ಕೋಲ್ಕತ್ತಾ, ಪಶ್ಚಿಮ ಬಂಗಾಳ: ಶೇಖ್ ಹಸೀನಾ ವಿರುದ್ಧ ವ್ಯಕ್ತವಾದ ಬಾಂಗ್ಲಾದೇಶದ ಪ್ರತಿಭಟನೆಯ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ಹಸೀನಾ ದೇಶ ತೊರೆದರೂ ಅಲ್ಲಿನ ಪ್ರಕ್ಷುಬ್ಧತೆ ಮಾತ್ರ ಕಡಿಮೆಯಾಗಿಲ್ಲ. ಈ ಪ್ರತಿಭಟನೆ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಇದೀಗ ಮತ್ತೆ ಬಾಂಗ್ಲಾದೇಶ ಹೊತ್ತಿ ಉರಿಯುತ್ತದೆ. ಅದರಲ್ಲೂ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳ ಆರೋಪ ಮತ್ತು ಧಾರ್ಮಿಕ ಮುಖಂಡ ಚಿನ್ಮೊಯ್ ಕೃಷ್ಣ ದಾಸ್ ಬಂಧನದ ಬಳಿಕ ಈ ಹೋರಾಟ ಮತ್ತೊಂದು ಸ್ವರೂಪ ಪಡೆದಿದೆ. ಮೂಲಭೂತವಾದಿಗಳಿಂದಾಗಿ ಬಾಂಗ್ಲಾದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಬಾಂಗ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ: ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಪರಿಸ್ಥಿತಿಯನ್ನು ಭಾರತ ಸರ್ಕಾರ ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದೆ. ಜೊತೆಗೆ ಪೋಲಿಸರು, ಭಾರತದ ಗುಪ್ತಚರರು ಕೂಡ ಬಾಂಗ್ಲಾದ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಪರಿಸ್ಥಿತಿಯಿಂದ ಪಶ್ಚಿಮ ಬಂಗಾಳ ಹೊರತಾಗಿಲ್ಲ. ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶದ ಕಳ್ಳಸಾಗಣೆ ಗ್ಯಾಂಗ್‌ಗಳು ಮತ್ತು ಉಗ್ರಗಾಮಿ ಸಂಘಟನೆಗಳು ದೇಶದ ಒಳ ನುಸುಳಬಹುದು. ಇದು ಸಂಭವಿಸಿದ್ದಲ್ಲೀ ಗಡಿ ಭಾಗದಲ್ಲಿ ಕಳ್ಳಸಾಗಣೆ ಗ್ಯಾಂಗ್‌ಗಳು ಮತ್ತು ಭಯೋತ್ಪಾದನೆಯ ಜಾಲ ಹರಡಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಗುರುವಾರ ನಕಲಿ ನೋಟಿನ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸರು ಧರ್ಮತಾಳದಲ್ಲಿ ವ್ಯಕ್ತಿಯೊಬ್ಬನ್ನು ಬಂಧಿಸಿರುವುದು ಇದಕ್ಕೆ ಉದಾಹರಣೆಯಾಗಿದೆ. ಭಾರತ ಕರೆನ್ಸಿಯ ಮೂರು ಲಕ್ಷ ಮೌಲ್ಯದ ಖೋಟಾ ನೋಟನ್ನು ಈತನ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ಈ ನಕಲಿ ನೋಟುಗಳು ಬಾಂಗ್ಲಾದೇಶದಿಂದ ಬಂದಿರಬಹುದು ಎಂಬ ಆತಂಕ ಕೂಡ ಎದುರಾಗಿದೆ. ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಲಾಲ್‌ಬಜಾರ್‌ನ ಉನ್ನತಾಧಿಕಾರಿಗಳು ಈ ಕುರಿತು ಭಯವನ್ನು ವ್ಯಕ್ತಪಡಿಸಿದ್ದಾರೆ. ಇದು ಐಪಿಎಸ್ ಅಧಿಕಾರಿ ವಿ ಸೊಲೊಮೊನ್ ನೆಶಕುಮಾರ್ ಮಾತಿನಲ್ಲಿ ಕಂಡು ಬಂದಿದೆ.
