ಕರ್ನಾಟಕ

karnataka

ETV Bharat / bharat

ಟಾಪ್ 100 ಟೇಸ್ಟಿ ಐಸ್ ಕ್ರೀಮ್‌ಗಳಲ್ಲಿ ಭಾರತದ 5 ಐಸ್ ಕ್ರೀಮ್‌ಗಳಿಗೆ ಸ್ಥಾನ: ಮಂಗಳೂರಿನ ಪಬ್ಬಾಸ್, ಬೆಂಗಳೂರಿನ ಡೆತ್ ಬೈ ಚಾಕೊಲೇಟ್​​ಗೂ ಜಾಗ - top 100 testy ice creams - TOP 100 TESTY ICE CREAMS

Taste Atlas ಎಂಬ ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ "ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್ ಕ್ರೀಮ್‌ಗಳ" ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದಿಂದ ಐದು ಐಸ್ ಕ್ರೀಂಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಮಂಗಳೂರಿನ ಪಬ್ಬಾಸ್​ ಐಸ್​ಕ್ರೀಮ್​​ಗೂ ಸ್ಥಾನ ಸಿಕ್ಕಿದೆ.

ice-cream
ಐಸ್ ಕ್ರೀಮ್‌ (ETV Bharat)

By ETV Bharat Karnataka Team

Published : Jul 25, 2024, 8:44 PM IST

ಮುಂಬೈ (ಮಹಾರಾಷ್ಟ್ರ):ಐಸ್ ಕ್ರೀಮ್ ತಿನ್ನೋಕೆ ಯಾರು ಇಷ್ಟಪಡುವುದಿಲ್ಲ ಹೇಳಿ? ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಪ್ರತಿಯೊಬ್ಬರೂ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ನಮ್ಮ ಹಳ್ಳಿಯಲ್ಲಿರುವ ಈ ಐಸ್ ಕ್ರೀಂ ಪ್ರಪಂಚದಲ್ಲೇ ಶ್ರೇಷ್ಠವಾದ ಐಸ್ ಕ್ರೀಂ ಎಂದು ಕೆಲವೊಮ್ಮೆ ನಾವು ಹೇಳುತ್ತೇವೆ. ಪ್ರತಿ ಹಳ್ಳಿ ಮತ್ತು ನಗರಗಳಲ್ಲಿಯೂ ಐಸ್ ಕ್ರೀಮ್ ಪ್ರಿಯರನ್ನು ನೀವು ಕಾಣಬಹುದು. ಅವರು ಅದರ ರುಚಿಯ ಬಗ್ಗೆ ಹೆಮ್ಮೆಪಡುತ್ತಾರೆ.

ಈ ಐಸ್ ಕ್ರೀಮ್ ಪ್ರಿಯರು ಐಸ್ ಕ್ರೀಮ್ ತಿನ್ನಲು ಬೇಸಿಗೆಯವರೆಗೂ ಕಾಯುವುದಿಲ್ಲ. ಅವರು ಯಾವುದೇ ಋತುವಿನಲ್ಲಿ ಐಸ್ ಕ್ರೀಮ್ ತಿನ್ನಲು ಸಿದ್ಧರಿರುತ್ತಾರೆ. ಚಳಿಯ ದಿನವಾಗಲಿ, ಮಳೆಗಾಲದ ದಿನವಾಗಲಿ. ಸುರಿವ ಮಳೆಯಲ್ಲಿ ಚಹಾ, ಭಜ್ಜಿ ತಿನ್ನುವಾಗ ಸಿಗುವ ಮಜಾದಂತೆ ಅಥವಾ ಅದಕ್ಕಿಂತ ಹೆಚ್ಚಿನ ಮಜಾ ಈ ಉತ್ಸಾಹಿಗಳಿಗೆ ಸುರಿಯುವ ಮಳೆಯಲ್ಲಿ ಐಸ್ ಕ್ರೀಮ್ ತಿನ್ನುವಾಗ ಸಿಗುತ್ತದೆ.

