ETV Bharat / bharat

ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ವಿರುದ್ಧದ ಅವಿಶ್ವಾಸ ನಿರ್ಣಯ ವಜಾ - NO CONFIDENCE NOTICE

ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಜಾ ಆಗಿದೆ.

ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​
ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ (ETV Bharat)
author img

By PTI

Published : 3 hours ago

ನವದೆಹಲಿ: ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರ ವಿರುದ್ಧ ಮಹಾಭಿಯೋಗ (Impeachment) ನಡೆಸಲು ಕೋರಿ ವಿಪಕ್ಷಗಳು ಸಲ್ಲಿಸಿದ್ದ ನೋಟಿಸ್​ ವಜಾಗೊಂಡಿದೆ. ನಿಯಮಗಳು ಪಾಲನೆ ಮಾಡಿಲ್ಲ ಎಂದು ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ವಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ್ದಾರೆ.

ತಮ್ಮ ವಿರುದ್ಧ ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ. ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ 60 ಸದಸ್ಯರು ಡಿಸೆಂಬರ್ 10 ರಂದು ರಾಜ್ಯಸಭಾ ಸಭಾಪತಿ ಧನಕರ್​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ನಿರ್ಣಯ ತಿರಸ್ಕರಿಸಿದ ಉಪ ಸಭಾಪತಿ: ಅವಿಶ್ವಾಸ ನಿರ್ಣಯ ಮಂಡಿಸುವ ಮೊದಲು ಪಾಲಿಸಬೇಕಾದ ನಿಯಮಗಳನ್ನು ವಿಪಕ್ಷಗಳು ಅನುಸರಿಸಿಲ್ಲ. ಮಹಾಭಿಯೋಗಕ್ಕೆ 14 ದಿನಗಳ ಮೊದಲು ನೋಟಿಸ್​ ನೀಡಬೇಕಿತ್ತು. ಜೊತೆಗೆ ನಿರ್ಣಯದ ನೋಟಿಸ್​​ನಲ್ಲಿ ಜಗದೀಪ್​ ಧನಕರ್​ ಅವರ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. ಇದು ದೋಷಪೂರಿತವಾಗಿದ್ದು, ನಿರ್ಣಯವನ್ನು ತಿರಸ್ಕರಿಸಲಾಗುತ್ತಿದೆ ಎಂದು ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಹೇಳಿದ್ದಾರೆ.

ಮಹಾಭಿಯೋಗ ನೋಟಿಸ್ ಅನೌಪಚಾರಿಕ ಕೃತ್ಯವಾಗಿದ್ದು, ತೀವ್ರ ದೋಷಪೂರಿತವಾಗಿದೆ. ಸಭಾಪತಿಗಳ ವಿರುದ್ಧ ಆತುರದ ನಿರ್ಧಾರವಾಗಿದೆ. ಉಪರಾಷಷ್ಟ್ರಪತಿಗಳನ್ನು ನಿಂದಿಸಲು ಕೈಗೊಂಡ ನಿರ್ಣಯವಾಗಿದೆ ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ವಿಪಕ್ಷಗಳ ಆರೋಪವೇನು?: ರಾಜ್ಯಸಭಾ ಸಭಾಪತಿ ಧನಕರ್​ ಅವರು ವಿಪಕ್ಷಗಳಿಗೆ ಮಾತನಾಡಲು ಅವಕಾಶವೇ ನೀಡುವುದಿಲ್ಲ. ಶಿಕ್ಷಕರಂತೆ ನೀತಿ ಪಾಠ ಮಾಡುತ್ತಾರೆ. ಅವರು ಕೇಂದ್ರ ಸರ್ಕಾರದ ಪರವಾಗಿ ಮತ್ತು ವಿಪಕ್ಷಗಳ ವಿರುದ್ಧವಾಗಿದ್ದಾರೆ ಎಂದು ಆರೋಪ ಮಾಡಿದ್ದವು.

ಸಂವಿಧಾನದ ಪರಿಚ್ಛೇದ 67(ಬಿ) ಅಡಿಯಲ್ಲಿ ಸಭಾಪತಿಗಳ ಮಹಾಭಿಯೋಗಕ್ಕೆ ನಿರ್ಣಯ ಮಂಡಿಸಲಾಗಿತ್ತು. ಇದಕ್ಕೆ ಸಮಾಜವಾದಿ, ತೃಣಮೂಲ ಕಾಂಗ್ರೆಸ್​ ಮತ್ತು ಎಎಪಿ ಬೆಂಬಲ ನೀಡಿದ್ದವು.

ಇದನ್ನೂ ಓದಿ: 'ರಾಹುಲ್​ ಗಾಂಧಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದರು'- ಬಿಜೆಪಿ ಸಂಸದೆ; ಪೊಲೀಸರಿಗೆ ದೂರು-ಪ್ರತಿದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.