ಚೆನ್ನೈ, ತಮಿಳುನಾಡು: ವಿಶ್ವವೇ ಕಾತರದಿಂದ ಕಾಯುತ್ತಿದ್ದ ಅಮೆರಿಕದ 47ನೇ ಅಧ್ಯಕ್ಷರ ಆಯ್ಕೆ ಚುನಾವಣೆಯ ಮತದಾನ ನವೆಂಬರ್ 5 ರಂದು ಅಂದರೆ ನಿನ್ನೆ ಮುಕ್ತಾಯಗೊಂಡಿದೆ. ಇದೀಗ ಫಲಿತಾಂಶ ಹೊರಬಿದ್ದಿದೆ. ರಿಪಬ್ಲಿಕನ್ ಪಕ್ಷದಿಂದ ಕಣಕ್ಕಿಳಿದಿರುವ ಟ್ರಂಪ್ ಹಾಗೂ ಡೆಮಾಕ್ರಟ್ ಪಕ್ಷದಿಂದ ಕಣಕ್ಕಿಳಿದಿದ್ದ ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಪ್ರಾಥಮಿಕ ವರದಿಗಳ ಪ್ರಕಾರ ಮಾಜಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ನಿರಾಶೆ ಅನುಭವಿಸಿದ್ದಾರೆ.
ಈ ವರದಿಗಳು ಏನೇ ಇದ್ದರೂ, ಕಮಲಾ ಹ್ಯಾರಿಸ್ ಅವರ ಗೌರವಾರ್ಥವಾಗಿ ತಮಿಳುನಾಡಿನಲ್ಲಿ ವಿಶೇಷ ಇಡ್ಲಿ ತಯಾರು ಮಾಡಲಾಗಿತ್ತು. ತಮಿಳುನಾಡು ಪಾಕ ಕಲಾ ಕಾರ್ಮಿಕ ಅಭಿವೃದ್ಧಿ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಇಡ್ಲಿ ಇನಿಯವನ್ ನೇತೃತ್ವದಲ್ಲಿ ಚೆನ್ನೈನ ಕೊಡುಂಕಯ್ಯೂರಿನಲ್ಲಿ 50 ಕೆ.ಜಿ. ಕಮಲಾ ಹ್ಯಾರಿಸ್ ಅವರ ಭಾವಚಿತ್ರವನ್ನು ಪೆಪ್ಪರ್ ಜೆಲ್ ಬಳಸಿ ಚಿತ್ರಿಸಿ ಸಾರ್ವಜನಿಕರಿಗೆ ಪ್ರದರ್ಶಿಸಿದರು.