ಆದ್ದರಿಂದ ಹೊರಗೆ ಮಳೆಯಾಗುತ್ತಿರುವಾಗ, ಐಸ್ ಕ್ರೀಮ್ ಪಾರ್ಲರ್‌ಗಳಲ್ಲಿ ಕ್ರೀಮಿ ಕೋನ್ - ಕುಲ್ಫಿಸ್ ಅಥವಾ ಸ್ಕೂಪ್‌ಗಳನ್ನು ತಿನ್ನುವುದನ್ನು ನೀವು ಕಾಣುತ್ತೀರಿ. ಆದರೆ, ಐಸ್​ಕ್ರಿಮ್​ ಪ್ರಿಯರ ಮತ್ತೊಂದು ವೈಶಿಷ್ಟ್ಯವೆಂದರೆ ಅವರು ಇಷ್ಟಪಡುವ ಅತ್ಯುತ್ತಮವಾದ ಐಸ್​ಕ್ರೀಂಗಾಗಿ ಸದಾ ಹುಡುಕಾಡುತ್ತಲೇ ಇರುತ್ತಾರೆ. ಅದೇ ರೀತಿ, ಜಗತ್ತಿನಲ್ಲಿ 100 ರುಚಿಕರವಾದ ಐಸ್ ಕ್ರೀಮ್​ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಭಾರತದಿಂದ ಐದು ಐಸ್ ಕ್ರೀಂಗಳನ್ನು ಆಯ್ಕೆ ಮಾಡಲಾಗಿದ್ದು, 3 ಮುಂಬೈನಿಂದಲೇ ಮೂರು ಐಸ್​​​​ಕ್ರೀಂಗಳು ಆಯ್ಕೆಯಾಗಿದ್ದರೆ, ನಮ್ಮ ರಾಜ್ಯದ ಮಂಗಳೂರು, ಮಂಗಳೂರಿನ ಐಸ್​​ಕ್ರೀಂಗಳಿಗೂ ಜಾಗ ಸಿಕ್ಕಿದೆ.

ಜಗತ್ತಿನಲ್ಲೇ 'ಲೈ ಬಾರಿ' (ಅತ್ಯುತ್ತಮ) ಐಸ್ ಕ್ರೀಂ ಎಂಬ ಹೆಸರು ಗಳಿಸಿಕೊಂಡಿದೆ. ಈ ಐಸ್​​​​​ ಕ್ರೀಂ ಹೆಸರು ಕೇಳಿದ ತಕ್ಷಣ ಭಾರತದ ಕೆಲವು ಖ್ಯಾತ ಬ್ರಾಂಡ್​ಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಬೇಸಿಗೆ ಕಾಲದಲ್ಲಿ ಈ ಐಸ್ ಕ್ರೀಂ ಕಂಪನಿಗಳನ್ನ ನೋಡಿದರೆ ಬಾಯಲ್ಲಿ ನೀರೂರಿಸುವಂತಹ ಜಾಹೀರಾತುಗಳನ್ನು ಹಾಕುತ್ತಾರೆ. ಆದರೆ, ವಿಶ್ವದ ಅತ್ಯುತ್ತಮ ಐಸ್ ಕ್ರೀಂಗಳ ಪಟ್ಟಿಯಲ್ಲಿ ಭಾರತದ ಯಾವುದೇ ಐಸ್​ಕ್ರೀಂ ಬ್ರ್ಯಾಂಡ್ ಕೂಡಾ ಜಾಹೀರಾತು ನೀಡಿಲ್ಲ. ಇದರಲ್ಲಿ ಭಾರತದ 5 ಸ್ಥಳೀಯ ಐಸ್​ ಕ್ರೀಮ್‌ಗಳು ಸಹ ಸೇರ್ಪಡೆ ಆಗಿವೆ. ಮುಂಬೈನಿಂದ 3 ಐಸ್ ಕ್ರೀಮ್‌ಗಳಿವೆ. ಆ ಐಸ್​​​ಕ್ರಿಂಗಳ ಬಗ್ಗೆ ಈಗ ಒಂದೊಂದಾಗಿ ತಿಳಿದುಕೊಳ್ಳೋಣ.

