ETV Bharat / business

2023-24ರಲ್ಲಿ 6 ಕೋಟಿ ಐಟಿಆರ್​ ಸಲ್ಲಿಕೆ: ಹೊಸ ತೆರಿಗೆ ವ್ಯವಸ್ಥೆಯಡಿ ಶೇ 70ರಷ್ಟು ರಿಟರ್ನ್ಸ್​ - Six crore ITRs filed

2023-24ರಲ್ಲಿ ಸುಮಾರು ಆರು ಕೋಟಿ ಐಟಿ ರಿಟರ್ನ್ಸ್​ ಸಲ್ಲಿಕೆಯಾಗಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 31, 2024, 2:44 PM IST

ನವದೆಹಲಿ: 2023-24ರಲ್ಲಿ ಸುಮಾರು ಆರು ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಅದರಲ್ಲಿ ಶೇಕಡಾ 70 ರಷ್ಟು ಹೊಸ ಸರಳೀಕೃತ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಸಲ್ಲಿಸಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಹೊಸ ಸರಳೀಕೃತ ತೆರಿಗೆ ವ್ಯವಸ್ಥೆಯು ಕಡಿಮೆ ತೆರಿಗೆ ದರ ಮತ್ತು ಕಡಿಮೆ ಕಡಿತ (ಡಿಸ್ಕೌಂಟ್​) ಗಳನ್ನು ಹೊಂದಿದೆ.

ಪಿಎಚ್​ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಬಜೆಟ್ ನಂತರದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಲ್ಹೋತ್ರಾ, ಜನರು ಸರಳೀಕೃತ ತೆರಿಗೆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಬಗ್ಗೆ ಆರಂಭದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಬಹುತೇಕ ತೆರಿಗೆದಾರರು ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡುತ್ತಿರುವುದು ಸಕಾರಾತ್ಮಕವಾಗಿದೆ ಮತ್ತು ಸರಳೀಕೃತ ವ್ಯವಸ್ಥೆಯತ್ತ ಯಶಸ್ವಿ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಲು ಪರಿಚಯಿಸಲಾದ ಹೊಸ ತೆರಿಗೆ ವ್ಯವಸ್ಥೆಯು ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ. ಆದರೆ ಕಡಿಮೆ ವಿನಾಯಿತಿಗಳು ಮತ್ತು ಕಡಿತಗಳನ್ನು ಒಳಗೊಂಡಿದೆ. ಹೊಸ ತೆರಿಗೆ ವ್ಯವಸ್ಥೆಯು ಅನುಸರಣೆ ಹೊರೆಗಳನ್ನು ಕಡಿಮೆ ಮಾಡುವ ಮತ್ತು ವ್ಯಕ್ತಿಗಳಿಗೆ ವ್ಯವಹರಿಸಲು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮಲ್ಹೋತ್ರಾ ಒತ್ತಿ ಹೇಳಿದರು. 2024-25ರ ಬಜೆಟ್​ ನಲ್ಲಿ ಘೋಷಿಸಲಾದ ಸಮಗ್ರ ಆದಾಯ ತೆರಿಗೆ ಪರಾಮರ್ಶೆಯು ತೆರಿಗೆ ಕಾನೂನನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ, ದೇಶವು ಎರಡು ವೈಯಕ್ತಿಕ ಆದಾಯ ತೆರಿಗೆ ಮಾದರಿಗಳನ್ನು ಹೊಂದಿದೆ. ಹಳೆಯ ಆದಾಯ ತೆರಿಗೆ ಮಾದರಿಯಲ್ಲಿ, ತೆರಿಗೆ ದರಗಳು ಹೆಚ್ಚಾಗಿರುತ್ತವೆ. ಆದರೆ ತೆರಿಗೆದಾರರು ವಿನಾಯಿತಿಗಳು ಮತ್ತು ಕಡಿತಗಳನ್ನು ಪಡೆಯಬಹುದು, ಇದು ತುಲನಾತ್ಮಕವಾಗಿ ಹೆಚ್ಚು ಸಂಕೀರ್ಣ ಪ್ರಕ್ರಿಯೆಯಾಗಿದೆ. ಹೊಸ ತೆರಿಗೆ ಮಾದರಿಯು ಸರಳವಾಗಿದೆ. ಇದು ತೆರಿಗೆದಾರರಿಗೆ ಕಡಿತಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಲ್ಲದೆ ಕಡಿಮೆ ತೆರಿಗೆ ದರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. 2023ರಲ್ಲಿ ಕಾರ್ಪೊರೇಟ್ ತೆರಿಗೆಯ ಶೇಕಡಾ 58 ರಷ್ಟು ಸರಳೀಕೃತ ತೆರಿಗೆ ವ್ಯವಸ್ಥೆಯಿಂದಲೇ ಬಂದಿದೆ.

ಆದಾಯ ತೆರಿಗೆ ಕಾಯ್ದೆ, 1961 ರ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಕಾಯ್ದೆಯನ್ನು ಸಂಕ್ಷಿಪ್ತ, ಸ್ಪಷ್ಟ, ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಟಿಡಿಎಸ್ ಸುಸ್ತಿದಾರರಿಗೆ ಸರ್ಕಾರವು ಎಸ್ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ನು ಜಾರಿಗೊಳಿಸಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

ಇದನ್ನೂ ಓದಿ : 23 ತಿಂಗಳಲ್ಲಿ 2 ಲಕ್ಷ ಗ್ರ್ಯಾಂಡ್ ವಿಟಾರಾ ಎಸ್​ಯುವಿ ಮಾರಾಟ - Grand Vitara SUV

ETV Bharat Logo

Copyright © 2024 Ushodaya Enterprises Pvt. Ltd., All Rights Reserved.