ETV Bharat / state

ಕಾಂಗ್ರೆಸ್ ಅಧಿವೇಶನ ನಿಮಿತ್ತ ಕುಂದಾನಗರಿ ಸುತ್ತಮುತ್ತ ಲೈಟಿಂಗ್ಸ್: ಶತಮಾನದ ಬೆಳಕಿಗೆ ಏನಂತಾರೆ ಬೆಳಗಾವಿ ಜನ? - BELAGAVI CONGRESS SESSION

ಬೆಳಗಾವಿ ನಗರದ 104 ಕಿ.ಮೀ., 90 ವೃತ್ತಗಳಲ್ಲಿ ಸುಮಾರು 2 ಲಕ್ಷ ಎಲ್ಇಡಿ ಬಲ್ಬ್​ಗಳು ಸೇರಿ ಅತ್ಯಾಧುನಿಕ ಆಕರ್ಷಕ ದೀಪಗಳಿಂದ ಅಲಂಕಾರಗೊಳಿಸಲಾಗಿದ್ದು, ಸ್ಥಳೀಯರು ಬೆಳಕಿನ ಚಿತ್ತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

Opinion of the people of Belagavi on the Congress Session Centenary Event
ವಿದ್ಯುತ್​ ದೀಪಗಳಿಂದ ಅಲಂಕಾರಗೊಂಡ ವೃತ್ತ (ETV Bharat)
author img

By ETV Bharat Karnataka Team

Published : 13 hours ago

ಬೆಳಗಾವಿ: ನೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮುಖ್ಯ ದ್ವಾರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.‌ ಈಗ ಶತಮಾನೋತ್ಸವಕ್ಕೆ ಬೆಳಕಿನ‌ ಸ್ವರ್ಗವೇ ಧರೆಗೆ ಇಳಿದಿದೆ.‌ ಈ ದೃಶ್ಯ ವೈಭವ ಕಣ್ತುಂಬಿಕೊಂಡು ಜನ‌ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

1924 ಡಿ.26, 27ರಂದು ಬೆಳಗಾವಿ ಟಿಳಕವಾಡಿಯಲ್ಲಿ ಮಹಾತ್ಮ ಗಾಂಧೀಜಿ‌ ಅಧ್ಯಕ್ಷತೆಯಲ್ಲಿ 39ನೇ ಕಾಂಗ್ರೆಸ್ ಅಧಿವೇಶನ‌ ನಡೆದಿತ್ತು.‌ ಆ ವೇಳೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಿಜಯನಗರ ಸಾಮ್ರಾಜ್ಯ ಕುರುಹುವಿಗಾಗಿ "ವಿಜಯನಗರ" ಎಂದು ನಾಮಕರಣ ಮಾಡಲಾಗಿತ್ತು.‌ ಅಲ್ಲೇ ಒಂದು ಬಾವಿಯನ್ನು ತೋಡಿ ಅದಕ್ಕೆ "ಪಂಪಾ ಸರೋವರ" ಎಂದು ಕರೆಯಲಾಗಿತ್ತು. ಇನ್ನು ವಿರೂಪಾಕ್ಷ ಗೋಪುರ ನಿರ್ಮಿಸಲಾಗಿತ್ತು. ಈ ಗೋಪುರವನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಈಗ ಅದನ್ನೇ ಪ್ರೇರಣೆಯಾಗಿಟ್ಟುಕೊಂಡ ರಾಜ್ಯ ಸರ್ಕಾರ, ಇಡೀ ಬೆಳಗಾವಿಯನ್ನು ಮಿರ ಮಿರ ಮಿಂಚುವಂತೆ ಮಾಡಿದೆ.

ಶತಮಾನದ ಬೆಳಕಿಗೆ ಬೆಳಗಾವಿ ಜನರ ಅಭಿಪ್ರಾಯ (ETV Bharat)

ಬೆಳಗಾವಿ ನಗರದ 104 ಕಿ.ಮೀ., 90 ವೃತ್ತಗಳಲ್ಲಿ ಸುಮಾರು 2 ಲಕ್ಷ ಎಲ್ಇಡಿ ಬಲ್ಬ್​ಗಳು ಸೇರಿ ಅತ್ಯಾಧುನಿಕ ಆಕರ್ಷಕ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಬರೀ ದೀಪಾಲಂಕಾರಕ್ಕೆ ಅಂದಾಜು 8 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವ್ಯಯಿಸಿದೆ. ಬುಧವಾರ ಮಧ್ಯರಾತ್ರಿವರೆಗೂ ಜನ ಈ‌‌ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು.

ಚಿಕ್ಕ ಮಕ್ಕಳು, ವೃದ್ಧರು ಆದಿಯಾಗಿ ಕುಟುಂಬ ಸಮೇತರಾಗಿ ಇಡೀ ಕುಂದಾನಗರಿಯನ್ನು ಪ್ರದಕ್ಷಿಣೆ ಹಾಕಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿ 12 ಗಂಟೆವರೆಗೂ ಜನ ಜಮಾಯಿಸಿದ್ದರು. ಬೆಳಕಿನ ಚಿತ್ತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

Opinion of the people of Belagavi on the Congress Session Centenary Event
ವಿದ್ಯುತ್​ ದೀಪಗಳಿಂದ ಅಲಂಕಾರಗೊಂಡ ವೃತ್ತ (ETV Bharat)

ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ನಮಿತಾ ಪೋತರಾಜ, ನಾವು ಬೆಳಗಾವಿಯಲ್ಲೇ ಹುಟ್ಟಿ ಬೆಳೆದಿದ್ದೇವೆ. ಈ ರೀತಿ ವಿದ್ಯುತ್ ಅಲಂಕಾರದಲ್ಲಿ ಮಿಂಚುತ್ತಿರುವ ಬೆಳಗಾವಿಯನ್ನು ಈಗಲೇ ನೋಡುತ್ತಿರುವುದು. ಚನ್ನಮ್ಮ, ರಾಯಣ್ಣ, ಬಸವಣ್ಣ, ಬುದ್ಧ, ಕನಕದಾಸ ಸೇರಿ ಮುಂತಾದ ಮಹನೀಯರ ಪ್ರತಿಕೃತಿಗಳು ತುಂಬಾ ಸುಂದರವಾಗಿ‌ ಕಾಣಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಧವ ಮಾರಿಹಾಳಕರ್ ಮಾತನಾಡಿ, ಗಾಂಧಿ ಭಾರತ ಕಾಂಗ್ರೆಸ್ ಅಧಿವೇಶದನ ಶತಮಾನೋತ್ಸವ ಆಚರಣೆ ನೋಡಿ ನಮಗೆ ತುಂಬಾ ಖುಷಿ ಆಗುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ‌. ಮದುವಣಗಿತ್ತಿಯಂತೆ ಬೆಳಗಾವಿ ನಗರ ಸಿಂಗಾರಗೊಂಡಿದೆ. ನಮ್ಮ ಜೀವನದಲ್ಲೇ ಇದನ್ನು ನೋಡಿರಲಿಲ್ಲ.

ವಿದ್ಯುತ್​ ದೀಪಗಳಿಂದ ಅಲಂಕಾರಗೊಂಡ ದ್ವಾರ ಬಾಗಿಲು (ETV Bharat)

100 ವರ್ಷಗಳ ಹಿಂದೆ ಗಾಂಧೀಜಿ ನಮ್ಮ ಬೆಳಗಾವಿಗೆ ಬಂದಿದ್ದ ವಿಷಯ ಕೇಳಿ ತುಂಬಾ ಹೆಮ್ಮೆ ಎನಿಸುತ್ತದೆ. ಅಂದು ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಜೀವ ಬಲಿಕೊಟ್ಟಿದ್ದರಿಂದ ಇಂದು ನಾವು ಸ್ವತಂತ್ರವಾಗಿ ಓಡಾಡುತ್ತಿದ್ದೇವೆ. ನಮ್ಮ ಕುಂದಾನಗರಿ ಕಲರ್ ಫುಲ್ ಲೈಟ್ ಗಳಿಂದ ಝಗಮಗಿಸುತ್ತಿದೆ. ಕುಟುಂಬ ಸಮೇತರಾಗಿ ಆಗಮಿಸಿದ್ದು, ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡುತ್ತಿದ್ದೇವೆ ಎಂಬುದು ವಚನಾ ದೇಸಾಯಿ ಮತ್ತು ಪ್ರಿಯಾ ದೇವಣಕರ್ ಅವರ ಅಭಿಪ್ರಾಯ.

ಶಾಂತಿ, ಅಹಿಂಸೆ ಮೂಲಕ ಏನು ಬೇಕಾದರು ಪಡೆಯಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದು ಮಹಾತ್ಮ ಗಾಂಧೀಜಿ. ಅವರ ಆದರ್ಶಗಳನ್ನು ನಮ್ಮ ಮಕ್ಕಳಿಗೆ ತಿಳಿಸುತ್ತಿದ್ದೇವೆ. ಇಡೀ ಬೆಳಗಾವಿ ನಗರವನ್ನು ಕುಟುಂಬ ಸಮೇತರಾಗಿ ಸುತ್ತುತ್ತಿದ್ದೇವೆ. ತುಂಬಾ ಏಂಜಾಯ್ ಮಾಡುತ್ತಿದ್ದೇವೆ. ಈ ರೀತಿ ಲೈಟಿಂಗ್ ನೋಡಬೇಕು ಎಂದರೆ ಮೈಸೂರು ದಸರಾಗೆ ಹೋಗಬೇಕಿತ್ತು. ಈಗ ಇಲ್ಲಿಯೇ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ರಾಜು ಗಾಣಿಗೇರ ಮತ್ತು ಮಿಥುನ್.

ಸಂಭ್ರಮದಲ್ಲಿ ಜನಸಾಗರ (ETV Bharat)

ಮಹಾದೇವ ಮುತ್ನಾಳಕರ್ ಮತ್ತು ಈಶ್ವರ ಚೌಡೇಶ್ವರ ಮಾತನಾಡಿ, ಬೆಳಗಾವಿಯಲ್ಲಿ ಬಹಳ ಅದ್ಧೂರಿಯಾಗಿ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ಲೈಟಿಂಗ್ಸ್ ನೋಡಿ ನಮಗೆ ತುಂಬಾ ಖುಷಿಯಾಗುತ್ತಿದೆ ಎಂದರು.

ಇದನ್ನೂ ಓದಿ: ರಾಹುಲ್​ , ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬೆಳಗಾವಿಗೆ ಆಗಮನ: ಸೆಲ್ಫಿಗೆ ಮುಗಿಬಿದ್ದ ಮಹಿಳೆಯರನ್ನು ಹಿಂದಕ್ಕೆ ಸರಿಸಿದ ಡಿಕೆಶಿ - MP RAHUL GANDHI ARRIVED IN BELAGAVI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.