ಧೆಂಕನಲ್(ಒಡಿಶಾ): ಇಟ್ಟಿಗೆ ಭಟ್ಟಿಯೊಂದರಲ್ಲಿ 7 ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಧೆಂಕನಲ್ ಜಿಲ್ಲೆಯ ಕಾಂತಾಬಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾಂಗ್ ಪ್ರದೇಶದ ಬಳಿ ಶನಿವಾರ ನಡೆದಿದೆ. ಮೃತರೆಲ್ಲರೂ ಛತ್ತೀಸ್ಗಢ ಮೂಲದವರಾಗಿದ್ದು, ಕಾಂತಾಬಾನಿಯಾ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ಆರಂಭಿಸಿದ್ದಾರೆ.
ಇಟ್ಟಿಗೆ ಭಟ್ಟಿಯಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು - Dhenkanal
ಇಟ್ಟಿಗೆ ಭಟ್ಟಿಗೆ ಬೆಂಕಿ ಹಚ್ಚಿ ಮಲಗಿದ್ದ ಒಂದೇ ಕುಟುಂಬ ನಾಲ್ವರು ಬೆಂಕಿಯ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಧೆಂಕನಲ್ನಲ್ಲಿ ನಡೆದಿದೆ.
Published : Feb 10, 2024, 5:06 PM IST
ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ಕಾರ್ಮಿಕರು ಇಟ್ಟಿಗೆ ಭಟ್ಟಿಗೆ ಬೆಂಕಿ ಹಚ್ಚಿ ಮಲಗಿದ್ದರು. ಇಟ್ಟಿಗೆ ಗೂಡಿನ ಬೆಂಕಿಯಿಂದ ಬಂದ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಶನಿವಾರ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಅವರೆಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿನ ವೈದ್ಯರು ಕಾರ್ಮಿಕರು ಸಾವನ್ನಪ್ಪಿರುವುದಾಗಿ ದೃಢಪಡಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಇಟ್ಟಿಗೆ ಭಟ್ಟಿಯ ಕಟ್ಟಡದ ಮೇಲೆ ಮಲಗಿದ್ದ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಪೊಲೀಸ್ ಗಸ್ತು ವಾಹನದ ಮೇಲೆ ಭಯೋತ್ಪಾದಕ ದಾಳಿ; ಮೂವರು ಉಗ್ರರು, ಪೊಲೀಸ್ ಅಧಿಕಾರಿ ಸಾವು