ಕರ್ನಾಟಕ

karnataka

ETV Bharat / bharat

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ನಾಲ್ವರು ಉಗ್ರರ ಬಂಧನ - MILITANTS ARRESTED IN MANIPUR

ಬಂಧಿತರ ಬಳಿಯಿಂದ 5.56ಎಂಎಂ​ ಲೈವ್​ ಕಾರ್ಟ್ರಿಡ್ಜ್‌, ಮದ್ದುಗುಂಡು ಮತ್ತು ಮೂರು ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

4-militants-arrested-in-manipur
ಸಾಂದರ್ಭಿಕ ಚಿತ್ರ (IANS)

By PTI

Published : Nov 30, 2024, 12:15 PM IST

ಇಂಫಾಲ್​ (ಮಣಿಪುರ):ಎರಡು ನಿಷೇಧಿತ ಗುಂಪುಗಳಿಗೆ ಸೇರಿದ ನಾಲ್ವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಜನರನ್ನು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ಸಂಘಟನೆಗೆ ಸೇರಿದ ಮೂವರನ್ನು ಗುರುವಾರ ಬಂಧಿಸಲಾಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆ ಮೂಲದ ಚೋಂಗ್ಥಮ್ ಶ್ಯಾಮಚಂದ್ರ ಸಿಂಗ್ (23), ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಮೈಬಮ್ ಸೂರಜ್ ಖಾನ್ (32) ಮತ್ತು ಬೋಗಿಮಯುಮ್ ಸಾಹಿದ್ ಖಾನ್ (30) ಬಂಧಿತರು.

ಬಂಧಿತರಿಂದ 5.56ಎಂಎಂ ಐನ್ಸಸ್​ ಲೈವ್​ ಕಾರ್ಟ್ರಿಡ್ಜ್‌, ಪ್ರಕರಣದಲ್ಲಿ 32 ಮದ್ದುಗುಂಡು ಮತ್ತು ಮೂರು ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಘಟನೆಯಲ್ಲಿ, ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ನಿಂಗೋನ್ ಮಚಾ ಗುಂಪು)ಗೆ ಸೇರಿದ ಉಗ್ರನೊಬ್ಬನನ್ನು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಗುರುವಾರ ಬಂಧಿಸಲಾಗಿದೆ. ಬಂಧಿತ ತೌಬಲ್ ಜಿಲ್ಲೆಯ ಲಿಲಾಂಗ್ ಹೌರೂ ಸಂಗೊಂಶುಂಫಮ್ ವಾರಿಶ್ (25) ಎಂದು ಗುರುತಿಸಲಾಗಿದ್ದು, ಈತನಿಂದಲೂ 32 ಪಿಸ್ತೂಲ್​ ಮತ್ತು ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

ಭದ್ರತಾ ಪಡೆ ಗುರುವಾರ ಕಾಂಗ್ಪೊಕ್ಪಿ ಜಿಲ್ಲೆಯ ಎಸ್ ಮೊಂಗ್ಪಿ ಪರ್ವತದಲ್ಲಿ ಪರಿಶೀಲನೆ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. 303 ರೈಫಲ್, 9 ಎಂಎಂ ಪಿಸ್ತೂಲ್, ಎರಡು ಎಸ್‌ಬಿಬಿಎಲ್ ಗನ್, 5.56 ಎಂಎಂ ಐಎನ್‌ಎಸ್‌ಎಎಸ್ ಎಲ್‌ಎಂಜಿ ಮ್ಯಾಗಜೀನ್, ಎರಡು ಹ್ಯಾಂಡ್ ಗ್ರೆನೇಡ್‌ಗಳು, ಎರಡು ಡಿಟೋನೇಟರ್‌ಗಳು, 16 ಕಾಟ್ರಿಡ್ಜ್‌ಗಳು ಮತ್ತು ಮೂರು ಟಿಯರ್ ಸ್ಮೋಕ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಸಂಸದೆಯಾದ ಬಳಿಕ ಮೊದಲ ಬಾರಿಗೆ ವಯನಾಡುಗೆ ಪ್ರಿಯಾಂಕಾ ಗಾಂಧಿ

ABOUT THE AUTHOR

...view details