ಈ ಕುರಿತು ಈ ಟಿವಿ ಭಾರತ್ನೊಂದಿಗೆ ಮಾತನಾಡಿದ ವಿ ಸೊಲೊಮೊನ್ ನೆಶಕುಮಾರ್, ಬಾಂಗ್ಲಾದೇಶದಿಂದ ನಕಲಿ ನೋಟುಗಳನ್ನು ದೇಶದಲ್ಲಿ ಹರಡುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದರು.
ನಕಲಿ ನೋಟುಗಳ ಹಾವಳಿ, ಅಧಿಕಾರಿಗಳ ಆತಂಕ: ಈ ಬಗ್ಗೆ ಗುಪ್ತಚರ ಅಧಿಕಾರಿಗಳು ಕೂಡ ಆತಂಕ ಹೊಂದಿದ್ದಾರೆ. ಹಾಗೇ ಉಗ್ರಗಾಮಿ ಸಂಘಟನೆಗಳು ಸಕ್ರಿಯರಾಗಬಹುದು. ಬಾಂಗ್ಲಾದೇಶದಲ್ಲಿ ಜಮಾತುಲ್ ಮುಜಾಹಿದ್ದೀನ್ (ಜೆಎಂಬಿ), ಹರ್ಕತುಲ್ ಜಿಹಾದ್ (ಹುಜಿ), ಅನ್ಸರುಲ್ಲಾ ಬಾಂಗ್ಲಾ ತಂಡ (ಎಟಿಬಿ), ಶಹಾದತ್-ಎ-ಅಲ್ ಹಿಕ್ಮಾ ಮತ್ತು ಹಿಜ್ಬುತ್ ತಹ್ರೀರ್‌ನಂತಹ ಹಲವಾರು ನಿಷೇಧಿತ ಉಗ್ರಗಾಮಿ ಸಂಘಟನೆಗಳು ಬಾಂಗ್ಲಾದೇಶದ ಬಿಕ್ಕಟ್ಟಿನ ಲಾಭ ಪಡೆಯಬಹುದು ಎಂದಿದ್ದಾರೆ.
ಈ ಪ್ರಕರಣದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೂಡ ಪ್ರಬಲ ಬೆಂಬಲ ನೀಡುತ್ತಿರಬಹುದು ಎಂದು ಕೂಡ ನೆಶಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಉಗ್ರ ಸಂಘಟನೆಗಳು ಪಶ್ಚಿಮ ಬಂಗಾಳದಲ್ಲಿ ತಮ್ಮ ಪ್ರಭಾವ ಬೀರಿ ಅನೇಕ ಚಟುವಟಿಕೆಗಳು ವಿಸ್ತರಣೆ ಮಾಡಿಕೊಳ್ಳುತ್ತಿವೆ. ಬಂಗಾಳದಲ್ಲಿ ತಮ್ಮ ಪ್ರಭಾವ ವಿಸ್ತರಣೆಗೆ ಪಾಕಿಸ್ತಾನದ ಐಎಸ್ಐ ಉಗ್ರ ಸಂಘಟನೆ ಅನೇಕ ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿದೆ.