ಪಬ್ಬಾಸ್ ಐಸ್ ಕ್ರೀಮ್ : ಇವುಗಳಲ್ಲಿ ಮೊದಲನೆಯದು ಪಬ್ಬಾದಲ್ಲಿನ ಐಸ್ ಕ್ರೀಮ್, ಈ ಐಸ್ ಕ್ರೀಮ್ ಪಾರ್ಲರ್ ಕರ್ನಾಟಕದ ಮಂಗಳೂರಿನಲ್ಲಿದೆ. ಈ ಐಸ್ ಕ್ರೀಮ್ ಪಾರ್ಲರ್‌ಗಳು ಅದ್ಭುತವಾದ ಐಸ್ ಕ್ರೀಮ್‌ಗಳನ್ನು ತಯಾರಿಸುತ್ತವೆ. ತಾಜಾ ಹಣ್ಣುಗಳ ಜೊತೆಗೆ, ಒಣ ಹಣ್ಣುಗಳಾದ ಗೋಡಂಬಿ, ಪಿಸ್ತಾ ಮತ್ತು ಬಾದಾಮಿಗಳನ್ನು ಈ ಕ್ರೀಂನಲ್ಲಿ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಈ ಐಸ್ ಕ್ರೀಮ್ ಅನ್ನು ಜೆಲ್ಲಿ ಮತ್ತು ವಿಶೇಷ ಸಿರಪ್​ನಿಂದ ತಯಾರಿಸಲಾಗುತ್ತದೆ. ಈ ಐಸ್ ಕ್ರೀಮ್ ಮೂರು ವಿಭಿನ್ನ ಫ್ಲೇವರ್​ಗಳಲ್ಲಿ ಲಭ್ಯವಿವೆ. ಹಾಗಾಗಿ ಅದರ ಮಾಧುರ್ಯ ಮತ್ತು ರುಚಿಯನ್ನು ಸವಿಯುವಾಗ 'ಜಿಸ್ಕಾ ನಾಮ್ ವೋಚಾ' ಇಂತಹ ಮಾತುಗಳು ತಾನಾಗಿಯೇ ನಮ್ಮ ಬಾಯಿಂದ ಹೊರಬರುತ್ತವೆ.

ಇದನ್ನೂ ಓದಿ :ಮಂಗಳೂರಿನ ಪಬ್ಬಾಸ್​ನಲ್ಲಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ - ವಿಡಿಯೋ

ಟೆಂಡರ್ ಕೋಕೋನಟ್ ಐಸ್ ಕ್ರೀಮ್ - ಭಾರತದ ಅತ್ಯುತ್ತಮ ಐಸ್ ಕ್ರೀಂಗಳ ಪಟ್ಟಿಯಲ್ಲಿರುವ ಇನ್ನೊಂದು ಹೆಸರು ಮುಂಬೈನ 'ನ್ಯಾಚುರಲ್ಸ್'. ಇಲ್ಲಿರುವ 'ಶಹಲಾ' ಫ್ಲೇವರ್​ನ ಐಸ್ ಕ್ರೀಂ ವಿಶ್ವದಲ್ಲೇ ಅತ್ಯುತ್ತಮವೆಂದೇ ಹೇಳಬೇಕು. ಕೆನೆಭರಿತ 'ಟೆಂಡರ್ ಕೋಕೋನಟ್' ಐಸ್ ಕ್ರೀಂ ಒಂದು ಆನಂದದ ರುಚಿಯನ್ನು ನೀಡುತ್ತದೆ. ಇದರ ನೈಸರ್ಗಿಕ ರುಚಿ ಅದ್ಭುತವಾಗಿದೆ. ಈ ಐಸ್ ಕ್ರೀಂಗೆ ವಿಶೇಷ ರುಚಿ ನೀಡಲು ತಾಜಾ ಹಣ್ಣುಗಳನ್ನು ಬಳಸಲಾಗುತ್ತದೆ.

ಮ್ಯಾಂಗೋ ಸ್ಯಾಂಡ್‌ವಿಚ್ ಐಸ್ ಕ್ರೀಮ್- ಮುಂಬೈನಿಂದ ಕೆ ರುಸ್ತಮ್ ಅಂಡ್​ ಕಂಪನಿಯ ಐಸ್ ಕ್ರೀಮ್ ಬರುತ್ತದೆ. ಅವರ ಮ್ಯಾಂಗೋ ಸ್ಯಾಂಡ್‌ವಿಚ್ ಐಸ್ ಕ್ರೀಮ್ ವಿಶ್ವದ ಅತ್ಯುತ್ತಮ ಐಸ್ ಕ್ರೀಮ್ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಸಹಜವಾಗಿ ಮಾವಿನ ಹಣ್ಣನ್ನು ಚಿಕ್ಕವರು ಮತ್ತು ಹಿರಿಯರೂ ಕೂಡಾ ಇಷ್ಟಪಡುತ್ತಾರೆ. ಈ ಅದ್ಭುತ ಐಸ್ ಕ್ರೀಂ ತಿನ್ನಲು ಸಾಕಷ್ಟು ಜನರು ಖುಷಿ ಪಡುತ್ತಾರೆ. ಕೆ ರುಸ್ತಮ್ ಅವರ ಐಸ್ ಕ್ರೀಂ ಅನ್ನು ವೇಫರ್ ಬಿಸ್ಕೆಟ್​ನಿಂದ ಸ್ಯಾಂಡ್ ವಿಚ್​ನಂತೆ ಬಡಿಸಲಾಗುತ್ತದೆ.

