ಕರ್ನಾಟಕ

karnataka

ಸಕ್ಕರೆ ನಾಡಲ್ಲಿ ಅಕ್ರಮ ಕ್ಯಾಟ್ ಫಿಶ್ ದಂಧೆ: ಕಣ್ಣಿದ್ದು ಕುರುಡಾದ್ರಾ ಅಧಿಕಾರಿಗಳು?

By

Published : Aug 18, 2019, 11:55 PM IST

ಮಂಡ್ಯ ಜಿಲ್ಲೆಯ ಕಾರಸವಾಡಿ ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಆಫ್ರಿಕಾ ಕ್ಯಾಟ್ ಫಿಶ್ ಸಾಗಣೆ ನಡೆಯುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಅಕ್ರಮ ಕ್ಯಾಟ್​ ಫಿಶ್ ದಂಧೆ

ಮಂಡ್ಯ: ಆಫ್ರಿಕಾ ಕ್ಯಾಟ್ ಫಿಶ್ ಕೊಳೆತ ಮಾಂಸ ತಿಂದು ಬಹು ಬೇಗ ಬೆಳೆಯುತ್ತದೆ. ಇದನ್ನು ದೇಶದಲ್ಲಿ ನಿಷೇಧ ಮಾಡಲಾಗಿದ್ದರೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಸಾಕಣೆ ಮಾಡಲಾಗುತ್ತಿದೆ.

ಅಕ್ರಮ ಕ್ಯಾಟ್​ ಫಿಶ್ ದಂಧೆ

ಜಿಲ್ಲಾ ಕೇಂದ್ರದ ಅಣತಿ ದೂರದಲ್ಲಿರುವ ಕಾರಸವಾಡಿ ಗ್ರಾಮದ ರೈತರ ಜಮೀನೊಂದರಲ್ಲಿ ನಿಷೇಧಿತ ಕ್ಯಾಟ್ ಫಿಶ್​ಗಳನ್ನು ಸಾಕಲಾಗುತ್ತಿದೆ. ಎರಡು ಎಕರೆ ಜಮೀನನ್ನು ಅನಾಮಧೇಯ ವ್ಯಕ್ತಿವೋರ್ವ ಲೀಸ್‌ಗೆ ಪಡೆದು ಮಾರಾಟಕ್ಕಾಗಿ ಇವುಗಳನ್ನು ಬೆಳೆಸುತ್ತಿದ್ದಾರೆ.

ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು. ನಿಷೇಧಿತ ಮೀನುಗಳ ವಶಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details