ಕರ್ನಾಟಕ

karnataka

ETV Bharat / bharat

ಮಣಿಪುರದ ನರಸೇನಾದಲ್ಲಿ ಉಗ್ರರ ದಾಳಿ: ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ - Kuki Militants Attack On CRPF - KUKI MILITANTS ATTACK ON CRPF

Kuki militants attack on CRPF: ಮಣಿಪುರದ ನರಸೇನಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

Manipur  Kuki militants  CRPF  CRPF 128 Battalion  Kuki Militants Attack On CRPF
ಮಣಿಪುರದ ನರಸೇನಾದಲ್ಲಿ ಉಗ್ರರ ದಾಳಿ: ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ

By ANI

Published : Apr 27, 2024, 9:52 AM IST

ಬಿಷ್ಣುಪುರ್ (ಮಣಿಪುರ):ಮಣಿಪುರದ ನರಸೇನಾ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, CRPF ಸಿಬ್ಬಂದಿ ಮೇಲೆ ಕುಕಿ ಉಗ್ರರು ಶುಕ್ರವಾರ ಮಧ್ಯರಾತ್ರಿಯಿಂದ ಆರಂಭಗೊಂಡ 2.15 ರವರೆಗೆ ದಾಳಿ ನಡೆಸಿದರು. ಜೀವ ಕಳೆದುಕೊಂಡ ಸಿಬ್ಬಂದಿ ರಾಜ್ಯದ ಬಿಷ್ಣುಪುರ್ ಜಿಲ್ಲೆಯ ನರಸೇನಾ ಪ್ರದೇಶದಲ್ಲಿ ನಿಯೋಜಿಸಲಾದ CRPF 128 ಬೆಟಾಲಿಯನ್​ಗೆ ಸೇರಿದ್ದಾರೆ.

ಮಣಿಪುರ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಮಾತನಾಡಿ, ''ಮಣಿಪುರದಲ್ಲಿ ಶುಕ್ರವಾರ ಹೆಚ್ಚಿನ ಮತದಾನವಾಗಿದೆ. ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ನಾವು ಸುಮಾರು ಸ್ವೀಕರಿಸಿದ ಕೊನೆಯ ವರದಿ ಪ್ರಕಾರ, ಶೇಕಡಾ 75ರಷ್ಟು ಮತದಾನದ ಆಗಿದೆ" ಎಂದು ಹೇಳಿದರು.

''ಎರಡನೇ ಹಂತದ ಮತದಾನದ ಸಮಯದಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ವಿದ್ಯುನ್ಮಾನ ಮತಯಂತ್ರ (ಇವಿಎಂ) ಅಸಮರ್ಪಕ ಕಾರ್ಯದ ಕುರಿತು ಒಂದು ಘಟನೆಯು ಮತಗಟ್ಟೆಯಲ್ಲಿ ವರದಿಯಾಗಿದೆ. ಆದರೆ, ಯಾವುದೇ ಹೆಚ್ಚಿನ ತೊಂದರೆಗಳು ವರದಿಯಾಗಿಲ್ಲ'' ಎಂದರು.

"ಔಟರ್​ ಮಣಿಪುರ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ 13 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಮತದಾನ ಶಾಂತಿಯುತವಾಗಿ ನಡೆದಿದೆ. 2019ರ ಚುನಾವಣೆಗೆ ಹೋಲಿಸಿದರೆ ಔಟರ್​ ಮಣಿಪುರ ಕ್ಷೇತ್ರದಲ್ಲಿ ಮತದಾನವು ಹೆಚ್ಚು ಶಾಂತಿಯುತ ಆಗಿದೆ'' ಎಂದು ಝಾ ತಿಳಿಸಿದರು.

ಭಾರತೀಯ ಚುನಾವಣಾ ಆಯೋಗದ ಮತದಾರರ ಮತದಾನದ ಅಪ್ಲಿಕೇಶನ್‌ನ ಕೊನೆಯ ಅಪ್​ಡೇಟ್​ ಪ್ರಕಾರ, ಶೇಕಡಾ 78.78ರಷ್ಟು ಮತದಾನವಾಗಿದೆ. ಈ ಮೊದಲು, ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಅನೇಕ ಹಿಂಸಾಚಾರದ ಘಟನೆಗಳು ವರದಿಯಾದ ನಂತರ ಇನ್ನರ್ ಮಣಿಪುರ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಏಪ್ರಿಲ್ 22 ರಂದು ಮರು ಮತದಾನ ನಡೆಸಲಾಯಿತು.

ಇದನ್ನೂ ಓದಿ:ಕಾಲಿನ ಹೆಬ್ಬರಳಿಗೆ ಶಾಯಿ, ಮೂಗಿನಿಂದ ಮತದಾನ: ಕೈಗಳಿಲ್ಲದ್ದದಿದ್ದರೂ ಮೊದಲ ಬಾರಿಗೆ ಯುವಕನಿಂದ ಹಕ್ಕು ಚಲಾವಣೆ - Casts Vote With Nose

ABOUT THE AUTHOR

...view details