ಡೆತ್ ಬೈ ಚಾಕೊಲೇಟ್ -ಮುಂಬೈ ಜೊತೆಗೆ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಕಾರ್ನರ್ ಹೌಸ್ ಐಸ್ ಕ್ರೀಮ್ ಪಾರ್ಲರ್ ಕೂಡಾ ಪ್ರಸಿದ್ಧವಾಗಿದೆ. ಇಲ್ಲಿನ 'ಡೆತ್ ಬೈ ಚಾಕೊಲೇಟ್' ಫ್ಲೇವರ್ ಐಸ್ ಕ್ರೀಂ ಅದ್ಭುತವಾಗಿದೆ. ಹಾಗಾಗಿ ಜಗತ್ತಿನ ಮೊದಲ 100 ಐಸ್ ಕ್ರೀಮ್​ಗಳಲ್ಲಿ ಇದರ ಹೆಸರು ಸೇರ್ಪಡೆಯಾಗಿದೆ. ಬೆಂಗಳೂರಿನ ಕಾರ್ನರ್ ಹೌಸ್​ನ ಈ 'ಡೆತ್ ಬೈ ಚಾಕೊಲೇಟ್' ಐಸ್ ಕ್ರೀಂ ಬಹಳ ಜನಪ್ರಿಯವಾಗಿದೆ. ಈ ಐಸ್ ಕ್ರೀಮ್ ಡ್ರೈ ಫ್ರೂಟ್ಸ್ ಜೊತೆಗೆ ಕೇಕ್, ಚಾಕೊಲೇಟ್ ಸಾಸ್ ಅನ್ನು ಒಳಗೊಂಡಿದೆ. ಮೇಲೆ ಚೆರ್ರಿ ಸೇರಿಸುವುದರಿಂದ ಅದು ವಿಭಿನ್ನ ರುಚಿಯನ್ನು ನೀಡುತ್ತದೆ.

ಪೇರಲ ಫ್ಲೇವರ್ಡ್ ಐಸ್ ಕ್ರೀಮ್ : ಮುಂಬೈನಿಂದ ಮತ್ತೊಂದು ಐಸ್ ಕ್ರೀಮ್​ನ್ನು ವಿಶ್ವದ ಅತ್ಯುತ್ತಮ ಐಸ್ ಕ್ರೀಮ್​​ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂಬೈನ ಅಪ್ಸರಾ ಐಸ್ ಕ್ರೀಮ್ ಪಾರ್ಲರ್‌ನಲ್ಲಿ ಪೇರಲ ರುಚಿಯ ಈ ಐಸ್ ಕ್ರೀಮ್ ಅದ್ಭುತವಾಗಿದೆ. ಈ ಐಸ್ ಕ್ರೀಂನಲ್ಲಿ ಮಾಗಿದ ಪೇರಲವನ್ನು ಬಳಸಲಾಗುತ್ತದೆ. ಇದು ಉಪ್ಪು ಮತ್ತು ಮೆಣಸು ಮಸಾಲಾದೊಂದಿಗೆ ಸುವಾಸನೆಯಾಗಿದ್ದು ಅದು 'ಲಜವಾಬ್' ರುಚಿಯನ್ನು ನೀಡುತ್ತದೆ. ತಾಜಾ ಪೇರಲದ ಚೂರುಗಳು ಕೂಡ ಈ ಐಸ್ ಕ್ರೀಂನಲ್ಲಿವೆ. ಹಾಗಾಗಿ ಈ ಐಸ್ ಕ್ರೀಮ್ ತುಂಬಾ ರುಚಿಯಾಗಿರುತ್ತದೆ.

ಇದನ್ನೂ ಓದಿ :ಪಿ ವಿ ಸಿಂಧು, ಪಿಎಂ ಮೋದಿಗೆ ಮಂಗಳೂರು ಪಬ್ಬಾಸ್​ನಿಂದ ಐಸ್ ಕ್ರೀಂ ಆಫರ್

ABOUT THE AUTHOR

...view details