ನವದೆಹಲಿ: ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳನ್ನು ತಡೆಗಟ್ಟಿ, ಪಾವತಿ ವ್ಯವಸ್ಥೆಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪರ್ಯಾಯ ದೃಢೀಕರಣಕ್ಕೆ ಮುಂದಾಗಿದೆ. ಡಿಜಿಟಲ್ ಪಾವತಿಗಳಿಗೆ ಎಸ್ಎಂಎಸ್ ಆಧಾರಿತ ಒಟಿಪಿ ವ್ಯವಸ್ಥೆಯ ಕಾರ್ಯವಿಧಾನಗಳ ಕುರಿತು ಫ್ರೇಮ್ವರ್ಕ್ ಬಿಡುಗಡೆ ಮಾಡಿದೆ.
ಈ ದೃಢೀಕರಣಕ್ಕೆ ಯಾವುದೇ ನಿರ್ದಿಷ್ಟ ಅಂಶವನ್ನು ಕಡ್ಡಾಯ ಮಾಡಿಲ್ಲ. ಆದರೆ, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಎಸ್ಎಂಎಸ್ ಆಧಾರಿತ ಒಟಿಪಿಯನ್ನು ಹೆಚ್ಚುವರಿ ಅಂಶವಾಗಿ ಅಳವಡಿಸಲಾಗಿದೆ. ಈ ಒಟಿಪಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಪರ್ಯಾಯ ದೃಢೀಕರಣದ ಕಾರ್ಯವಿಧಾನವನ್ನು (ಎಎಫ್ಎ) ಲಭ್ಯಗೊಳಿಸಲಿದೆ.
ಪ್ರಮುಖ ಅಂಶಗಳು ಹೀಗಿವೆ:
ಪರ್ಯಾಯ ಕಾರ್ಯವಿಧಾನದ ಕುರಿತು ಚರ್ಚೆ: ಪರ್ಯಾಯ ದೃಢೀಕರಣದ ಕಾರ್ಯವಿಧಾನದ ಕರಡು ಕುರಿತು ಚರ್ಚೆ ಸಾಗಿದ್ದು, ಇದರಲ್ಲಿ ಪಾವತಿ ಸೂಚನೆಗೆ ಮತ್ತೊಂದು ಅಂಶದ ದೃಢೀಕರಣವನ್ನು ಒಳಗೊಂಡಿದೆ. ಇದಕ್ಕೆ ಗ್ರಾಹಕರ ರುಜುವಾತು ಪ್ರಕ್ರಿಯೆಯನ್ನು ಮೌಲ್ಯೀಕರಿಸುವ ಅಗತ್ಯವಿದೆ.
ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಒತ್ತು: ಈ ಕರಡಿನಲ್ಲಿರುವ ಇತರ ಪ್ರಮುಖ ಅಂಶದಲ್ಲಿ ಗ್ರಾಹಕರ ಸುರಕ್ಷತೆಗೆ ಕ್ರಮ ನಡೆಸಲಾಗಿದೆ. ಅದರಲ್ಲಿ ಪ್ರಮುಖವಾಗಿ ನೈಜ ಸಮಯದಲ್ಲಿ ಡಿಜಿಟಲ್ ಪಾವತಿ ನಡೆಸುವಾಗ ಗ್ರಾಹಕರನ್ನು ಎಚ್ಚರಿಕೆ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇದರ ಜೊತೆಗೆ ಡಿಜಿಟಲ್ ಪಾವತಿ ವೇಳೆ ಇತರ ಎಕ್ಸುಕ್ಲೂಸಿವ್ ವ್ಯವಸ್ಥೆ ಅಥವಾ ತಂತ್ರಜ್ಞಾನ ಸೇವಾ ಅವಕಾಶಕ್ಕೆ ಅನುಮತಿ ನೀಡುವುದನ್ನು ನಿಷೇಧಿಸುತ್ತದೆ.
ಇ- ಮ್ಯಾಂಡೇಟ್: 1 ಲಕ್ಷ ರೂ ಮತ್ತು 15 ಸಾವಿರ ರೂ ಮೇಲ್ಪಟ್ಟ ಮ್ಯೂಚುವಲ್ ಫಂಡ್ , ಇನ್ಸುರೆನ್ಸ್, ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸುವಾಗ ಇ- ಮ್ಯಾಂಡೆಟ್ (ಇ- ಆದೇಶ)ವನ್ನು ಪ್ರಸ್ತಾಪಿಸಿದೆ.
ನೈಜ ಸಮಯದಲ್ಲಿ ಎಚ್ಚರಿಕೆ ವ್ಯವಸ್ಥೆ: ಬ್ಯಾಂಕ್ ನಿಯಂತ್ರಕರು ಕೂಡ ಡಿಜಿಟಲ್ ಪಾವತಿಗಳನ್ನು ದೃಢೀಕರಣಗೊಳಿಸುವ ಪ್ರಕ್ರಿಯೆ ಮತ್ತು ತಂತ್ರಜ್ಞಾನಕ್ಕೆ ಜವಾಬ್ದಾರರಾಗಿರುತ್ತಾರೆ. ಎಲ್ಲಾ ಡಿಜಿಟಲ್ ಪಾವತಿಯಲ್ಲಿ ನೈಜ ಸಮಯದಲ್ಲಿ ಗ್ರಾಹಕರನ್ನು ಎಚ್ಚರಿಸುವ ವ್ಯವಸ್ಥೆ ಹೊಂದಿರಬೇಕು.
ಅನಿಸಿಕೆ ಅಭಿಪ್ರಾಯ ತಿಳಿಸಿಲು ಸೆ.15ರವರೆಗೂ ಕಾಲಾವಕಾಶ: ಈ ಕರಡು ಚೌಕಟ್ಟಿನ ಕುರಿತು ಕಾಮೆಂಟ್ ಮತ್ತು ಫೀಡ್ಬ್ಯಾಕ್ ಸಲ್ಲಿಕೆಗೆ 2024ರ ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. ಈ ಪ್ರಸ್ತಾವನೆ ಮೂಲಕ ಪರ್ಯಾಯ ಕಾರ್ಯವಿಧಾನದ ಮೂಲಕ ಬಳಕೆದಾರರಿಗೆ ದೃಢೀಕರಣದ ಅಂಶಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಆಯ್ಕೆ ನೀಡುವ ಗುರಿ ಹೊಂದಲಾಗಿದೆ. (ಎಎನ್ಐ)
ಇದನ್ನೂ ಓದಿ: 2023-24ರಲ್ಲಿ ದೇಶದಲ್ಲಿ 46.6 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿ: ಆರ್ಬಿಐ