ಕರ್ನಾಟಕ

karnataka

ದಾವಣಗೆರೆಗೆ ಬಂತು ಸೂರಿಗಾಗಿ ಕೋಟಿ ಹೆಜ್ಜೆ ಜಾಥಾ..! ಏನಿದರ ವಿಶೇಷತೆ?

By

Published : Feb 25, 2020, 5:51 PM IST

ಕಮ್ಯುನಿಸ್ಟ್​ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸೂರಿಗಾಗಿ‌ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾವನ್ನ ದಾವಣಗೆರೆ ನಗರದಲ್ಲಿ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.

soorigagi-koti-hejje-walking-jatha-coming-in-davanagere
ದಾವಣಗೆರೆಗೆ ಬಂದ ಸೂರಿಗಾಗಿ ಕೋಟಿ ಹೆಜ್ಜೆ ಜಾಥಾ..!

ದಾವಣಗೆರೆ :ಕಮ್ಯುನಿಸ್ಟ್​ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸೂರಿಗಾಗಿ‌ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾದ ಮೆರವಣಿಯನ್ನು ನಗರದಲ್ಲಿ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳ್ಳಾರಿಯಿಂದ ಆರಂಭವಾದ ಈ ಜಾಥಾ 900 ಕ್ಕಿಂತ ಹೆಚ್ಚು ಕಿ. ಮೀ. ದೂರದವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಸೂರಿಗಾಗಿ ಸಮರದ ಸಮಾವೇಶ ನಡೆಸಲಾಯಿತು. ನಿವೇಶನ ಇಲ್ಲದ ನಿರ್ಗತಿಕರಿಗೆ ನಿವೇಶನ ಕೊಡಿಸುವ ಉದ್ದೇಶ ಈ ಕಾಲ್ನಡಿಗೆ ಜಾಥಾದ ಮುಖ್ಯ ಧ್ಯೇಯವಾಗಿದೆ.

ದಾವಣಗೆರೆಗೆ ಬಂದ ಸೂರಿಗಾಗಿ ಕೋಟಿ ಹೆಜ್ಜೆ ಜಾಥಾ..!

ಇದೇ ತಿಂಗಳ 31 ರಂದು ಜಾಥಾ ಬೆಂಗಳೂರು ತಲುಪಲಿದ್ದು, ಸೂರಿಗಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐನ ತಾಲೂಕು ಕಾರ್ಯದರ್ಶಿ ಅವರಗೆರೆ ವಾಸು ತಿಳಿಸಿದರು.

ABOUT THE AUTHOR

...view details