ಇತ್ತೀಚಿಗೆ ಎನ್ಐಎ ತನಿಖೆಯಲ್ಲಿ ಗುಜರಾತ್ನಲ್ಲಿ ಬಂಧಿತರಾಗಿದ್ದ ಹಲವಾರು ಅಲ್ ಖೈದಾ ಉಗ್ರಗಾಮಿಗಳು ಕೋಲ್ಕತ್ತಾದ ನ್ಯೂ ಮಾರ್ಕೆಟ್ ಮತ್ತು ಬೆನಿಯಾಪುಕುರ್ ಪ್ರದೇಶಗಳಲ್ಲಿ ಅಡಗಿಕೊಂಡಿದ್ದರು ಎಂಬುದು ಬಯಲಾಗಿತ್ತು. ಇವರೆಲ್ಲಾ ಬಾಂಗ್ಲಾ ಪ್ರಜೆಗಳಾಗಿದ್ದು, ಈ ಪ್ರಕರಣ ಸಂಬಂಧ ಬೆನಿಯಾಪುಕುರ್ ಸೇರಿದಂತೆ ಹಲವು ಪ್ರದೇಶಲ್ಲಿ ಶೋಧ ನಡೆಸಲಾಗಿತ್ತು. ಎನ್ಐಎ ಪ್ರಕಾರ, ನೆರೆಯ ದೇಶದಿಂದಲೂ ಈ ಉಗ್ರರಿಗೆ ಬೆಂಬಲ ವ್ಯಕ್ತವಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಕೊಲ್ಕತ್ತಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಉಗ್ರ ಸಂಘಟನೆ ಸದಸ್ಯರ ಬಂಧನ: ಇದಕ್ಕೆ ಮುಂಚೆಯೇ ಕೋಲ್ಕತ್ತಾ ಎಸ್‌ಟಿಎಫ್ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಎಸ್‌ಟಿಎಫ್, ಪಶ್ಚಿಮ ಬಂಗಾಳದಿಂದ ನಿಷೇಧಿತ ಉಗ್ರ ಸಂಘಟನೆಯ ಅನೇಕ ಸದಸ್ಯರನ್ನು ಬಂಧಿಸಿದೆ. ಇವರೆಲ್ಲಾ ಮುರ್ಶಿದಬಾದ್, ಬಿರ್ದುಮ್ ಮತ್ತು ಉತ್ತರ ಪಶ್ಚಿಮದ ಹಲವು ಜಿಲ್ಲೆಗಳಲ್ಲಿ ಅಡಗಿದ್ದರು ಎಂದರು.
ಗುಪ್ತಚರ ಮಾಹಿತಿ ಪ್ರಕಾರ, ಮೇ 2022ರಲ್ಲಿ ಪಂಜಾಬ್ ಗುಪ್ತಚರ ಪೊಲೀಸ್ ವಿಭಾಗ ಶಂಕಾಸ್ಪದ ಪಾಕಿಸ್ತಾನ ಗೂಢಚಾರಿ ಜಾಫರ್ ರಿಯಾಜ್ನನ್ನು ಬಂಧಿಸಿದ್ದರು. ಈತನ ಕೆಲಸ ಭಾರತದಿಂದ ಪಾಕಿಸ್ತಾನಕ್ಕೆ ವಿಷಯ ರವಾನೆಯಾಗಿತ್ತು. ಈತನ ವಿಚಾರಣೆಯಿಂದ ಕೆಲವು ಮಾಹಿತಿಗಳು ಬಹಿರಂಗವಾದವು. ಅಲ್ಲಿ ಜಾಫರ್ ಕೋಲ್ಕತ್ತಾ ಸಂಬಂಧ ಪತ್ತೆಯಾಯಿತು. ಲಾಲ್ಬಜಾರ್ ಮಾಹಿತಿ ಪ್ರಕಾರ, ಬೆನಿಯಾಪುಕುರ್ ಹೆಸರು ಕೂಡ ಈ ಪ್ರಕರಣದಲ್ಲಿ ಕಂಡು ಬಂದಿತ್ತು. ಜಾಫರ್ ಬೆನಿಯಾಪುಕರ್ನಲ್ಲಿ ಅಡಗಿದ್ದ. ಇದಾದ ಬಳಿಕ ಆತ ಪಾಕಿಸ್ತಾನ ಮಹಿಳೆ ಮದುವೆಯಾಗಿ, ಲಾಹೋರ್ಗೆ ಹಾರಿದ್ದ. ಕಳೆದ ವರ್ಷ ಆಗಸ್ಟ್ನಲ್ಲಿ ಭಕ್ತವಂಶಿ ಝಾ ಎಂಬ ಪಾಕಿಸ್ತಾನ ಗೂಢಚಾರಿಯನ್ನು ಕೂಡ ಕೋಲ್ಕತ್ತಾ ಪೊಲೀಸ್‌ನ ಎಸ್‌ಟಿಎಫ್ ಬಂಧಿಸಿತ್ತು. ಈತ ವಿಶೇಷ ತಂತ್ರಜ್ಞಾನದ ಮೂಲಕ ದೆಹಲಿ, ಕೋಲ್ಕತ್ತಾ ಸೇರಿದಂತೆ ಹಲವು ಪ್ರಮುಖ ಸ್ಥಳಗಳ ಚಿತ್ರಗಳನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡಿದ್ದಾರೆ.
2022ರಲ್ಲಿ ಕೂಡ ಉತ್ತರ ಬಂಗಾಳದ ಕಾಲಿಂಪಾಂಗ್ನಲ್ಲಿ ಸಮೀರ್ ದಾನ್ ಎಂಬ ಪಾಕಿಸ್ತಾನ ಗೂಢಚಾರಿಯನ್ನು ಬಂಧಿಸಲಾಗಿತ್ತು. ಈತ ಕೂಡ ಕಾಲಿಂಪಾಂಗ್ ಸೇನಾ ಕ್ಯಾಂಪ್ ವಿಚಾರವಾಗಿ ಪಾಕಿಸ್ತಾನಕ್ಕೆ ಹಂಚಿಕೊಳ್ಳುತ್ತಿದ್ದ ಎಂಬ ಮಾಹಿತಿ ಇದೆ.
ಬಾಂಗ್ಲಾದೇಶದಲ್ಲಿನ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ: ರಾಜ್ಯ ಪೊಲೀಸ್ ವಿಭಾಗದ ಗುಪ್ತಚರ ಇಲಾಖೆ ಉನ್ನತ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶದಲ್ಲಿನ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಬಾಂಗ್ಲಾದೇಶದ ಪ್ರಕ್ಷುಬ್ಧ ಸ್ಥಿತಿಯಿಂದಾಗಿ ನಿಷೇಧಿತ ಸಂಘಟನೆಗಳು ಸಕ್ರಿಯವಾಗುವ ಪ್ರಯತ್ನ ನಡೆಸಿದೆ. ಅವರ ಪ್ರಾಥಮಿಕ ಉದ್ದೇಶ, ಗಡು ದಾಟಿ ಬಂದು, ಅಕ್ರಮ ಶಸಾಸ್ತ್ರ ಮತ್ತು ನಕಲಿ ನೋಟು ಹರಡುವುದು. ಮಾಲ್ಡಾ, ಮುರ್ಶಿದಾಬಾದ್, ಬಿರುಬುಮ್ ಮತ್ತು ಉತ್ತಮ ಬಂಗಾಳದ ಅನೇಕ ಕಡೆ ನಕಲಿ ನೋಟು ಹರಡುವುದು ಅವರ ಗುರಿಯಾಗಿದೆ.
ಇಂತಹ ಪ್ರಯತ್ನ ನಡೆಸುತ್ತಿರುವ ಉಗ್ರ ಸಂಘಟನೆಗಳ ಮೇಲೆ ಗುಪ್ತಚರ ಕಣ್ಣಿಟ್ಟಿದೆ. ನಾವು ಇದೀಗ ಪ್ರತಿಯೊಂದು ವಿಚಾರ, ಅದರಲ್ಲೂ ಕೆಲವು ವಿಚಾರದಲ್ಲಿ ವಿಶೇಷ ಕಣ್ಣಿಟ್ಟಿದ್ದು, ಅನೇಕ ಕೇಂದ್ರ ತನಿಖಾ ಸಂಸ್ಥೆಗಳ ಸಂಪರ್ಕವನ್ನು ಹೊಂದಿದ್ದೇವೆ ಎಂದರು.
ಇದನ್ನೂ ಓದಿ: ವಾರಾಣಸಿಯ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ: 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