್ನು ಪರಿಶೀಲಿಸಲು ಮತ್ತು ನಿಮ್ಮ ಖಾತೆಯ ಸೆಟಪ್ ಅನ್ನು ದೃಢೀಕರಿಸಲು ಈ OTP ಅನ್ನು ನಮೂದಿಸಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನಿಮ್ಮ ಡಿಜಿಲಾಕರ್ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ.