ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು; ರಿಯಾಜ್ ಅಬೂಬಕರ್​ಗೆ 10 ವರ್ಷ ಕಠಿಣ ಜೈಲು ಶಿಕ್ಷೆ - ರಿಯಾಸ್ ಅಬೂಬಕರ್​

ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದ ರಿಯಾಸ್ ಅಬೂಬಕರ್​ ಎಂಬಾತನಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

10 years rigorous imprisonment for IS operative Riyas Aboobacker in ISIS recruitment case
10 years rigorous imprisonment for IS operative Riyas Aboobacker in ISIS recruitment case

By ETV Bharat Karnataka Team

Published : Feb 9, 2024, 6:50 PM IST

ಎರ್ನಾಕುಲಂ: ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಅಪರಾಧಿ ರಿಯಾಜ್ ಅಬುಬಕರ್ ಎಂಬಾತನಿಗೆ ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿತು. ದುಷ್ಕೃತ್ಯ ಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ ದಂಡ ವಿಧಿಸಲಾಗಿದೆ.

ಆತ್ಮಾಹುತಿ ದಾಳಿಗೆ ಯೋಜನೆ ರೂಪಿಸಿರುವ ಪ್ರಕರಣಗಳಲ್ಲಿ ರಿಯಾಜ್ ಅಬೂಬಕ್ಕರ್ (29) 'ದೋಷಿ' ಎಂದು ನ್ಯಾಯಾಲಯ ಕಳೆದ ಎರಡು ದಿನಗಳ ಹಿಂದಷ್ಟೇ ತೀರ್ಪು ನೀಡಿತ್ತು. ಈ ಪ್ರಕರಣ ಸಂಬಂಧ 2019ರಲ್ಲಿ ಈತನನ್ನು ಬಂಧಿಸಲಾಗಿತ್ತು.

ಪಾಲಕ್ಕಾಡ್​ನ ಕೊಲ್ಲಂಕೋಡ್‌ ನಿವಾಸಿಯಾದ ರಿಯಾಜ್ ಅಬೂಬಕರ್, ಕೇರಳದಲ್ಲಿ ಸರಣಿ ಸ್ಫೋಟಕ್ಕೆ ಯೋಜನೆ ರೂಪಿಸಿರುವ ಮೂಲಕ ಭಯೋತ್ಪಾದನಾ ಚಟುವಟಿಕೆಗಳನ್ನು ಬೆಂಬಲಿಸಿದ್ದ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (UAPA) ಸೆಕ್ಷನ್ 38 ಮತ್ತು 39 ಹಾಗೂ ಭಾರತೀಯ ದಂಡ ಸಂಹಿತೆ 120ಬಿ ಅಡಿಯಲ್ಲಿ ಈತ ತಪ್ಪಿತಸ್ಥ ಎಂದು ಕೋರ್ಟ್ ಹೇಳಿತ್ತು. ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಸೆಕ್ಷನ್ 38ರ ಅಡಿಯಲ್ಲಿ 10 ವರ್ಷ, ಸೆಕ್ಷನ್ 39ರ ಅಡಿಯಲ್ಲಿ 10 ವರ್ಷ ಮತ್ತು ಪಿತೂರಿ (120 ಬಿ) ಅಡಿಯಲ್ಲಿ 5 ವರ್ಷಗಳ ಶಿಕ್ಷೆ ಪ್ರಕಟಿಸಲಾಗಿದೆ. ಭಾರತೀಯ ದಂಡ ಸಂಹಿತೆ ಮತ್ತು ಎಲ್ಲಾ ಮೂರು ವಿಭಾಗಗಳಲ್ಲಿ ಒಟ್ಟು 1,25,000 ರೂ. ದಂಡ ವಿಧಿಸಿದೆ. ಅಪರಾಧಿ ರಿಯಾಜ್ ವಿಚಾರಣೆಯ ಅವಧಿಯಲ್ಲಿ 5 ವರ್ಷ ಜೈಲು ವಾಸ ಅನುಭವಿಸಿರುವುದರಿಂದ ಇನ್ನೂ ಐದೂವರೆ ವರ್ಷ ಶಿಕ್ಷೆ ಅನುಭವಿಸಬೇಕಿದೆ.

ರಿಯಾಜ್, ಭಯೋತ್ಪಾದಕ ಹಾಗೂ ಶ್ರೀಲಂಕಾದ ಈಸ್ಟರ್ ಬಾಂಬ್ ಸ್ಫೋಟದ ರೂವಾರಿ ಜಹ್ರಾನ್ ಹಾಶಿಮ್ ಎಂಬಾತನ ಅನುಯಾಯಿ. ಕೇರಳದಲ್ಲೂ ಇದೇ ರೀತಿಯ ಸ್ಫೋಟ ಸರಣಿಗೆ ಸಂಚು ರೂಪಿಸಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಭಯೋತ್ಪಾದಕ ಗುಂಪಿಗೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದನು. ಅಫ್ಘಾನಿಸ್ತಾನಕ್ಕೆ ತೆರಳಿ ಭಯೋತ್ಪಾದಕರೊಂದಿಗೆ ಸೇರಿಕೊಂಡು ಕೇರಳದಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿಗೆ ಯೋಜಿಸಿದ್ದಾನೆ. ಹೊಸ ವರ್ಷಾಚರಣೆ ವೇಳೆ ಆತ್ಮಾಹುತಿ ದಾಳಿ ನಡೆಸುವುದು ಈತನ ಗುರಿಯಾಗಿತ್ತು. ದುಷ್ಕೃತ್ಯಕ್ಕೆ ಇತರರನ್ನು ಪ್ರಚೋದಿಸಲು, ನಿರಂತರವಾಗಿ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡಿದ್ದ. ಈ ಬಗ್ಗೆ ಎನ್‌ಐಎ ಹಲವು ಪುರಾವೆಗಳನ್ನು ಸಂಗ್ರಹಿಸಿ ಆರೋಪ ಪಟ್ಟಿ ಸಲ್ಲಿಸಿತ್ತು. ಭಯೋತ್ಪಾದಕ ಜಹ್ರಾನ್ ಹಶೀಮ್ ಮತ್ತು ಇಸ್ಲಾಮಿಕ್ ವಾಗ್ಮಿ ಝಾಕಿರ್ ನಾಯಕ್ ಎಂಬಾತನ ಭಾಷಣಗಳನ್ನು ಆಲಿಸುತ್ತಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದ.

ಇದನ್ನೂ ಓದಿ:ಐಸಿಸ್ ಪ್ರಕರಣ: ರಿಯಾಜ್ ಅಬೂಬಕರ್ 'ದೋಷಿ'- ಕೊಚ್ಚಿ ಎನ್‌ಐಎ ಕೋರ್ಟ್

ABOUT THE AUTHOR

...view details